ಯಾರು ಯಾರಿಗೂ ಪತ್ರ ಬರೆದಿಲ್ಲ – ಇದೆಲ್ಲಾ ಊಹಾಪೋಹದ ಸುದ್ದಿ: ಡಿಕೆಶಿ

Public TV
1 Min Read
DK Shivakumar 6

ಬೆಂಗಳೂರು: ಯಾವ ಶಾಸಕರು (MLA) ಕೂಡಾ ಸಚಿವರ (Minister) ವಿರುದ್ಧ ಪತ್ರ ಬರೆದಿಲ್ಲ. ಅವರಲ್ಲಿ ಯಾವುದೇ ಅಸಮಾಧಾನವೂ ಇಲ್ಲ. ಇದೆಲ್ಲಾ ಊಹಾಪೋಹದ ಸುದ್ದಿಗಳು ಅಷ್ಟೇ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆ ನೀಡಿದ್ದಾರೆ.

ಶಾಸಕರು ಸಚಿವರ ವಿರುದ್ಧ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿರುವ ಬಗೆಗಿನ ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಯಾವ ಅಸಮಧಾನವೂ ಇಲ್ಲ. ಇದೆಲ್ಲಾ ಊಹಾಪೋಹದ ಸುದ್ದಿಗಳು. ಎಲ್ಲಾ ಸಚಿವರೂ ಅವರವರ ಕ್ಷೇತ್ರದಲ್ಲಿ ಶಾಸಕರ ಕೆಲಸ ಮಾಡುತ್ತಿದ್ದಾರೆ. ಸದ್ಯ ಟ್ರಾನ್ಸ್‌ಫರ್ ಟೈಮ್ ಮುಗಿದಿದ್ದು, ಇನ್ನು ಉಳಿದಿದ್ದರೆ ಅದನ್ನು ಮುಖ್ಯಮಂತ್ರಿಗಳು ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ನಾವು 5 ಗ್ಯಾರಂಟಿ ಕೊಟ್ಟಿದ್ದೇವೆ. ಅದನ್ನು ಜಾರಿಗೆ ತರುವ ಬಗ್ಗೆ ಶಾಸಕರ ಜೊತೆ ಮಾತನಾಡಬೇಕಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಯೋಜನೆ ಇಂಪ್ಲಿಮೆಂಟ್ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇವೆ. ಶಾಸಕರು ಹೆಚ್ಚಿನ ಅನುದಾನ ಕೇಳುತ್ತಿದ್ದಾರೆ. 10 ಕೋಟಿ, 20 ಕೋಟಿ, 100 ಕೋಟಿ, 300 ಕೋಟಿ ಅಂತ ಅನುದಾನ ಕೇಳುತ್ತಿದ್ದಾರೆ. ಕೆಲವೊಂದು ಭರವಸೆ ಕೊಟ್ಟಿರುತ್ತೇವೆ. ಆದರೆ 1 ವರ್ಷಗಳ ಸಮಯ ಸಮಾಧಾನದಿಂದ ಕಾಯಲು ಹೇಳಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಸಚಿವರ ವಿರುದ್ಧ ಶಾಸಕರ ಅಸಮಾಧಾನ – ಸಿಎಂಗೆ 25 ಶಾಸಕರ ದೂರು

ಶಾಸಕಾಂಗ ಪಕ್ಷದ ಸಭೆಯಲ್ಲಿ ಇದನ್ನೆಲ್ಲಾ ಮಾತನಾಡುತ್ತೇವೆ. ಹಿಂದಿನ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ವಿಚಾರ ಚರ್ಚೆ ಮಾಡಿದ್ದೆವು. ಉಳಿದ ವಿಚಾರ ನಾಡಿದ್ದು ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: PFI, ಇಂಡಿಯನ್ ಮುಜಾಹಿದೀನ್‌ನಲ್ಲೂ ಭಾರತ ಅನ್ನೋ ಪದವಿದೆ – ವಿಪಕ್ಷಗಳ INDIA ಒಕ್ಕೂಟಕ್ಕೆ ಮೋದಿ ಟಾಂಗ್‌

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article