Bengaluru CityDistrictsKarnatakaLatestMain Post

ಯಾವುದೇ ಸೇಡಿನ ರಾಜಕೀಯ ಮಾಡ್ತಿಲ್ಲ: ಪುಷ್ಪಾ ಅಮರನಾಥ್

ಬೆಂಗಳೂರು: ಪ್ರಚಾರಕ್ಕಾಗಿ ನಮ್ಮ ಮೇಲೆ ಕೆಲವರು ಆರೋಪ ಮಾಡ್ತಿದ್ದಾರೆ. ನಾನು ಅಧ್ಯಕ್ಷೆಯಾಗಿ ಇರಬೇಕಾ..? ಬೇಡವಾ..? ಅಂತ ಪಕ್ಷದ ನಾಯಕರು, ಹೈಕಮಾಂಡ್ ತೀರ್ಮಾನ ಮಾಡುತ್ತೆ ಅಂತ ಕೆಪಿಸಿಸಿ (KPCC) ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ (Pushpa Amarnath) ಹೇಳಿದ್ದಾರೆ.

ಮಹಿಳಾ ಘಟಕದ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಕ್ಷಕೋಸ್ಕರ, ಚುನಾವಣೆಗಾಗಿಯೇ ಕೆಲವು ಬದಲಾವಣೆ ಮಾಡಲಾಗಿದೆ. ಎಲ್ಲಾ ನಾಯಕರ ಅನುಮತಿ ಪಡೆದು ನಿರ್ಧಾರ ಮಾಡಲಾಗಿದೆ. ರಾಮಲಿಂಗಾರೆಡ್ಡಿ ಅವರು ನಮ್ಮ ಇನ್ ಚಾರ್ಜ್. ಅವರ ಅನುಮತಿ ಪಡೆದು ನಿರ್ಧಾರ ಮಾಡಿದ್ದೇವೆ ಎಂದರು.

ನಮ್ಮಲ್ಲಿ ಜಾತಿನೇ ಇಲ್ಲ. ನಮ್ಮ ಮನೆಯವರು ಬಂಟರು, ಈಗ ನಮ್ಮ ಕುಟುಂಬಕ್ಕೆ ಗೌಡ ಮನೆತನದಿಂದ ಮದುವೆ ಆಗ್ತಿದೆ. ನಾನು ಯಾವತ್ತೂ ಜಾತಿ ಇಟ್ಟುಕೊಂಡು ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗಮನಕ್ಕೆ ಬಾರದೇ ಏನೂ ಆಗಲ್ಲ. ಅವರ ಅನುಮತಿ ಪಡೆದೇ ಎಲ್ಲಾ ಮಾಡಿದ್ದೇನೆ. ಕೆಲವರು ಪ್ರಚಾರಕ್ಕೆ ನನ್ನ ಮೇಲೆ ಆರೋಪ ಮಾಡ್ತಿದ್ದಾರೆ ಅಂತ ತಮ್ಮ ವಿರುದ್ಧ ಪ್ರತಿಭಟನೆ ಮಾಡಿದವರ ವಿರುದ್ಧ ಅಸಮಾಧಾನ ಹೊರ ಹಾಕಿದ್ರು. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಗ್ಲಿಷ್‌ ವೆಬ್‌ಸೈಟ್‌ ಲೋಕಾರ್ಪಣೆ

ನಾನು ಕಾರ್ಯಕರ್ತೆಯಾಗಿ ಕೆಲಸ ಮಾಡ್ತಿದ್ದೇನೆ. ಚುನಾವಣೆ ವರ್ಷ ಆಗಿರೋದ್ರೀಂದ ಸಿದ್ದರಾಮಯ್ಯ ಅನುಮತಿ ಪಡೆದೇ ಕೆಲವು ಬದಲಾವಣೆ ಮಾಡಿದ್ದೇವೆ. ನಾನು ಅಧ್ಯಕ್ಷೆಯಾಗಿ ಇರಬೇಕಾ ಬೇಡವಾ ಅಂತ ಪಕ್ಷ, ಪಕ್ಷದ ನಾಯಕರು ತೀರ್ಮಾನ ಮಾಡ್ತಾರೆ ಅಂತ ತಿಳಿಸಿದರು. ಈಗ 5-6 ಅಧ್ಯಕ್ಷರ ಬದಲಾವಣೆ ಮಾಡಿದ್ದೇವೆ. ಕೆಲಸ ಮಾಡ್ತಿಲ್ಲ ಅಂತ ಬದಲಾವಣೆ ಮಾಡಿದ್ದೇವೆ ಅಷ್ಟೆ. ಮಹಿಳಾ ಕಾಂಗ್ರೆಸ್ ಗೆ ಹಗಲು ರಾತ್ರಿ ನಾನು ಕೆಲಸ ಮಾಡ್ತಿದ್ದೇನೆ. ಕುಟುಂಬ ಬಿಟ್ಟು ಕೆಲಸ ಮಾಡ್ತಿದ್ದೇನೆ. ನಾನು ಪಕ್ಷದ ಹಿತಕ್ಕಾಗಿ ಕೆಲಸ ಮಾಡ್ತಿದ್ದೇನೆ. ಯಾವುದೇ ಸೇಡಿನ ರಾಜಕೀಯ ಮಾಡ್ತಿಲ್ಲ ಎಂದರು.

ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ 6 ತಿಂಗಳಿಂದ ನಡೀತಿತ್ತು. ಈಗ ಆಗಿದೆ. ಕೆಲವು ಕಡೆ ಮಹಿಳಾ ಅಧ್ಯಕ್ಷರೇ ಬರೋದಿಲ್ಲ. ಹೀಗಾಗಿ ಬದಲಾವಣೆ ಮಾಡಿದ್ದೇವೆ. ಸಸಯಾರನ್ನು ಕಿತ್ತು ಹಾಕಿ ಮನೆಯಿಂದ ಕಳಿಸೊಲ್ಲ. ಹೆಚ್ಚಿನ ಜವಾಬ್ದಾರಿ ಕೊಡ್ತೀವಿ. ಎಲ್ಲರೂ ಅಸಮಾಧಾನ ಬಿಟ್ಟು ಪಕ್ಷಕ್ಕಾಗಿ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

Live Tv

Leave a Reply

Your email address will not be published. Required fields are marked *

Back to top button