ಬೆಂಗಳೂರು: ರಾಜ್ಯದಲ್ಲಿ ಮದ್ಯ (Alcohol) ಮಾರಾಟ ಮತ್ತು ಮದ್ಯ ಖರೀದಿ ವಯೋಮಾನ (Age) 21 ರಿಂದ 18 ವರ್ಷಕ್ಕೆ ಇಳಿಕೆ ಮಾಡಿ ಪರಿಷ್ಕರಿಸಿ ಹೊರಡಿಸಿದ್ದ ಅಧಿಸೂಚನೆಗೆ ಆಕ್ಷೇಪಣೆ ಸ್ವೀಕರಿಸಿದ್ದು, ಸದ್ಯ ಇರುವ ಹಳೆ ವ್ಯವಸ್ಥೆಯೇ ಮುಂದುವರಿಯಲಿದೆ ಎಂದು ಅಬಕಾರಿ ಸಚಿವ ಗೋಪಾಲಯ್ಯ (Gopalaiah) ಸ್ಪಷ್ಟಪಡಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಮದ್ಯ ಮಾರಾಟ ವಯೋಮಾನದ ಕುರಿತು ಜನವರಿ 9 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಮದ್ಯ ಖರೀದಿಸುವವರ ವಯೋಮಿತಿ 21 ರಿಂದ 18 ಕ್ಕೆ ಇಳಿಸುವ ಪ್ರಸ್ತಾಪ ಮಾಡಲಾಗಿತ್ತು. ಆದರೆ ಇದಕ್ಕೆ ಅನೇಕ ಆಕ್ಷೇಪಣೆ ಬಂತು. ಹೀಗಾಗಿ ಸಮಿತಿ ರಚಿಸಿದ್ದು ಸದ್ಯ ಈಗ ಯಾವ ರೀತಿ ಇದೆಯೋ ಅದರಂತೆಯೇ ಮುಂದುವರಿಸಲು ಕ್ರಮ ವಹಿಸಲಾಗಿದೆ ಎಂದರು.
Advertisement
Advertisement
ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ಕುರಿತು ಅನೇಕ ಕಡೆ ದಿಟ್ಟ ಕ್ರಮ ವಹಿಸಿದೆ. ಮುಂದೆಯೂ ಅದೇ ರೀತಿ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಸಚಿವರು ಮಾಹಿತಿ ನೀಡಿದರು. ಇದನ್ನೂ ಓದಿ: ಮದ್ಯ ಮಾರಾಟದಿಂದ ಚಿನ್ನದ ಬೆಳೆ ತೆಗೆದ ಸರ್ಕಾರ – 5 ವರ್ಷಗಳಲ್ಲಿ 1 ಲಕ್ಷ ಕೋಟಿ ಆದಾಯ
Advertisement
Advertisement
ಈ ವರ್ಷ ಅಬಕಾರಿ ಇಲಾಖೆಗೆ ನಿಗದಿಪಡಿಸಿರುವ ಆರ್ಥಿಕ ಗುರಿಯನ್ನು ಇಲಾಖೆ ದಾಟಲಿದೆ. ಕಳೆದ 5 ವರ್ಷವೂ ಸತತವಾಗಿ ನಮಗೆ ನಿಗದಿಪಡಿಸಿರುವ ಗುರಿಯನ್ನು ದಾಟಿದ್ದೇವೆ. ಈ ಬಾರಿಯೂ ಗುರಿ ತಲುಪುವುದರಲ್ಲಿ ಹಿಂದೆ ಬೀಳಲ್ಲ. ನಮಗೆ ನಿಗದಿಪಡಿಸಿರುವ ಗುರಿ ತಲುಪಲು ಇಲಾಖೆ ಅಗತ್ಯ ಕ್ರಮ ವಹಿಸಲಿದೆ ಎಂದರು. ಇದನ್ನೂ ಓದಿ: ಅನುದಾನಿತ ಕಾಲೇಜು ಉಪನ್ಯಾಸಕರಿಗೆ NPS ಜಾರಿಗೆ ಬಗ್ಗೆ ನ್ಯಾಯ ಸಮ್ಮತ ಕ್ರಮ: ಬೊಮ್ಮಾಯಿ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k