ಚಿತ್ರದುರ್ಗ: ಬಯಲು ಮುಕ್ತ ಶೌಚಾಲಯ ಆಗ್ಬೇಕು ಅನ್ನೋದು ಸರ್ಕಾರದ ಆಶಯ. ಆದ್ರೆ ಸರ್ಕಾರಿ ಶಾಲಾ-ಕಾಲೇಜಿನಲ್ಲೇ ವಿದ್ಯಾರ್ಥಿನಿಯರು ಶೌಚಾಲಯಕ್ಕಾಗಿ ಬಯಲನ್ನೇ ಆಶ್ರಯಿಸಬೇಕಾದ ಶೋಚನೀಯ ಸ್ಥಿತಿ ಎದುರಾಗಿದೆ.
ಹೌದು. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಯರಬಳ್ಳಿ ಗ್ರಾಮದ ಶಾಲಾ-ಕಾಲೇಜಿನಲ್ಲಿ ಶಾಲೆ ಇರುವ ಎಲ್ಲಾ ದಿನಗಳಲ್ಲೂ ಇಲ್ಲಿನ ವಿದ್ಯಾರ್ಥಿನಿಯರಿಗೆ ಈ ಕಿರಿಕಿರಿ ತಪ್ಪಿದಲ್ಲಾ. ಪ್ರೌಢ ಶಾಲೆ ಹಾಗೂ ಕಾಲೇಜು ವತಿಯಿಂದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಹೆಣ್ಣು ಮಕ್ಕಳಿಗೆ ಇರೋ ಶೌಚಾಲಯ ವಿದ್ಯಾರ್ಥಿನಿಯರಿಗೆ ಸಾಕಾಗೋದಿಲ್ಲಾ. ಅಲ್ಲದೆ ನೀರಿನ ಸಮಸ್ಯೆಯಿಂದ ಅಲ್ಲಿನ ಸ್ವಚ್ಛತೆಯೂ ಹಾಳಾಗಿದೆ. ಇದ್ರಿಂದ ಹೆಣ್ಣು ಮಕ್ಕಳು ಆ ಶೌಚಾಲಯದ ಒಳಗೆ ಹೋಗಲು ಹಿಂದೇಟು ಹಾಕ್ತಾರೆ.
Advertisement
ಪ್ರತಿ ನಿತ್ಯ ವಿದ್ಯಾರ್ಥಿನಿಯರು ಶಾಲೆ ಆವರಣದ ಹೊರಗೆ ಅಂದ್ರೆ ಬೇಲಿ, ಪೇದೆಗಳ ನಡುವೆ ಹೋಗಿ ತಮ್ಮ ಕೆಲಸ ಮುಗಿಸಿಕೊಂಡು ಬರಬೇಕು. ಕೆಲವೊಂದು ಬಾರಿ ಅಕ್ಕಪಕ್ಕದ ಹೊಲಗಳ ಮಾಲೀಕರಿಂದ ವಿದ್ಯಾರ್ಥಿನಿಯರು ಬೈಗುಳದ ಅವಮಾನಕ್ಕೆ ಗುರಿಯಾಗಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಇರೋ ವಿದ್ಯಾರ್ಥಿನಿಯರಿಗೆ ಹೆಚ್ಚುವರಿ ಶೌಚಾಲಯ ನಿರ್ಮಾಣ ಮಾಡ್ಬೇಕು. ಅದಕ್ಕೂ ಮೊದಲು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈಗಾಗಲೇ ಈ ಸಂಬಂಧ ಶಿಕ್ಷಣ ಇಲಾಖೆಯ ಕ್ರಮಕೈಗೊಳ್ಳಲಿದೆ ಅಂತಾ ಇಲ್ಲಿನ ಶಿಕ್ಷಕ ವರ್ಗ ಹೇಳಿದೆ.
Advertisement
ಒಟ್ಟಿನಲ್ಲಿ ಹೆಣ್ಣು ಮಕ್ಕಳ ಮಾನ, ಪ್ರಾಣಕ್ಕೆ ರಕ್ಷಣೆಗೆ ಹೆಚ್ಚಿನ ಆದ್ಯತೆ ಕೊಡ್ತೀವಿ ಅನ್ನೋ ಸರ್ಕಾರ ತಮ್ಮದೇ ಸರ್ಕಾರಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಮಾನ ಹರಾಜಾಗ್ತಾ ಇದ್ರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲಾ. ಇನ್ನಾದ್ರೂ ಸಂಬಂಧಪಟ್ಟವರು ಗಮನ ಹರಿಸಿ ಬಯಲು ಮುಕ್ತ ಶೌಚಾಲಯಕ್ಕೆ ಬ್ರೇಕ್ ಹಾಕಬೇಕಿದೆ.