ಬೆಂಗಳೂರು: ಸಚಿವ ಎಂಬಿ ಪಾಟೀಲ್ (MB Patil) ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ (DK Suresh) ಪರಸ್ಪರ ಏರುಧ್ವನಿಯಲ್ಲಿ ಮಾತನಾಡಿದ ಪ್ರಸಂಗ ನಡೆದಿದೆ.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (CLP Meeting) ಆಯೋಜನೆಯಾಗಿತ್ತು. ಈ ಸಭೆಗೆ ಆಗಮಿಸುತ್ತಿದ್ದಾಗ ಸುರೇಶ್ ಮತ್ತು ಎಂಬಿ ಪಾಟೀಲ್ ಎದುರುಬದುರು ಸಿಕ್ಕಿದ್ದಾರೆ. ಇದನ್ನೂ ಓದಿ: `ಸಿದ್ದು ಪೂರ್ಣಾವಧಿ ಸಿಎಂ’ – ಕಾಂಗ್ರೆಸ್ ಒಳಗೆ ಬೆಂಕಿ ಹಚ್ಚಿದ ಎಂಬಿಪಿ
Advertisement
Advertisement
ಎಂಬಿಪಿಯನ್ನು ನೋಡಿದ ಸುರೇಶ್, ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಮಾತನಾಡಲು ನೀವು ಯಾರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಎಂಬಿಪಿ, ನಾನೇನು ಹೇಳಿಲ್ಲ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹೇಳಿದ್ದನ್ನು ಹೇಳಿದ್ದೇನೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ಗುರುವಾರ ಜೆಡಿಎಸ್‌ನಿಂದ ಪರಾಮರ್ಶೆ ಸಭೆ – ಮತ್ತೆ ಸಿನಿಮಾದತ್ತ ನಿಖಿಲ್ ಒಲವು
Advertisement
ಈ ಉತ್ತರದಿಂದ ಸಿಟ್ಟಾದ ಡಿಕೆಸು, ಈ ರೀತಿ ಮಾತನಾಡಲು ನೀವು ಯಾರು ಖಾರವಾಗಿ ಪ್ರಶ್ನಿಸಿದ್ದಾರೆ. ಈ ವೇಳೆ, ಇದನ್ನು ಕೇಳಲು ನೀವು ಯಾರು ಎಂದು ಎಂಬಿಪಿ ತಿರುಗೇಟು ನೀಡಿದ್ದಾರೆ. ವಾಕ್ಸಮರ ಜೋರಾಗುತ್ತಿದ್ದಂತೆ ಇಬ್ಬರನ್ನು ಉಳಿದ ನಾಯಕರು ಸಮಾಧಾನ ಮಾಡಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
Advertisement
ಶಾಸಕಾಂಗ ಸಭೆಯಲ್ಲಿ ಈ ವಿಚಾರ ಚರ್ಚೆಯಾಗಿದೆ. ಇದಕ್ಕೆ ಸಿದ್ದರಾಮಯ್ಯ (Siddaramaiah) ಸದನದ ಹೊರಗೆ ಬಹಿರಂಗವಾಗಿ ಮಾತನಾಡಿ ನನಗೆ ಮುಜುಗರ ಉಂಟು ಮಾಡಬೇಡಿ. ಸದನಕ್ಕೆ ಗೈರಾಗಿಯೂ ನನಗೆ ಮುಜುಗರ ಮಾಡಬೇಡಿ. ಅಷ್ಟು ಹೇಳಬಲ್ಲೆ ಜಾಸ್ತಿ ಏನು ಹೇಳುವುದಿಲ್ಲ ಎಂದು ಶಾಸಕರಿಗೆ ಕಿವಿಮಾತು ಹೇಳಿದ್ದಾರೆ.