ChitradurgaCrimeDistrictsKarnatakaLatestMain Post

ಜಡ್ಜ್ ಮುಂದೆ ಹೇಳಿಕೆ ದಾಖಲಿಸಿದ ಸಂತ್ರಸ್ತೆಯರು- ಶ್ರೀಗಳಿಗೆ ನೋಟಿಸ್ ಸಾಧ್ಯತೆ

- ಮಠದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್

ಚಿತ್ರದುರ್ಗ: ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ಸಂಬಂಧ ಮಂಗಳವಾರ ಸಂತ್ರಸ್ತೆಯರು ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಇತ್ತ ಶ್ರೀಗಳ ವಿರುದ್ಧ ಕೇಸ್ ದಾಖಲಾದಾಗಿನಿಂದ ಪರ ಹಾಗೂ ವಿರೋಧದ ಚರ್ಚೆಗಳು ಶುರುವಾಗಿವೆ.

ಮಂಗಳವಾರ ಸಂಜೆ ವೇಳೆ ಕೋರ್ಟ್ ನಲ್ಲಿ ಸಂತ್ರಸ್ತೆಯರು ಹೇಳಿಕೆ ದಾಖಲು ಮಾಡಿದ್ದಾರೆ. ಸಿಆರ್ ಪಿಸಿ164 ಅಡಿ ಜಡ್ಜ್ ಎದುರು ಹೇಳಿಕೆ ದಾಖಲಿಸಿದ್ದಾರೆ. ಹೇಳಿಕೆ ದಾಖಲಿಸಿದ ಸೀಲ್ಡ್ ಕವರ್ ನಾಳೆ ತನಿಖಾಧಿಕಾರಿ ಕೈಸೇರಲಿದೆ. ಈ ಮೂಲಕ ನಾಳೆ ಪೊಲೀಸರು ಮುರುಘಾ ಶ್ರೀಗೆ ನೋಟೀಸ್ ನೀಡುವ ಸಾಧ್ಯತೆಗಳಿವೆ. ನಾಳೆ ಮುರುಘಾಶ್ರೀ ವಶಕ್ಕೆ ಪಡೆದು ವಿಚಾರಣೆ ಹಾಗೂ ಮೆಡಿಕಲ್ ಟೆಸ್ಟ್ ನಡೆಯುವ ಸಾಧ್ಯತೆಗಳಿದೆ.

ಇತ್ತ ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದು ರಾಜ್ಯಾದ್ಯಂತ ಪರ ಹಾಗೂ ವಿರೋಧ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಲದೆ ಫೋಕ್ಸೊ ಕೇಸ್‍ನಲ್ಲಿ ಸಿಲುಕಿರುವ ಮುರುಘಾ ಶರಣರು, ಆರೋಪದಿಂದ ಮುಕ್ತರಾಗುವವರೆಗೆ ಪೀಠ ತ್ಯಾಗ ಮಾಡುವಂತೆ ಮಾಜಿ ಸಚಿವ ಹಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಈ ಸಂಬಂಧ ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ವಿರುದ್ಧ ಅಟ್ರಾಸಿಟಿ ಕೇಸ್‌ ದಾಖಲು

ಈ ವಿಚಾರವನ್ನು ಕೇಳಿ ಆಕ್ರೋಶಗೊಂಡಿರುವ ಮುರುಘಾ ಮಠದ ಶಾಖಾಮಠಗಳ ಪೀಠಾಧಿಪತಿಗಳು ದಿಢೀರ್ ಸುದ್ದಿಗೋಷ್ಠಿ ನಡೆಸಿ ಮುರುಘಾ ಶರಣರ ಬೆನ್ನಿಗೆ ನಿಂತರು. ಶ್ರೀಗಳು ಪ್ರಕರಣದಿಂದ ಮುಕ್ತರಾಗಿ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಎಂದರು. ಒಟ್ಟಿನಲ್ಲಿ ಆರೋಪ ಮುಕ್ತರಾಗಿ ಮುರುಘಾ ಶರಣರು ಬರ್ತಾರೆಂಬ ಭರವಸೆ ಒಂದೆಡೆಯಾದ್ರೆ, ಕಾನೂನು ಮುರುಘಾ ಶರಣರನ್ನು ಪೀಠಾಧ್ಯಕ್ಷರಾಗಿ ಮುಂದುವರಿಸುತ್ತಾ ಅಥವಾ ತ್ಯಾಗ ಮಾಡಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಸದ್ಯ ಮಠದಲ್ಲಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ ಮುರುಘಾ ಶ್ರೀ ಮೇಲೆ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಮುರುಘಾ ಮಠದ ನಾಲ್ಕು ಗೇಟ್ ಗಳಲ್ಲೂ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀ ಪೀಠ ತ್ಯಾಗ ಮಾಡಲಿ: ಎಚ್. ವಿಶ್ವನಾಥ್ ಆಗ್ರಹ

Live Tv

Leave a Reply

Your email address will not be published.

Back to top button