ನವದೆಹಲಿ: 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize) ಘೋಷಣೆಯಾಗಿದ್ದು, ಮಾರಿಯಾ ಕೊರಿನಾ ಮಚಾದೋ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೆನೆಜುವೆಲಾದ (Venezuela) ಜನರ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ಮತ್ತು ಶಾಂತಿಗಾಗಿ ನಡೆಸಿದ ಹೋರಾಟಕ್ಕಾಗಿ ಮಾರಿಯಾ ಕೊರಿನಾ ಮಚಾದೋ (María Corina Machado) ಅವರಿಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ನಾರ್ವೆಯ ನೊಬೆಲ್ ಸಮಿತಿಯು ತಿಳಿಸಿದೆ.
2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಗೆ 244 ವ್ಯಕ್ತಿಗಳ ಹೆಸರು ನಾಮಿನೇಟ್ ಆಗಿದ್ದರೆ, 94 ಸಂಘಟನೆಗಳ ಹೆಸರು ಸೇರಿ 338 ಹೆಸರುಗಳನ್ನು ಪಟ್ಟಿ ಮಾಡಲಾಗಿತ್ತು. ಅಂತಿಮವಾಗಿ ಆಯ್ಕೆ ಸಮಿತಿ ವೆನೆಜುವೆಲಾದ ವಿಪಕ್ಷ ನಾಯಕಿ ಕೂಡ ಆಗಿರುವ ಮಾರಿಯಾ ಕೊರಿನಾ ಮಚಾದೋ ಅವರನ್ನು ಆಯ್ಕೆ ಮಾಡಿದೆ. ಇದನ್ನೂ ಓದಿ: ಟ್ರಂಪ್‌ಗೆ ಭಾರೀ ಮುಖಭಂಗ – ವೆನೆಜುವೆಲಾದ ವಿಪಕ್ಷ ನಾಯಕಿಗೆ ಶಾಂತಿ ನೊಬೆಲ್
ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮಾರಿಯಾ ಕೊರಿನಾ ಮಚಾದೋ ಆಯ್ಕೆದಿಂದಾಗಿ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ. ಈವರೆಗೂ ಭಾರತ ಪಾಕಿಸ್ತಾನ ಸೇರಿ ಎಂಟು ಯುದ್ಧಗಳನ್ನ ನಿಲ್ಲಿಸಿದ್ದ ಜಾಗತಿಕ ಶಾಂತಿಗಾಗಿ ಕೆಲಸ ಮಾಡಿದ್ದೇನೆ ನನಗೆ ಶಾಂತಿ ಪುರಸ್ಕಾರ ಕೊಡಲೇಬೇಕು ಎಂದು ಹೇಳಿದ್ದರು. ಒಂದು ವೇಳೆ ನೊಬೆಲ್ ಶಾಂತಿ ಪುರಸ್ಕಾರ ನೀಡದಿದ್ದರೆ ಅಮೆರಿಕಾದ ಜನರಿಗೆ ಮಾಡಿದ ಅಪಮಾನ ಎಂದು ತಿಳಿಸಿದ್ದರು.
ಟ್ರಂಪ್‌ಗೆ ಬೆಂಬಲ ನೀಡಿದ್ದ ರಷ್ಯಾ, ಪಾಕಿಸ್ತಾನ
ಇಂದು ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬರಾಕ್ ಒಬಾಮಾ ಅಧ್ಯಕ್ಷರಾದ ಕೆಲವೇ ತಿಂಗಳಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು. ಅವರು ಏನೂ ಮಾಡದೆ, ನಮ್ಮ ದೇಶವನ್ನು ನಾಶಗೊಳಿಸಿದ್ದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು. ಆದರೆ, ನಾನು ಎಂಟು ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ ಎಂದು ಹೇಳುವ ಮೂಲಕ ಒತ್ತಡ ಹೇರುವ ಪ್ರಯತ್ನ ಮಾಡಿದ್ದರು. ಈ ನಡುವೆ ರಷ್ಯಾ, ಪಾಕಿಸ್ತಾನ ಎರಡು ದೇಶಗಳು ಟ್ರಂಪ್‌ಗೆ ಬೆಂಬಲವನ್ನು ನೀಡಿದ್ದವು. ಇದನ್ನೂ ಓದಿ: ಕಾಬೂಲ್ ರಾಯಭಾರ ಕಚೇರಿ 4 ವರ್ಷದ ಬಳಿಕ ಪುನಾರಂಭಕ್ಕೆ ಭಾರತ ನಿರ್ಧಾರ – ಎಸ್.ಜೈಶಂಕರ್ ಘೋಷಣೆ
ಯಾರು ಈ ಮರಿಯಾ ಕೊರಿನಾ ಮಚಾದೊ?
* ಸದ್ಯ ವಿರೋಧ ಪಕ್ಷದ ನಾಯಕಿಯೂ ಆಗಿರುವ ಮಚಾದೋ ವೆನೆಜುವೆಲಾದ ಪ್ರಜಾಪ್ರಭುತ್ವ ಪರ ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.
* ಮಡುರೊ ಅವರ ಸರ್ವಾಧಿಕಾರಿ ಆಡಳಿತವನ್ನು ಧಿಕ್ಕರಿಸಿ ಹೋರಾಟ ನಡೆಸಿದರು.
* ಅವರು ಬೆದರಿಕೆಗಳನ್ನು ಎದುರಿಸಿದ್ದಲ್ಲದೆ, ಬಂಧನಕ್ಕೊಳಗಾಗಿದ್ದಾರೆ. ಪ್ರಯಾಣ ನಿಷೇಧ ಮತ್ತು ರಾಜಕೀಯ ಕಿರುಕುಳವನ್ನು ಎದುರಿಸಿದ್ದಾರೆ.
* ಅಪಾಯಗಳ ಹೊರತಾಗಿಯೂ, ವೆನೆಜುವೆಲಾದಲ್ಲಿಯೇ ಉಳಿದರು. ಅವರಿಗೆ ‘ಐರನ್ ಲೇಡಿ’ ಎಂದು ಕರೆಯಲಾಗುತ್ತದೆ.
* ವೆನೆಜುವೆಲಾದ ಜನರಿಗೆ ಪ್ರಜಾಪ್ರಭುತ್ವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಮಚಾದೋ ಅವರ ಪಾತ್ರ ಗಣನೀಯ.
* ನ್ಯೂಯಾರ್ಕ್ ಟೈಮ್ಸ್‌ನಲ್ಲಿ ವರ್ಷದ ಪ್ರಭಾವಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ.
* ಸರ್ವಾಧಿಕಾರದಿಂದ ಪ್ರಜಾಪ್ರಭುತ್ವಕ್ಕೆ ನ್ಯಾಯಯುತ ಮತ್ತು ಶಾಂತಿಯುತ ಪರಿವರ್ತನೆಯನ್ನು ಸಾಧಿಸುವ ಹೋರಾಟಕ್ಕಾಗಿ ಅವರನ್ನು ಗುರುತಿಸಲಾಗಿದೆ.
* ಬೆಳೆಯುತ್ತಿರುವ ಕತ್ತಲೆಯ ಸಮಯದಲ್ಲಿ ಪ್ರಜಾಪ್ರಭುತ್ವದ ಜ್ವಾಲೆಯನ್ನು ಉರಿಯುವಂತೆ ಮಾಡುವ ಶಾಂತಿಯ ಧೈರ್ಯಶಾಲಿ ಮತ್ತು ಬದ್ಧತೆಯ ಪ್ರತಿಪಾದಕಿ ಮಚಾದೋ ಎಂದು ಆಯ್ಕೆ ಸಮಿತಿಯು ಶ್ಲಾಘಿಸಿದೆ.