ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೋಕ್ಸೊ ಪ್ರಕರಣ ಎದುರಿಸುತ್ತಿರುವ ಮುರುಘಾ ಶ್ರೀಗಳು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.
ನಾಳೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ. ಈ ಸಂಬಂಧ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಆ.30ರಂದು ಅರ್ಜಿ ಸಲ್ಲಿಸಲಾಗಿತ್ತು. ಇದನ್ನೂ ಓದಿ: ಸ್ವಾಮೀಜಿಗಳ ಲೈಂಗಿಕ ದೌರ್ಜನ ಆರೋಪದ ಕೇಸನ್ನು ಸಿಬಿಐಗೆ ಒಪ್ಪಿಸಿ: ಹಿಂದುಸ್ತಾನ್ ಜನತಾ ಪಕ್ಷ ಒತ್ತಾಯ
Advertisement
Advertisement
ಕೋರ್ಟ್ ವಿಚಾರಣೆ ಕುರಿತು ಮಾತನಾಡಿದ ಬಾಲಕಿಯರ ಪರ ವಕೀಲ ಶ್ರೀನಿವಾಸ್, ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ನಾಳೆ ಸಂತ್ರಸ್ತ ಬಾಲಕಿಯರ ಪರ ತಕರಾರು ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
Advertisement
Advertisement
ಮುರುಘಾ ಶ್ರೀಗಳು ಯಾವ ಗ್ರೌಂಡ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೋ ಪರಿಶೀಲಿಸಿ ನಾಳೆ ತಕರಾರು ಅರ್ಜಿ ಸಲ್ಲಿಸಲಾಗುವುದು. ನೊಂದ ಬಾಲಕಿಯರ ಪರವಾಗಿ ಕಾನೂನು ಪ್ರಾಧಿಕಾರದ ವಕೀಲರು ವಕಾಲತ್ತು ಹಾಕಿದ್ದರು. ನಾವು ಕೂಡ ವಕಾಲತ್ತು ಹಾಕಿದ್ದೇವೆ. ಬಾಲಕಿಯರು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನ್ಯಾಯಾಧೀಶರ ಮುಂದೆಯೇ ಬಾಲಕಿಯರು ನಮ್ಮನ್ನು ಅವರ ಪರ ವಕೀಲರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಶರಣರ ಜಾಮೀನು ಅರ್ಜಿ ಬಗ್ಗೆ ಸಂತ್ರಸ್ತರಿಗೆ ಮತ್ತು ಪಿಪಿಗೆ ಇಂದು ನೋಟಿಸ್ ಬಂದಿತ್ತು. ಹಾಗಾಗಿ ಇಂದು ತಕರಾರು ಸಲ್ಲಿಸಲು ಅವಕಾಶ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ಗುರುವಾರ ವಿಚಾರಣೆ – ಮಠಕ್ಕೆ ಪೊಲೀಸ್ ಭದ್ರತೆ