ನವದೆಹಲಿ: ಮಾಲಿನ್ಯವನ್ನ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ಹಲವು ನಿರ್ದೇಶನಗಳನ್ನ ನೀಡಿದೆ. ವಾಹನ ಮಾಲೀಕರು ಪೊಲ್ಯೂಷನ್ ಅಂಡರ್ ಕಂಟ್ರೋಲ್(ಪಿಯುಸಿ) ಸರ್ಟಿಫಿಕೇಟ್ ನೀಡದಿದ್ರೆ ಇನ್ಶುರೆನ್ಸ್ ಕಂಪೆನಿಗಳು ಇನ್ಮುಂದೆ ಇನ್ಶುರೆನ್ಸ್ ನವೀಕರಣ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಾಷ್ಟ್ರ ರಾಜಧಾನಿಯ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ಪಿಯುಸಿ ಸೆಂಟರ್‍ಗಳು ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಮದನ್ ಬಿ ಲೊಕುರ್ ನೇತೃತ್ವದ ಪೀಠ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯುಕ್ಕೆ ಸೂಚಿಸಿದೆ.
Advertisement
ರಾಷ್ಟ್ರರಾಜಧಾನಿಯಲ್ಲಿ ವಾಹನ ಸವಾರರು ಪಿಯುಸಿ ಸರ್ಟಿಫಿಕೇಟ್ ಹೊಂದಿರುವಂತೆ ಮಾಡಲು ಪಿಯುಸಿ ಸೆಂಟರ್‍ಗಳು ಕಾರ್ಯಗತವಾಗಿರುವಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ 4 ವಾರಗಳ ಗಡುವು ನೀಡಿದೆ.
Advertisement
Advertisement
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಸಲಹೆಯ ಮೇರೆಗೆ ಕೋರ್ಟ್ ಈ ಆದೇಶ ನೀಡಿದೆ. ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪರಿಸರವಾದಿ ಎಂಸಿ ಮೆಹ್ತಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರರಣೆ ವೇಳೆ ಪೀಠ ಈ ಆದೇಶ ನೀಡಿದೆ.
Advertisement
Air Pollution Matter: SC directs Central Govt to make a database of vehicles across India; asks govt to file a reply within four weeks. pic.twitter.com/s3MudPgw6p
— ANI (@ANI) August 10, 2017