ಬೆಂಗಳೂರು: ಕಾಯಿಲೆ ವಾಸಿಯಾಗಲಿ ಎಂದು ಜನ ಆಸ್ಪತ್ರೆಗೆ ಹೋಗುತ್ತಾರೆ. ಆದರೆ ಈ ಆಸ್ಪತ್ರೆಗೆ ಹೋದರೆ ರೋಗ ವಾಸಿಯಾಗೋದು ಇರಲಿ ಇನ್ನೂ ಹೊಸ ರೋಗ ಬರೋದು ಗ್ಯಾರೆಂಟಿ.
Advertisement
ಹೌದು. ಬೆಂಗಳೂರಿನ ಇಂದಿರಾ ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಕಳೆದ ರಾತ್ರಿಯಿಂದ ಬಾತ್ ರೂಂಗಳಲ್ಲಿ ನೀರು ಬರುತ್ತಿಲ್ಲ ಅಂತಾ ಪಬ್ಲಿಕ್ ಟಿವಿಗೆ ಕರೆ ಬಂದಿತ್ತು. ಯಾಕೆ ಅಂತಾ ಚೆಕ್ ಮಾಡಲು ಹೋದ ಪಬ್ಲಿಕ್ ಟಿವಿಯ ಪ್ರತಿನಿಧಿಯನ್ನು ಅಲ್ಲಿನ ಸೆಕ್ಯುರಿಟಿ ಆಸ್ಪತ್ರೆಯ ಒಳಗಡೆ ಹೋಗಲು ಬಿಡದೆ ಪರ್ಮಿಶನ್ ತಗೆದುಕೊಂಡು ಬನ್ನಿ ಅಂತಾ ಆವಾಜ್ ಹಾಕಿದ್ದಾನೆ. ಕೊನೆಗೆ ಒಳಗೆ ಹೋಗಿ ನೋಡಿದಾಗ ಅಲ್ಲಿನ ನಿಜ ಬಣ್ಣ ಹೊರಬಂದಿದೆ.
Advertisement
Advertisement
ಇಎಸ್‍ಐ ಆಸ್ಪತ್ರೆಗೆ ಹೆರಿಗೆಗೆ ಬಂದಿರೋ ಮಹಿಳೆಯರು ಅಕ್ಷರಶಃ ನರಕವನ್ನು ಅನುಭವಿಸಿದ್ದಾರೆ. ಯಾಕೆಂದರೆ ಶನಿವಾರ ರಾತ್ರಿಯಿಂದ ಆಸ್ಪತ್ರೆಯ ಶೌಚಾಲಯಗಳಲ್ಲಿ ನೀರು ಬರುತ್ತಿಲ್ಲ. ನೀರಿಲ್ಲದೆ ಗರ್ಭಿಣಿಯರು ಮೂತ್ರ ವಿಸರ್ಜನೆ ಮಾಡದೆ ನರಕ ಅನುಭವಿಸಿದ್ದಾರೆ. ಜೊತೆಗೆ ಟಾಯ್ಲೆಟ್ ನಿಂದ ಬರುತ್ತಿರುವ ದುರ್ನಾತದಿಂದ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ.
Advertisement
ಯಾಕೆ ಅಂತಾ ಅಲ್ಲಿನ ಸಿಬ್ಬಂದಿಯನ್ನು ಕೇಳಿದರೆ ಬಿಬಿಎಂಪಿ ಅವರು ನೀರು ಬಿಟ್ಟಿಲ್ಲ ನಾವೇನು ಮಾಡೋದು ಅಂತಾರೆ. ನಿಮ್ಮ ಮನೆಯಲ್ಲೂ ಹಿಂಗ್ ಆದರೆ ಏನು ಮಾಡುತ್ತಿರಾ? ಅಂದರೆ ನಮ್ಮ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಅಂತಾ ಹೇಳಿ ಜಾರಿಕೊಳ್ಳುತ್ತಾರೆ.
ಇನ್ನು ಡ್ಯೂಟಿ ಡಾಕ್ಟರ್ಸ್ ಕೇಳಿದರೆ ಯಾವುದೋ ಪೈಪ್ ಒಡೆದಿದೆ. ಯಾವುದು ಅಂತಾ ಗೊತ್ತಾಗುತ್ತಿಲ್ಲ. ಈಗ ನೀರಿನ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ಆರೋಗ್ಯದಲ್ಲಿ ಏನಾದರು ಸಮಸ್ಯೆ ಆದರೆ ಒಂದೇ ಸರಿ ದುಡ್ಡು ಹೊಂದಿಸೋದು ಕಷ್ಟ ಆಗುತ್ತೆ ಅಂತಾ ಪ್ರತಿ ತಿಂಗಳ ಸಂಬಳದಲ್ಲಿ ಕಾರ್ಮಿಕರು ಇಎಸ್‍ಐ ಕಟ್ಟಿ ಈಗ ಉಪಯೋಗಕ್ಕೆ ಬರುತ್ತದೆ ಅಂತಾ ಆಸ್ಪತ್ರೆಗೆ ಹೋದರೆ ಅಲ್ಲಿನ ಸ್ಥಿತಿ ಹೀಗಿದೆ.