ಮುಂಬೈ: ವಿಧಾನಸಭೆ ಚುನಾವಣೆ (Assembly Election) ಫಲಿತಾಂಶದ ಕುರಿತು ಕೆಲವರು ಇವಿಎಂ ಮಷಿನ್‌ಗಳನ್ನು (EVM Machine) ದೂಷಿಸಿದರೆ ಆಶ್ಚರ್ಯವಿಲ್ಲ ಎಂದು ಮಹಾರಾಷ್ಟ್ರ (Maharashtra) ಉಪ ಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಹೇಳಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರೆದಿದ್ದು, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ (BJP) ಅಧಿಕಾರದ ಚುಕ್ಕಾಣಿ ಹಿಡಿಯಲು ತುದಿಗಾಲಿನಲ್ಲಿ ನಿಂತಿದೆ. ಇನ್ನು ತೆಲಂಗಾಣದಲ್ಲಿ (Telangana) ಕಾಂಗ್ರೆಸ್ (Congress) ಭಾರೀ ಮುನ್ನಡೆ ಸಾಧಿಸಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಜಿತ್ ಪವಾರ್, ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕಾರ್ಯವನ್ನು ಜನ ಮೆಚ್ಚುತ್ತಿದ್ದಾರೆ. ಇಂಡಿಯಾ (INDIA) ಮೈತ್ರಿಕೂಟದ ಜನರು ಫಲಿತಾಂಶಗಳಿಗಾಗಿ ಇವಿಎಂಗಳನ್ನು (ವಿದ್ಯುನ್ಮಾನ ಮತಯಂತ್ರಗಳು) ದೂಷಿಸಲು ಪ್ರಾರಂಭಿಸಿದರೆ ಆಶ್ಚರ್ಯವಿಲ್ಲ ಎಂದರು. ಇದನ್ನೂ ಓದಿ: ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯವಿಲ್ಲ: ಸಂಸದ ಮುನಿಸ್ವಾಮಿ
Advertisement
Advertisement
ನಾನು ಹಿಂದೆ ಸರ್ಕಾರದಲ್ಲಿದ್ದಾಗ, ಇವಿಎಂಗಳನ್ನು ತಿದ್ದುಪಡಿ ಮಾಡುವುದು ಅಸಾಧ್ಯ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಕೇವಲ ಒಬ್ಬ ವ್ಯಕ್ತಿ ಇವಿಎಂಗಳನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಈ ಮೂರು ರಾಜ್ಯಗಳಲ್ಲಿ (ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ) ಇವಿಎಂಗಳನ್ನು ದೂಷಿಸಿದರೆ, ತೆಲಂಗಾಣದ ಬಗ್ಗೆ ಏನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: RSS, ABVP ಕಾರ್ಯಕರ್ತ ರೇವಂತ್ ರೆಡ್ಡಿ ಈಗ ಕಾಂಗ್ರೆಸ್ ಸಿಎಂ ರೇಸ್‌ನಲ್ಲಿ – ತೆಲಂಗಾಣಕ್ಕೆ ಸಿಎಂ ಯಾರು?
Advertisement
ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಣ ಮತ್ತು ಅವರ ಕಾರ್ಯವನ್ನು ಜನ ಮೆಚ್ಚುತ್ತಿದ್ದಾರೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿ ಬಿಆರ್‌ಎಸ್ (BRS) ಹಿಂದೆ ಬಿದ್ದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬಿಆರ್‌ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrashekar Rao) ಅತಿಯಾದ ಆತ್ಮವಿಶ್ವಾಸವನ್ನು ತೋರಿಸಿದ್ದು, ತಮ್ಮ ಪಕ್ಷದ ನೆಲೆಯ ವಿಸ್ತರಣೆಗಾಗಿ ಮಹಾರಾಷ್ಟ್ರಕ್ಕೆ ಬಂದಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ
Advertisement
ಚಂದ್ರಶೇಖರ್ ರಾವ್ ತಮ್ಮ ರಾಜ್ಯದಲ್ಲಿ ಬೃಹತ್ ರ‍್ಯಾಲಿಗಳನ್ನು ನಡೆಸಿದರು ಮತ್ತು ಹಲವಾರು ಭರವಸೆಗಳನ್ನು ನೀಡಿದರು. ಆದರೆ ಅವರನ್ನು ಅವರ ಸ್ವಂತ ರಾಜ್ಯವೇ ತಿರಸ್ಕರಿಸಿದೆ. ಜನರ ತೀರ್ಮಾನವೇ ಸರ್ವೋಚ್ಚ ಎಂದರು. ಇದನ್ನೂ ಓದಿ: ದೇಶಾದ್ಯಂತ ಜಾತಿ ಗಣತಿಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಬಿಗ್ ಶಾಕ್