ಚಿತ್ರದುರ್ಗ: ಸತತ ಒಂದು ತಿಂಗಳಿಂದ ಮತದಾರರಲ್ಲಿ ಮತಭಿಕ್ಷೆ ಕೇಳಿದ್ದ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಆರು ಜನ ಅಭ್ಯರ್ಥಿಗಳಿಗೆ ಮತದಾನದ ಭಾಗ್ಯವೇ ಇಲ್ಲವಾಗಿದೆ.
ಸಮಯದ ಅಭಾವ, ಕ್ಷೇತ್ರ ಬದಲಾವಣೆ ಹಾಗು ಅಭ್ಯರ್ಥಿಗಳು ಮತ್ತೊಂದೆಡೆ ನೆಲೆಸಿರೋದು ಇದಕ್ಕೆ ಪ್ರಮುಖ ಕಾರಣವಾಗಿದ್ದೂ, ತಮ್ಮ ಗೆಲುವಿಗಾಗಿ ಮತದಾರ ಪ್ರಭುಗಳ ಮನವೊಲಿಸಿ ತಪ್ಪದೇ ಮತ ಹಾಕುವಂತೆ ಒತ್ತಾಯಿಸುವಲ್ಲಿ ಬ್ಯುಸಿಯಾಗಿದ್ದ ಅಭ್ಯರ್ಥಿಗಳೇ ತಮ್ಮ ಮತದಾನದ ಹಕ್ಕನ್ನು ಮರೆತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!
Advertisement
ಚಳ್ಳಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಅವರ ಮತವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಸಮಯದ ಅಭಾವದ ಕಾರಣ ಮತ ಚಲಾವಣೆ ಮಾಡಲಾಗಿಲ್ಲ. ಚಿತ್ರದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಸಿ.ವೀರೇಂದ್ರ ಪಪ್ಪಿ ಮತವು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಅಭ್ಯರ್ಥಿ ಹನುಮಲಿ ಷಣ್ಮುಖಪ್ಪ ದೊಡ್ಡಬಳ್ಳಾಪುರ ಮತಕ್ಷೇತ್ರದ ಮತದಾರರಾಗಿರೋದ್ರಿಂದ ಇಬ್ಬರೂ ಮತದಾನದಿಂದ ದೂರ ಉಳಿದಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಲ್ಲಿ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ!
Advertisement
ಹಿರಿಯೂರಿನ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಅವರು ಬೆಂಗಳೂರಿನ ಕೆ.ಆರ್ ಪುರಂ ನಿವಾಸಿಯಾಗಿದ್ದು, ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ಹಾಗು ಮಾಜಿ ಸಚಿವ ಡಿ.ಸುಧಾಕರ್ ಕೂಡ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿದ್ದ ಅವರ ಮತವನ್ನು ಚಲಾವಣೆ ಮಾಡುವಲ್ಲಿ ವಿಫಲರಾಗಿದ್ದು, ಹೊಳಲ್ಕೆರೆ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಚಂದ್ರಪ್ಪ ಕೂಡ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿರೋ ಅವರ ಮತವನ್ನು ಹಾಕಲು ಮರೆತಿದ್ದಾರೆ. ಇದನ್ನೂ ಓದಿ: ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ತುಂಬು ಗರ್ಭಿಣಿ!
Advertisement
ಹೊಸದುರ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಟ ಶಶಿಕುಮಾರ್ ಸಹ ಬೆಂಗಳೂರಿನ ರಾಜಾಜೀನಗರದ ನಿವಾಸಿಯಾಗಿದ್ದು, ಮತ ಹಾಕುವ ಅವಕಾಶದಿಂದ ವಂಚಿತರಾಗಿದ್ದಾರೆ. ಮತ ಚಲಾವಣೆ ನಮ್ಮ ಹಕ್ಕೆಂದು ಚುನಾವಣಾ ಆಯೋಗ ನಿರಂತರವಾಗಿ ಜಾಗೃತಿ ಮೂಡಿಸಿದ್ದರೂ ಸಹ ಮತ ಕೇಳಿ ಹಾಕಿಸುವ ಅಭ್ಯರ್ಥಿಗಳೇ ತಮ್ಮ ಮತ ಹಾಕುವ ಹಕ್ಕನ್ನು ಮರೆತಿರೋದು ವಿಪರ್ಯಾಸವೇ ಸರಿ. ಇದನ್ನೂ ಓದಿ: ಹೆರಿಗೆ ನೋವಲ್ಲೂ ವೋಟ್ ಮಾಡಿ ಮಗುವಿಗೆ ಜನ್ಮ ನೀಡಿದ ತಾಯಿ