ಬೀದರ್: ಪೊಲೀಸರೇ (Police) ನೀವು ಜನರ ಸೇವೆ ಮಾತ್ರ ಮಾಡಿ, ಅದನ್ನ ಬಿಟ್ಟು ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕಬೇಡಿ ನಮ್ಮ ಕಾರ್ಯಕರ್ತ ಮೇಲೆ ನಿಮ್ಮ ದರ್ಪ ನಡೆಯಲ್ಲ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagawanth Khuba) ಪೊಲೀಸರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ನಮ್ಮ ಧರ್ಮ, ಸಂಸ್ಕೃತಿಯನ್ನು ಕಾಪಾಡಿದ ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜರನ್ನು ನಾವೆಲ್ಲರೂ ಪ್ರತಿನಿತ್ಯ ನೆನೆಯೋಣ, ನಮ್ಮ ಮಕ್ಕಳಿಗೆ ಅವರ ವೀರ ಪರಂಪರೆಯನ್ನು ತಿಳಿಸೋಣವೆಂದು ಕರೆಕೊಟ್ಟೆ.
ಈ ಕಾರ್ಯಕ್ರಮದಲ್ಲಿ ತಾಯಂದಿರು, ಸಹೋದರಿಯರು, ಹಿರಿಯರು, ಯುವಕರು ಹಾಗೂ ಮಕ್ಕಳು, ಜೈ ಭವಾನಿ, ಜೈ ಶಿವಾಜಿ, (2/3) pic.twitter.com/rjQR1DadKv
— Bhagwanth Khuba (@bhagwantkhuba) February 19, 2023
Advertisement
ಬೀದರ್ (Bidar) ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದ ಶಿವಾಜಿ ಮಹರಾಜ್ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೊಲೀಸರ ವಿರುದ್ಧ ಗರಂ ಆಗಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಟೂರ್ನಿ ವೇಳೆ ಕಿರಿಕ್ ಮಾಡಿ ಇಬ್ಬರ ಹತ್ಯೆ ಪ್ರಕರಣ – ಆರೋಪಿತರ ಕಾಲಿಗೆ ಪೊಲೀಸರ ಗುಂಡೇಟು
Advertisement
ಪೊಲೀಸರೇ ನಿಮಗೆ ನೌಕರಿ ಕೊಟ್ಟಿದ್ದು ಜನರ ಸೇವೆ ಮಾಡೋಕೆ, ಜನರ ತೆರಿಗೆ ದುಡ್ಡಿನಿಂದಲೇ ನಿಮಗೆ ವೇತನ ಬರುತ್ತೆ. ಆದ್ದರಿಂದ ನಮ್ಮ ಕಾರ್ಯಕರ್ತ ಮೇಲೆ ನಿಮ್ಮ ದರ್ಪ ನಡೆಯಲ್ಲ ಎಂದು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಆಂಧ್ರ ಸಿಎಂ ಸಹೋದರಿ ಅರೆಸ್ಟ್; ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕೇಸ್ ದಾಖಲು
Advertisement
ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವದ ನಿಮಿತ್ಯ, ಔರಾದನಲ್ಲಿ ಮರಾಠಾ ಸಮಾಜದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದೇ.
ನಮ್ಮ ಧರ್ಮದ ಮೇಲೆ, ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ, ಪಾಪಿ ಮೊಘಲರಿಗೆ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ, (1/3)#ShivajiMaharajJayanti #chatrapatishivajimaharaj pic.twitter.com/SXhDlQDwxu
— Bhagwanth Khuba (@bhagwantkhuba) February 19, 2023
Advertisement
ಪೊಲೀಸರೇ ನೀವು ಜನರ ಸೇವೆ ಮಾತ್ರ ಮಾಡಿ, ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕಬೇಡಿ. ಒಂದು ವೇಳೆ ಪೊಲೀಸರು ದರ್ಪ ತೋರಿದ್ರೆ, ಧಮ್ಕಿ ಹಾಕಿದ್ರೆ ಆ ವಿಡಿಯೋ ಮಾಡಿ ನನಗೆ ಕಳಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k