ChitradurgaDistrictsKarnatakaLatestMain Post

ಮುರುಘಾ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ಗುರುವಾರ ವಿಚಾರಣೆ – ಮಠಕ್ಕೆ ಪೊಲೀಸ್ ಭದ್ರತೆ

ಚಿತ್ರದುರ್ಗ: ಮುರುಘಾ ಶ್ರೀಗಳ ಮೇಲೆ ದಾಖಲಾಗಿರುವ ಪೋಕ್ಸೋ ಕೇಸ್‍ನಿಂದ ಚಿತ್ರದುರ್ಗದ ಬೃಹನ್ಮಠದಲ್ಲಿ ಟೆನ್ಶನ್ ಮನೆ ಮಾಡಿದೆ.

ಸಂತ್ರಸ್ತ ವಿದ್ಯಾರ್ಥಿನಿಯರು ನೀಡಿದ ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ಆಧಾರದ ಮೇಲೆ ಪೊಲೀಸರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ. ಸಿಆರ್‌ಪಿಸಿ ಸೆಕ್ಷನ್‌ 164 ಹೇಳಿಕೆ ಆಧರಿಸಿ ಶ್ರೀಗಳಿಗೆ ನಾಳೆ ಪೊಲೀಸರು ನೊಟೀಸ್ ಜಾರಿ ಮಾಡಬಹುದು ಎಂಬ ಮಾತು ಕೇಳಿಬರುತ್ತಿವೆ. ಜೊತೆಗೆ ಗುರುವಾರ ಚಿತ್ರದುರ್ಗದ ಕೋರ್ಟ್‍ನಲ್ಲಿ ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ಬೇರೆ ವಿಚಾರಣೆಗೆ ಬರಲಿದೆ. ಈ ಮಧ್ಯೆ, ಶ್ರೀಮಠದಲ್ಲೇ ಶರಣರು ಇದ್ದು ದೈನಂದಿನ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಡ್ಜ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆಯರು- ಶ್ರೀಗಳಿಗೆ ನೋಟಿಸ್ ಸಾಧ್ಯತೆ

ಇಂದು ಹಲವು ನಾಯಕರು ಬಂದು ಶ್ರೀಗಳನ್ನು ಭೇಟಿ ಮಾಡಿ ತೆರಳಿದ್ದಾರೆ. ಪ್ರಕರಣದಲ್ಲಿ ಶ್ರೀಗಳು ಪಾರಾಗಿ ಬರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಠಕ್ಕೆ ಪೊಲೀಸ್ ಕಣ್ಗಾವಲಿದೆ. ಈ ಮಧ್ಯೆ, ಮಠದ ಆಡಳಿತಾಧಿಕಾರಿ ಎಸ್‍.ಕೆ ಬಸವರಾಜನ್ ವಿರುದ್ಧ ಹಾಸ್ಟೆಲ್ ವಾರ್ಡನ್ ರಶ್ಮಿ ನೀಡಿರುವ ದೂರಿನ ಮೇಲೆ ತನಿಖೆ ಮುಂದುವರಿದಿದೆ. ಇಂದು ಮುರುಘಾ ಮಠದ ವಿದ್ಯಾರ್ಥಿನಿಯರ ಹಾಸ್ಟೆಲ್‍ಗೆ ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ಕುಮಾರ್, ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ರು. ಈ ವೇಳೆ ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಅಧಿಕಾರಿ ಲೋಕೇಶ್ವರಪ್ಪ ಉಪಸ್ಥಿತರಿದ್ರು. ಸದ್ಯ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿನಿಯರನ್ನು ಮಠದ ಹಾಸ್ಟೆಲ್‍ನಿಂದ ಗೂಳೇನಹಟ್ಟಿಯ ಮೊರಾರ್ಜಿ ಶಾಲೆಯ ಹಾಸ್ಟೆಲ್‍ಗೆ ಶಿಫ್ಟ್ ಮಾಡಲಾಗಿದೆ. ಈ ಪ್ರಕರಣ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರದಿರಲು ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಗಣೇಶೋತ್ಸವವನ್ನು ಸ್ವಾಗತಿಸಲ್ಲ, ಹುಬ್ಬಳ್ಳಿ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್‌ : ಅಂಜುಮನ್ ಸಂಸ್ಥೆ

Live Tv

Leave a Reply

Your email address will not be published.

Back to top button