ಅಖಿಲೇಶ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು: ಕೇಶವ್ ಪ್ರಸಾದ್ ಮೌರ್ಯ

Public TV
1 Min Read
Keshav Prasad

ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆಡಳಿತದಲ್ಲಿ ಗಲಭೆ, ಗೂಂಡಾಗಿರಿ, ವಲಸೆ ಹೆಚ್ಚಿತ್ತು ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ವಾಗ್ದಾಳಿ ಮಾಡಿದರು.

ಇಂದು ಟ್ವಿಟ್ಟರ್‌ನಲ್ಲಿ ಮೌರ್ಯ ಅವರು, ಅಖಿಲೇಶ್ ಯಾದವ್ ಜೀ, ನಿಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಗಲಭೆ, ಗೂಂಡಾಗಿರಿ, ವಲಸೆಯ ನೋವನ್ನು ಜನರು ಮರೆತಿಲ್ಲ. ಭ್ರಷ್ಟಾಚಾರಕ್ಕೆ ಕಾರಣವಾದ ನಿಮ್ಮ ಅಧಿಕಾರಾವಧಿಯನ್ನು ಇಂದಿಗೂ ರಾಜ್ಯದ ಜನ ಮರೆತಿಲ್ಲ. ಈಗ ಜನರು ಉತ್ತಮ ಆಡಳಿತಕ್ಕೆ ಒಗ್ಗಿಕೊಂಡಿದ್ದಾರೆ. ಈಗ ಯಾರೂ ನಿಮ್ಮ ಆಕರ್ಷಣೆಗೆ ಮತ್ತು ದುರಾಸೆಗೆ ಬೀಳುವುದಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ

Akhilesh Yadav

ಜ.20ರಂದು, ಮೌರ್ಯ ಅವರು ಸುದ್ದಿಗಾರರೊಂದಿಗೆ ಮಾತನಾಡಿದ್ದು, ಅಖಿಲೇಶ್ ಯಾದವ್ ಅವರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಅವರಿಗೆ ಇಂದು ಸವಾಲು ಹಾಕುತ್ತೇನೆ. ಅವರಿಗೆ ಧೈರ್ಯವಿದ್ದರೆ ಅವರೇ ಅಭಿವೃದ್ಧಿ ಮಾಡಿದ ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಈಗ ಅವರು ಮೈನ್‍ಪುರಿ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ನಾನು ಕೇಳಿದ್ದೇನೆ. ಪ್ರಮುಖ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಧೈರ್ಯವೂ ಅವರಿಗಿರಲಿಲ್ಲ ಎಂದು ಟೀಕಿಸಿದ್ದರು.

ಬಿಜೆಪಿ ಅಖಿಲೇಶ್ ಯಾದವ್ ಅವರಿಗೆ ಟಫ್ ಫೈಟ್ ಕೊಡುತ್ತೆ. ನಂತರ ಅವರು ಸೈಕಲ್ ಸವಾರಿ ಮಾಡುವುದನ್ನು ಮರೆತುಬಿಡುತ್ತಾರೆ ಎಂದಿದ್ದರು.

ಉತ್ತರಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಪುಷ್ಪ ಸಿನಿಮಾ ನೋಡಿ 24 ವರ್ಷದ ಯುವಕನ ಬರ್ಬರ ಹತ್ಯೆ – ಮೂವರು ಅರೆಸ್ಟ್

 

Share This Article
Leave a Comment

Leave a Reply

Your email address will not be published. Required fields are marked *