ಇಸ್ಲಾಮಾಬಾದ್: ಲಾಹೋರ್‌ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಮ್‍ನಲ್ಲಿ ಹಣವಿಲ್ಲ ಎಂದು ಪಾಕಿಸ್ತಾನದಲ್ಲಿರುವ ಸ್ಥಿತಿಗತಿಗಳ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಟ್ವಿಟ್ಟರ್ ಮೂಲಕ ಕಿಡಿಕಾರಿದ್ದಾರೆ.
Advertisement
ಲಾಹೋರ್‌ನ ಯಾವುದೇ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಲಭ್ಯವಿಲ್ಲವೇ? ಎಟಿಎಂ ಯಂತ್ರಗಳಲ್ಲಿ ನಗದು ಲಭ್ಯವಿಲ್ಲವೇ? ರಾಜಕೀಯ ಬಿಕ್ಕಟ್ಟಿನಿಂದಾಗಿ ಜನಸಾಮಾನ್ಯರೇಕೆ ನರಳಬೇಕು ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪ್ರಸ್ತುತ ಪ್ರಧಾನಿ ಶಹಾಬಾಜ್ ಷರೀಫ್ ಸೇರಿದಂತೆ ಕೆಲ ರಾಜಕೀಯ ನಾಯಕರಿಗೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನ್ನು ಫೈನಲ್‍ಗೇರಿಸಿ ರಾಜಸ್ಥಾನ್ ಫ್ರಾಂಚೈಸ್‍ಗೆ Sorry ಕೇಳಿದ ಮಿಲ್ಲರ್
Advertisement
Advertisement
ಹಫೀಜ್ ಈ ಹಿಂದೆ ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿಯ ನಿರ್ಧಾರಗಳ ಬಗ್ಗೆ ಕೂಡ ಚಕಾರ ಎತ್ತಿದ್ದರು. ಇದೀಗ ಸರ್ಕಾರದಿಂದ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಏಕೆ ಕಪ್ ಗೆದ್ದಿಲ್ಲ? – ಕೊಹ್ಲಿ ವಿರುದ್ಧ ಸೆಹ್ವಾಗ್ ಮಹತ್ವದ ಹೇಳಿಕೆ
Advertisement
ಹಫೀಜ್ 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಮೂರು ಮಾದರಿ ಕ್ರಿಕೆಟ್‍ನಲ್ಲಿ ಹಫೀಜ್, ಪಾಕ್ ಪರ 12,000ಕ್ಕೂ ಅಧಿಕ ರನ್ ಮತ್ತು 250ಕ್ಕೂ ಹೆಚ್ಚು ವಿಕೆಟ್ ಪಡೆದು ಯಶಸ್ವಿ ಆಲ್‍ರೌಂಡರ್ ಎನಿಸಿಕೊಂಡಿದ್ದರು.
No Petrol available in any petrol station in Lahore??? No cash available in ATM machines?? Why a common man have to suffer from political decisions. @ImranKhanPTI @CMShehbaz @MaryamNSharif @BBhuttoZardari
— Mohammad Hafeez (@MHafeez22) May 24, 2022