ಬೆಳಗಾವಿ: ಉದ್ಯಾನವನ ಅಂದ್ಮೇಲೆ ಅಲ್ಲಿ ಪ್ರೇಮಿಗಳು ಇದ್ದೇ ಇರ್ತಾರೆ. ಪ್ರೇಮಿಗಳು ಸಾಮಾನ್ಯವಾಗಿ ಪಾರ್ಕ್‍ಗಳಿಗೆ ಹೋಗ್ತಾರೆ. ಆದ್ರೆ ಗಡಿನಾಡಿನ ಪಾರ್ಕ್‍ನಲ್ಲಿ ಇಂಥಹ ಪ್ರೇಮಿಗಳ ಪ್ರವೇಶವನ್ನ ಬ್ಯಾನ್ ಮಾಡಲಾಗಿದೆ. ಜೊತೆಯಾಗಿ ಹೋದರೆ ಪ್ರೇಮಿಗಳಿಗೆ ಇಲ್ಲಿ ನೋ ಎಂಟ್ರಿ.
ಬೆಳಗಾವಿಯ ಪ್ರಸಿದ್ಧ ಕೋಟೆ ಕೆರೆ ಉದ್ಯಾನವನದಲ್ಲಿ ಪ್ರೇಮಿಗಳ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಹೀಗೆ ಪಾರ್ಕ್‍ನಲ್ಲಿ ಪ್ರೇಮಿಗಳಿಗೆ ಬ್ಯಾನ್ ಮಾಡೋಕೆ ಅವರ ಉಪಟಳವೇ ಕಾರಣವಂತೆ.
Advertisement
ಕಾಲೇಜುಗಳಿಗೆ ಚಕ್ಕರ್ ಹಾಕಿ ಪಾರ್ಕ್‍ನಲ್ಲಿ ದಿನ ಕಳೆಯುವ ಹದಿಹರೆಯದ ಯುವಕ ಯುವತಿಯರಿಂದ ಸಾರ್ವಜನಿಕರು ಮುಜುಗರ ಪಡುತ್ತಿದ್ದರು. ಅಲ್ಲದೇ ಕಿರಿಕಿರಿ ಅನುಭವಿಸ್ತಿದ್ರು. ಹೀಗಾಗಿ ಹುಡುಗ-ಹುಡುಗಿ ಜತೆಯಾಗಿ ಪಾರ್ಕ್‍ಗೆ ಬಂದ್ರೆ ಗೇಟ್‍ನಲ್ಲಿ ನೋ ಎಂಟ್ರಿ. ಇದ್ರಿಂದ ಸಂಸಾರ ಸಮೇತ ಬರುವವರಿಗೆ ನೆಮ್ಮದಿಯ ವಾತಾವರಣ ನಿರ್ಮಾಣವಾಗಿದೆ ಅಂತ ವಾಯುವಿಹಾರಿಗಳು ಹೇಳುತ್ತಾರೆ.
Advertisement
Advertisement
ಈ ಪಾರ್ಕ್‍ನಲ್ಲಿ ಪುಂಡರ ಹಾವಳಿಯೂ ಹೆಚ್ಚಾಗಿತ್ತು. ಪ್ರೇಮಿಗಳನ್ನ ಸುಲಿಗೆ ಮಾಡೋಕೆ ಅಂತಾನೇ ಪುಂಡರು ಗ್ಯಾಂಗ್ ಕಟ್ಟಿಕೊಂಡು ಬರ್ತಿದ್ರು. ಜೊತೆಗೆ ಕೋಟೆ ಕೆರೆಯಲ್ಲಿ ಮಾದಕ ವಸ್ತಗಳನ್ನ ಮಾರ್ತಿದ್ರು. ಹೀಗಾಗಿ ಪ್ರೇಮಿಗಳು ಹಾಗೂ ಸಾರ್ವಜನಿಕರಿಗೂ ತೊಂದರೆಯಾಗಬಾರದೆಂದು ನಿಷೇಧ ಹೇರಿರೋದಾಗಿ ಪಾರ್ಕ್ ನಿರ್ವಹಣಾಧಿಕಾರಿ ಹೇಳಿದ್ದಾರೆ.
Advertisement
ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಪಾರ್ಕ್‍ಗೆ ಹುಡುಗ ಹುಡುಗಿ ಜೊತೆಯಾಗಿ ಹೋಗುವಂತಿಲ್ಲ. ಇದ್ರಿಂದ ಕಾಲೇಜ್ ಬಂಕ್ ಮಾಡೋದು ತಪ್ಪುತ್ತೆ ಅಂತಿದ್ದಾರೆ. ಒಟ್ಟಿನಲ್ಲಿ ಪಾರ್ಕ್‍ನಲ್ಲಿ ಪ್ರೇಮಿಗಳಿಗೆ ನಿಷೇಧ ಮಾಡಿದ್ದಕ್ಕೆ ಸಾರ್ವಜನಿಕರೇನೋ ಖುಷಿಯಾಗಿದ್ದಾರೆ. ಆದ್ರೆ ಹದಿಹರೆಯದ ಪ್ರೇಮಿಗಳ ಕಣ್ಣು ಮಾತ್ರ ಕೆಂಪಾಗಿದೆ.