– ಫೇಕ್ ವೀಡಿಯೋಗಳನ್ನ ಉಡುಪಿ ವಿದ್ಯಾರ್ಥಿನಿಯರ ವೀಡಿಯೋ ಅಂತಾ ಶೇರ್ ಮಾಡ್ಬೇಡಿ
ಉಡುಪಿ: ಖಾಸಗಿ ಕಾಲೇಜಿನ ಲೇಡಿಸ್ ಟಾಯ್ಲೆಟ್‌ನಲ್ಲಿ ಯಾವುದೇ ಸ್ಪೈ ಕ್ಯಾಮೆರಾ (Spy Camera) ಇಟ್ಟಿಲ್ಲ. ವಿದ್ಯಾರ್ಥಿನಿಯರ (Students) ಮೊಬೈಲ್‌ನಲ್ಲಿ ಯಾವುದೇ ಫೋಟೋ, ವೀಡಿಯೋಗಳು ಸಿಕ್ಕಿಲ್ಲ. ಫೇಕ್ ವೀಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇಂತಹ ಫೇಕ್ ವೀಡಿಯೋಗಳನ್ನ ಜನರು ಹಂಚಿಕೊಳ್ಳಬೇಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬು ಸುಂದರ್ (Khusboo Sundar) ಮನವಿ ಮಾಡಿದ್ದಾರೆ.
ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ (Video Recording) ವಿವಾದ ಸಂಬಂಧ `ಪಬ್ಲಿಕ್ ಟಿವಿ’ ಜೊತೆಗೆ ಮಾತನಾಡಿದ ಅವರು, ನಾವು ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳನ್ನ ಭೇಟಿಯಾಗುತ್ತೇವೆ. ಫೇಕ್ ವೀಡಿಯೋಗಳು ಹರಿದಾಡುತ್ತಿವೆ. ವಿದ್ಯಾರ್ಥಿನಿಯರ ಮೊಬೈಲ್‌ನಲ್ಲಿ ಯಾವುದೇ ಫೋಟೋ, ವೀಡಿಯೋಗಳು ಸಿಕ್ಕಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್ ನೀಡುವಂತೆ ಪೊಲೀಸರಿಗೆ ತಿಳಿಸಿದ್ದೇವೆ. ಫೇಕ್ ವೀಡಿಯೋಗಳನ್ನ ಉಡುಪಿ ವಿದ್ಯಾರ್ಥಿನಿಯರ ವೀಡಿಯೋ ಅಂತಾ ಶೇರ್ ಮಾಡಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಡುಪಿ ಹೆಸರಿನಲ್ಲಿ ಹರಿದಾಡುತ್ತಿರುವ ಎಲ್ಲಾ ವಿಡಿಯೋಗಳು ಸುಳ್ಳು: ಖುಷ್ಬು ಸುಂದರ್
ರಾಜಕೀಯ ಆರೋಪಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ನಾನಿಲ್ಲಿಗೆ ಬಂದಿದ್ದೇನೆ. ಘಟನೆ ಯಾಕೆ ನಡೀತು? ಅನ್ನೋದು ಮುಖ್ಯ. ಉಡುಪಿಯ ಶೌಚಾಲಯದಲ್ಲಿ ಚಿತ್ರೀಕರಣ ಪ್ರಕರಣದ ಬಗ್ಗೆ ಪೊಲೀಸರ ತನಿಖೆಯ ಮಾಹಿತಿ ಪಡೆದುಕೊಂಡಿದ್ದೇನೆ. ಆಡಳಿತ ಮಂಡಳಿಯಿಂದಲೂ ಮಾಹಿತಿ ಪಡೆದುಕೊಳ್ಳುತ್ತೇವೆ. ಏನು ತಪ್ಪಾಗಿದೆ..? ಎಲ್ಲಿ ತಪ್ಪಾಗಿದೆ..? ಅನ್ನೋದನ್ನ ಪತ್ತೆ ಮಾಡುತ್ತೇವೆ. ಅದಕ್ಕೂ ಮುನ್ನ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಪೊಲೀಸರಿಂದ 40 ಗಂಟೆ ತಪಾಸಣೆ:
ಈಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವುದು ಫೇಕ್ ವೀಡಿಯೋಗಳು. ಯಾವುದೇ ಸ್ಪೈ ಕ್ಯಾಮೆರಾ ಟಾಯ್ಲೆಟ್‌ನಲ್ಲಿ ಇಟ್ಟಿಲ್ಲ. ಪೊಲೀಸರು ಸತತ 40 ಗಂಟೆಗಳ ಕಾಲ ಮೊಬೈಲ್ ತಪಾಸಣೆ ಮಾಡಿದ್ದಾರೆ. ಎಫ್‌ಎಸ್‌ಎಲ್ ವಿಭಾಗ ತಪಾಸಣೆ ಮಾಡಿ ರಿಪೋರ್ಟ್ ಕೊಡಲಿದೆ. ಅಲ್ಲಿವರೆಗೆ ಫೇಕ್ ವೀಡಿಯೋ ಶೇರ್ ಮಾಡೋದನ್ನ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ವಿವಾದ – ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ನಾನು ಪಕ್ಷದ ಪರವಾಗಿ ಬಂದಿಲ್ಲ:
ರಾಜಕೀಯ ಪಕ್ಷಗಳಿಗೆ ಏನು ಬೇಕಾದ್ರೂ ಹೇಳುವ ಸ್ವಾತಂತ್ರ‍್ಯ ಇದೆ, ಪ್ರತಿಭಟನೆ ಮಾಡಲು ಹಕ್ಕಿದೆ. ಆದ್ರೆ ನಾನು ರಾಜಕೀಯ ಪಕ್ಷದ ಸದಸ್ಯಯಾಗಿ ಬಂದಿಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ (Congress-BJP) ಪರ-ವಿರುದ್ಧವಾಗಿ ಬಂದಿಲ್ಲ. ಈ ಪ್ರಕರಣದಲ್ಲಿ ಎಲ್ಲರೂ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ದಾಖಲೆಗಳು, ಹೇಳಿಕೆಗಳು ಸಿಕ್ಕಾಗ ಮಾತ್ರ ತನಿಖೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]