ದುಬೈ: 2019 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ ಬಳಿಕ ಐಸಿಸಿ ತನ್ನ ತಂಡವನ್ನು ನೆಚ್ಚಿನ 11 ಆಟಗಾರರ ತಂಡ ಪ್ರಕಟಿಸಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.
ಐಸಿಸಿ ಅಧಿಕೃತ ವೆಬ್‍ಸೈಟ್ ತಾಣದಲ್ಲಿ 11 ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಭಾರತದ ಪರವಾಗಿ ಟೂರ್ನಿಯಲ್ಲಿ 5 ಶತಕ ಗಳಿಸಿರುವ ರೋಹಿತ್ ಶರ್ಮಾ ಹಾಗೂ ನಂ.1 ಬೌಲರ್ ಜಸ್ಪ್ರೀತ್ ಬುಮ್ರಾ ಸ್ಥಾನಗಳಿಸಿದ್ದಾರೆ.
Advertisement
Advertisement
ಇಂಗ್ಲೆಂಡ್ ತಂಡದ ಆರಂಭಿಕ ಜಾಸನ್ ರಾಯ್ ಅವರನ್ನು ಕೊಹ್ಲಿ ಅವರ ಸ್ಥಾನದಲ್ಲಿ ಆಯ್ಕೆ ಮಾಡಲಾಗಿದೆ. ಟೂರ್ನಿಯಲ್ಲಿ ರಾಯ್ 7 ಪಂದ್ಯಗಳಿಂದ 63.29 ಸರಾಸರಿಯಲ್ಲಿ 443 ರನ್ ಗಳಿಸಿದ್ದಾರೆ. ಕೊಹ್ಲಿ 9 ಪಂದ್ಯಗಳಿಂದ 55.38 ಸರಾಸರಿಯಲ್ಲಿ 443 ರನ್ ಗಳಿಸಿದ್ದಾರೆ.
Advertisement
ಉಳಿದಂತೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರಿಗೆ ತಂಡದ ನಾಯಕತ್ವ ನೀಡಲಾಗಿದ್ದು, ಮಾಜಿ ಕ್ರಿಕೆಟರ್ ಗಳಾದ ಇಯಾನ್ ಬಿಶಾಪ್, ಇಯಾನ್ ಸ್ಮೀತ್, ಇಸಾ ಗುಹಾ ಹಾಗೂ ಕ್ರಿಕೆಟ್ ವಿಶ್ಲೇಷಕ ಲಾರೆನ್ಸ್ ಬೂತ್ ಮತ್ತು ಐಸಿಸಿ ಪ್ರಧಾನ ವ್ಯವಸ್ಥಾಪಕರು ತಂಡವನ್ನು ಆಯ್ಕೆ ಮಾಡಿದ್ದಾರೆ. ರೋಹಿತ್ ಹಾಗೂ ರಾಯ್ ಆರಂಭಿಕರಾಗಿದ್ದರೆ, ವಿಲಯಮ್ಸನ್ ನಂ.3, ಬಳಿಕ ಜೋ ರೂಟ್, ಶಕಿಬ್ ಅಲ್ ಹಸನ್, ಬೇನ್ ಸ್ಟೋಕ್ಸ್, ಅಲೆಕ್ಸ್ ಕ್ಯಾರಿ ತಂಡದಲ್ಲಿದ್ದಾರೆ.
Advertisement
ಬೌಲಿಂಗ್ ವಿಭಾಗದಲ್ಲಿ ಮಿಚೆಲ್ ಸ್ಟಾರ್ಕ್, ಜೋಫ್ರಾ ಅರ್ಚರ್, ಫರ್ಗೂಸನ್ ಹಾಗೂ ಬುಮ್ರಾ ಇದ್ದಾರೆ. ಮಿಚೆಲ್ ಸ್ಟಾರ್ಕ್ 27 ವಿಕೆಟ್ ಗಳಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಮೊದಲಸ್ಥಾನ ಪಡೆದಿದ್ದರೆ, ಸೂಪರ್ ಓವರ್ ಬೌಲ್ ಮಾಡಿದ ಜೋಫ್ರಾ ಅರ್ಚರ್ ಟೂರ್ನಿಯಲ್ಲಿ 20 ವಿಕೆಟ್ ಗಳಿಸಿದ್ದಾರೆ. ಬೌಲರ್ ಗಳ ವಿಭಾಗದಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಪಡೆದಿರುವ ಬುಮ್ರಾ ಟೂರ್ನಿಯಲ್ಲಿ 18 ವಿಕೆಟ್ ಗಳಿಸಿದ್ದಾರೆ.
Find out the thinking behind the #CWC19 Team of the Tournament ???? https://t.co/SFQPHYOXED
— ICC (@ICC) July 15, 2019