ಮುಂಬೈ (ನಾಸಿಕ್): ಈ ಮೋದಿ ಇದೋವರೆಗೂ ಈ ದೇಶದಲ್ಲಿ ಕಾಂಗ್ರೆಸ್ ಯಾವುದೇ ಪಿತೂರಿ ಮಾಡಲು ಸಾಧ್ಯವಿಲ್ಲ. ಅಂಬೇಡ್ಕರ್ ಸಂವಿಧಾನ ಮಾತ್ರ ಈ ದೇಶದಲ್ಲಿ ನಡೆಯುತ್ತದೆ. ಯಾವುದೇ ಶಕ್ತಿಯು 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ನಾಸಿಕ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಣಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಪಿತೂರಿಗಳ ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು. ಇಲ್ಲದಿದ್ದರೆ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: Articles 370 Row | ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಮೂರನೇ ದಿನ ಮಾರಾಮಾರಿ
ಕಾಂಗ್ರೆಸ್ ಪಕ್ಷವು ಜಮ್ಮು-ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ವಿಧಾನಸಭೆಯಲ್ಲಿ 370ನೇ ವಿಧಿಯನ್ನು ಮರುಸ್ಥಾಪಿಸುವ ನಿರ್ಣಯವನ್ನು ಈಗಾಗಲೇ ಅಂಗೀಕರಿಸಲಾಗಿದೆ. ಮಹರಾಷ್ಟ್ರದ ಜನತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪಿತೂರಿಗಳನ್ನು ಅರ್ಥಮಾಡಿಕೊಳ್ಳಬೇಕು. 370ನೇ ವಿಧಿಯ ಮೇಲಿನ ನಿರ್ಣಯವನ್ನು ಈ ದೇಶ ಒಪ್ಪಿಕೊಳ್ಳುವುದಿಲ್ಲ. ಮೋದಿ ಇದುವವರೆಗೂ ಕಾಶ್ಮೀರದಲ್ಲಿ ಕಾಂಗ್ರೆಸ್ ಯಾವುದೇ ಪಿತೂರಿ ಮಾಡಲು ಸಾಧ್ಯವಾಗುವುದಿಲ್ಲ. ಅಂಬೇಡ್ಕರ್ ಅವರ ಸಂವಿಧಾನ ಮಾತ್ರ ಈ ದೇಶದಲ್ಲಿ ನಡೆಯುತ್ತದೆ. ಯಾವುದೇ ಶಕ್ತಿಯು 370ನೇ ವಿಧಿ ಮರಳಿ ತರಲು ಸಾಧ್ಯವಿಲ್ಲ ಎಂದು ಗುಡುಗಿದರು.
ರಾಹುಲ್ ಗಾಂಧಿಗೆ ಮೋದಿ ಸವಾಲ್:
ವೀರ ಸಾವರ್ಕರ್‌ರನ್ನ ಹಾಡಿ ಹೊಗಳಿದರು. ಇದೇ ವೇಳೆ ಸಾವರ್ಕರ್, ಬಾಳಾಸಾಹೇಬ್ ಠಾಕ್ರೆ ಅವರನ್ನ ಹೊಗಳುವಂತೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ
ಕಾಂಗ್ರೆಸ್‌ನವರು ಮೊದಲಿನಿಂದಲೂ ಸಾವರ್ಕರ್ ಅವರನ್ನ ನಿಂದಿಸುತ್ತಿದ್ದಾರೆ. ಆದ್ರೆ ಎಂವಿಎ ಈ ಚುನಾವಣೆಯಲ್ಲಿ ಗೆಲ್ಲಬೇಕಾದ್ರೆ ಸಾವರ್ಕರ್ ನಿಂದಿಸೋದನ್ನ ನಿಲ್ಲಿಸುವಂತೆ ಕಾಂಗ್ರೆಸ್‌ನ ʻಯುವರಾಜʼನಿಗೆ ಹೇಳಿದೆ. ಆದ್ರೆ ಕಾಂಗ್ರೆಸ್ ಎಂದಿಗೂ ಸಾವರ್ಕರ್ ಹಾಗೂ ಶಿವಸೇನೆ ಸಂಸ್ಥಾಪಕರನ್ನು ಹೊಗಳುವುದಿಲ್ಲ. ಅವರಿಗೆ ನೈತಿಕತೆಯಿದ್ದರೆ ಸಾವರ್ಕರ್ ಅವರ ತ್ಯಾಗ ಸಮರ್ಪಣೆಯನ್ನು ಪ್ರಸಂಶಿಸುವಂತೆ ಸವಾಲು ಹಾಕುತ್ತೇನೆ ಎಂದಿದ್ದಾರೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಾವರ್ಕರ್ ಅವರು ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ತುಂಬಿದವರು. ಆದ್ರೆ ಕಾಂಗ್ರೆಸ್ ಅವರ ತ್ಯಾಗವನ್ನ ಕಡೆಗಣಿಸುತ್ತಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಅವರ ಪಾತ್ರವನ್ನು ಟೀಕಿಸುತ್ತಿದೆ. ತಮ್ಮ ಹೆಸರು ಗಾಂಧಿ, ಸಾವರ್ಕರ್ ಅಲ್ಲ. ಹಾಗಾಗಿ ಯಾರ ಬಳಿಯೂ ʻಯುವರಾಜʼ ಕ್ಷಮೆ ಕೇಳುವುದಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್
ಜಾತಿಗಳ ನಡುವೆ ಸಂಘರ್ಷ ತಂದಿದ್ದು ಕಾಂಗ್ರೆಸ್:
ಮುಂದುವರಿದು, ಮಹಾಯುತಿ ಒಕ್ಕೂಟದ ಸರ್ಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಲಿದೆ. ಮಹಾ ವಿಕಾಸ್ ಆಘಾಡಿಯ ಡ್ರೈವರ್ ಯಾರು ಎನ್ನುವುದು ಆ ಒಕ್ಕೂಟದ ನಾಯಕರಿಗೇ ಸ್ಪಷ್ಟತೆಯಿಲ್ಲ. ಹೀಗಿದ್ದಾಗ, ಅವರಿಗೆ ಅಧಿಕಾರ ಕೊಟ್ಟರೆ ಸುಭದ್ರ ಸರ್ಕಾರವನ್ನು ನೀಡಬಲ್ಲರೇ? ಜಾತಿಜಾತಿಗಳ ನಡುವೆ ಸಂಘರ್ಷವನ್ನು ಕಾಂಗ್ರೆಸ್ ತಂದಿತು. ಇದರಿಂದ ದೇಶ ಇಬ್ಬಾಗವಾಯಿತು. ಈಗ ಪರಿಶಿಷ್ಟ ಜಾತಿ, ಪಂಗಡ ಮತ್ತುಇತರ ಹಿಂದುಳಿದ ವರ್ಗಗಳ ನಡುವೆ ತಂದಿಡುವ ಕೆಲಸವನ್ನು ಮಾಡುತ್ತಿದ್ದಾರೆ. ಇದು, ಸಾಮಾನ್ಯವಾಗಿ ಕಾಂಗ್ರೆಸ್ ಅನುಸರಿಸುತ್ತಿರುವ ನೀತಿ ಎಂದು ಕಿಡಿ ಕಾರಿದ್ದಾರೆ.
288 ಕ್ಷೇತ್ರಗಳ ವಿಧಾನಸಭೆಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದ್ದು, ನ.23ಕ್ಕೆ ಫಲಿತಾಂಶ ಹೊರಬೀಳಲಿದೆ.