ಎಷ್ಟೋ ವರ್ಷಗಳಿಂದ ಜಾಗತಿಕ ಪಾರಂಪರಿಕ ಶುದ್ಧ ಶಕ್ತಿಗಳಾದ ಹೊಂದಿರುವ ಸೂರ್ಯಶಕ್ತಿ, ಗಾಳಿಶಕ್ತಿಯ ಮೇಲೆ ಅವಲಂಬಿತವಾಗಿದ್ದೇವೆ. ಜಪಾನ್‌ನಲ್ಲಿ ಇತ್ತೀಚೆಗೆ ಉದ್ಭವಿಸಿರುವ ಉಪ್ಪು ನೀರು ಬಳಸಿ ಆಸ್ಮೋಟಿಕ್ ಶಕ್ತಿ (Osmotic Power) ಎಂಬ ಹೊಸ ಅಲೆಯನ್ನೇ ಸೃಷ್ಟಿಸುತ್ತದೆ.
ಈ ಹೊಸ ವಿಧಾನವು ಗಾಳಿಯಿಲ್ಲದೆ, ಬೆಳಕಿಲ್ಲದೆ, ನೀರಿನ ರೂಪಾಂತರದಿಂದ ಮಾತ್ರ ಶಕ್ತಿ ಉತ್ಪಾದನೆಯನ್ನು ಮಾಡುತ್ತದೆ. ಇತ್ತೀಚೆಗೆ ಭಾರತದಲ್ಲಿ ಸೌರ ಶಕ್ತಿಯ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ. ಆದರೆ ಜಪಾನ್ (Japan) ದೇಶವು ಇವೆಲ್ಲವನ್ನು ಬಿಟ್ಟು ಉಪ್ಪು ನೀರಿನಿಂದ ವಿದ್ಯುತ್ ಅನ್ನ ಉತ್ಪಾದಿಸುವ ವಿನೂತನ ಪ್ರಯೋಗಕ್ಕೆ ಕೈ ಹಾಕಿದೆ. ಇದನ್ನು ಸಾಗರ ಶಕ್ತಿ ಎಂದೂ ಸಹ ಕರೆಯಲಾಗುತ್ತದೆ.
ಈ ಆಸ್ಮೋಟಿಕ್ ಶಕ್ತಿ ಅನ್ನು ಜಪಾನ್‌ನ ಫುಕೋಓಕಾ ನಗರದಲ್ಲಿ 2025ರಲ್ಲೇ ಪ್ರಾರಂಭ ಮಾಡಲಾಗಿದೆ. ಇದು ಏಷ್ಯಾದಲ್ಲಿ ಮೊದಲ ಜಗತ್ತಿನಲ್ಲಿ ಎರಡನೇ ಆಸ್ಮೋಟಿಕ್ ಶಕ್ತಿ ಸ್ಥಾವರವನ್ನು ಸ್ಥಾಪಿಸಿದ ಮೊದಲ ದೇಶವಾಗಿದೆ.
ಸಾಗರ ಶಕ್ತಿಯ ಉತ್ಪಾದನೆ ಹೇಗೆ?
ಫಿಲ್ಟರ್ ಮಾಡಿದ ಸಿಹಿ ನೀರು ಮತ್ತು ಸಮುದ್ರದ ನೀರನ್ನು ಬಿಡಲಾಗುತ್ತದೆ. ಮೆಂಬರೇನ್ ಮಾಡ್ಯೂಲ್‌ಗಳನ್ನು ಪ್ರವೇಶಿಸುವ ಮೊದಲು ಸಮುದ್ರದ ನೀರನ್ನು ಸರಿಸುಮಾರು ಅರ್ಧದಷ್ಟು ಆಸ್ಮೋಟಿಕ್ ಒತ್ತಡಕ್ಕೆ ಒಳಪಡಿಸಲಾಗುತ್ತದೆ.
ಸಿಹಿ ನೀರನ್ನು ಮತ್ತು ಉಪ್ಪು ನೀರನ್ನು ಬೇರೆ ಬೇರೆಯಾಗಿ ಹಾಕಲಾಗುತ್ತದೆ. ಈ ಮೂರನೇ ಒಂದು ಭಾಗವನ್ನು ಜಲವಿದ್ಯುತ್ ಟರ್ಬೈನ್‌ನಲ್ಲಿ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಉಳಿದ ಭಾಗವು ಒಳಬರುವ ಸಮುದ್ರದ ನೀರನ್ನು ಒತ್ತಡಕ್ಕೆ ಒಳಪಡಿಸಲು ಒತ್ತಡ ವಿನಿಮಯಕಾರಕದ ಮೂಲಕ ಹಾದುಹೋಗುತ್ತದೆ.
ಶಕ್ತಿ ಉತ್ಪಾದನಾ ಸಾಮರ್ಥ್ಯ
ವರ್ಷಕ್ಕೆ ಸುಮಾರು 8,80,000 ಕಿಲೋವಾಟ್-ಗಂಟೆ (kWh) ಶಕ್ತಿ ಉತ್ಪನೆಯಾಗುತ್ತದೆ. ಇದು ಸುಮಾರು 220ರಿಂದ 290 ಮನೆಗಳಿಗೆ ಸಮನಾದ ಶಕ್ತಿಯನ್ನು ಒದಗಿಸಲು ಯೋಗ್ಯವಾಗಿದೆ.
ಇದರ ಪ್ರಯೋಜನಗಳೇನು?
ನವೀಕರಿಸಬಹುದಾದ ಶಕ್ತಿ:
ತರಂಗ ಶಕ್ತಿ ಮತ್ತು ಉಬ್ಬರವಿಳಿತದ ಶಕ್ತಿ ಎರಡೂ ಹೇರಳವಾದ ಸಾಗರದ ನೈಸರ್ಗಿಕ ಚಲನಶೀಲತೆಯನ್ನು ಬಳಸುತ್ತವೆ. ಅಲ್ಲದೆ ಇದು ವಿದ್ಯುತ್ ಉತ್ಪಾದಿಸಲು ಯಾವುದೇ ನವೀಕರಿಸಲಾಗದ ಇಂಧನಗಳನ್ನು ಬಳಸುವುದಿಲ್ಲ.
ತ್ಯಾಜ್ಯಗಳನ್ನು ಉತ್ಪಾದಿಸಲ್ಲ:
ಅವು ಕಾರ್ಯನಿರ್ವಹಿಸುವಾಗ ಹಸಿರುಮನೆ ಅನಿಲಗಳು ಅಥವಾ ಇತರ ಮಾಲಿನ್ಯವನ್ನು ಉತ್ಪಾದಿಸುವುದಿಲ್ಲ. ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ. ಸಾಗರ ವಿದ್ಯುತ್ ಉತ್ಪಾದನೆಯಿಂದ ಯಾವುದೇ ತ್ಯಾಜ್ಯ ಉತ್ಪನ್ನಗಳು ಸೃಷ್ಟಿಯಾಗುವುದಿಲ್ಲ.
ಕಡಲತೀರದ ದೇಶಗಳಿಗೆ ಹೆಚ್ಚು ಉಪಯುಕ್ತ:
ಕರಾವಳಿ ತೀರಗಳಲ್ಲಿ ಅಲೆ ಮತ್ತು ಉಬ್ಬರವಿಳಿತದ ವಿದ್ಯುತ್ ಉತ್ಪಾದಕಗಳನ್ನು ನಿರ್ಮಿಸಲಾಗಿರುವುದರಿಂದ, ವಿಶೇಷವಾಗಿ ಉದ್ದವಾದ ಕರಾವಳಿಗಳನ್ನು ಹೊಂದಿರುವ ದೇಶಗಳಲ್ಲಿ ಅಪಾರ ಸಾಮರ್ಥ್ಯವಿದೆ.
ಕಡಿಮೆ ವೆಚ್ಚಗಳು:
ಸಾಗರ ಇಂಧನ ಸ್ಥಾವರವು ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ, ಅದರ ಚಾಲನಾ ವೆಚ್ಚವು ಸಾಕಷ್ಟು ಕಡಿಮೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ತೈಲ ಮತ್ತು ಕಲ್ಲಿದ್ದಲು ಸ್ಥಾವರಗಳು ಹಾಗೂ ಪರಮಾಣು ವಿದ್ಯುತ್‌ನಂತಹ ಹೆಚ್ಚು ಪ್ರಬಲವಾದ ವಿದ್ಯುತ್ ಉತ್ಪಾದನೆಗೆ ಹೋಲಿಸಿದರೆ ಇದರ ವೆಚ್ಚ ಕಡಿಮೆ ಎನ್ನಲಾಗುತ್ತಿದೆ.