ಬೆಂಗಳೂರು: ಕರ್ನಾಟಕ ಕಾಂಗ್ರೆಸ್‌ನಲ್ಲೀಗ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದೆ. ಸಿದ್ದರಾಮಯ್ಯ ಬೆಂಬಲಿತ ಹಿರಿಯ ಶಾಸಕರಿಂದ ಪಕ್ಷದ ಸಚಿವರ ವಿರುದ್ಧವೇ ಸಿಎಂಗೆ ದೂರು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿ.ಕೆ. ಹರಿಪ್ರಸಾದ್ ಈಚೆಗೆ ಸಿಎಂ ಕೆಳಗಿಳಿಸೋದು ಗೊತ್ತು, ಆಯ್ಕೆ ಮಾಡೋದು ಗೊತ್ತು ಎಂದು ಹೇಳಿಕೆ ನೀಡಿದ್ದರು. ತಮಗೆ ಸಚಿವ ಸ್ಥಾನ ಸಿಗದಿದ್ದ ಬಗ್ಗೆ ಈ ರೀತಿ ಅಸಮಾಧಾನ ಹೊರಹಾಕಿದ್ದರೆ. ಇದರ ಬೆನ್ನಲ್ಲೇ ಪಕ್ಷದ ಸಚಿವರ ವಿರುದ್ಧ ಹಿರಿಯ ಶಾಸಕರು ಅಸಮಾಧಾನ ಹೊರಹಾಕಿ ಸಿಎಂ ಮುಂದೆ ಹೋಗಿದ್ದಾರೆ. ಸರ್ಕಾರ ರಚನೆಯಾದ 2 ತಿಂಗಳಲ್ಲೇ ಅಸಮಾಧಾನ ಸ್ಫೋಟಿಸಿದ್ದು, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಶಾಸಕರು ಒತ್ತಾಯಿಸಿದ್ದಾರೆ. ಇದೇ ಜು.27ಕ್ಕೆ ಸಭೆ ಕರೆಯಲಾಗಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ಈ ಬೆಳವಣಿಗೆ ನಿದರ್ಶನದಂತೆ ತೋರುತ್ತಿದೆ. ಇದನ್ನೂ ಓದಿ: PFI, ಇಂಡಿಯನ್ ಮುಜಾಹಿದೀನ್‌ನಲ್ಲೂ ಭಾರತ ಅನ್ನೋ ಪದವಿದೆ – ವಿಪಕ್ಷಗಳ INDIA ಒಕ್ಕೂಟಕ್ಕೆ ಮೋದಿ ಟಾಂಗ್
Advertisement
Advertisement
ಈ ಬೆಳವಣಿಗೆ ‘ಕೈ’ ಪಾಳಯದಲ್ಲಿ ನಾನಾ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕಷ್ಟೆ ಒಗ್ಗಟ್ಟು, ಒಳಗೊಳಗೆ ಬಿಕ್ಕಟ್ಟು ಎಂಬ ಪರಿಸ್ಥಿತಿ ಇದೆಯಾ? ಮನೆಯೊಂದು ಮೂರು ಬಾಗಿಲು ಎಂಬಂತಾಯ್ತಾ ಕಾಂಗ್ರೆಸ್ ಸ್ಥಿತಿ? ಸಿದ್ದರಾಮಯ್ಯ ವರ್ಸಸ್ ಅದರ್ಸ್ ಫೈಟ್ ಸಹ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಒಳಗೊಳಗೆ ಕೆಲಸ ಶುರು ಮಾಡಿದೆಯಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
Advertisement
Advertisement
ಇದು ಸಚಿವ ಸ್ಥಾನ ವಂಚಿತ ಮಾಜಿ ಸಚಿವರು ಹಾಗೂ ಹಿರಿಯ ಶಾಸಕರ ಅಸಮಾಧಾನ ಎನ್ನಲಾಗುತ್ತಿದೆ. ಸಚಿವ ಸ್ಥಾನವೂ ಸಿಗಲಿಲ್ಲ. ಅತ್ತ ಹಿರಿತನಕ್ಕೆ ಗೌರವವೂ ಸಿಗುತ್ತಿಲ್ಲ. ಸಚಿವರಾಗಬೇಕಿದ್ದವರು ಅದನ್ನು ಕಳೆದುಕೊಂಡಿದ್ದೇವೆ. ಸಚಿವರಾದವರು ನಮ್ಮ ಹಿರಿತನಕ್ಕೆ ಗೌರವ ಕೊಡುತ್ತಿಲ್ಲ ನಾವೇ ಆಗಬೇಕಿದ್ದ ಸಚಿವ ಸ್ಥಾನ ಇವರಿಗೆ ಸಿಕ್ಕಿದೆ. ನಮಗೆ ಗೌರವ ಸಿಗುತ್ತಿಲ್ಲ ಎನ್ನುವುದು ಅವರ ಅಸಮಾಧಾನ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: KRS ಡ್ಯಾಂ ಬರೋಬ್ಬರಿ 110 ಅಡಿ ಭರ್ತಿ – 48 ಗಂಟೆಯಲ್ಲಿ 5 ಟಿಎಂಸಿ ನೀರು ಒಳಹರಿವು
ನಮ್ಮ ಸ್ಥಾನದಲ್ಲಿ ಅವರು, ಅವರ ಸ್ಥಾನದಲ್ಲಿ ನಾವು. ನಮ್ಮ ಹಿರಿತನಕ್ಕೆ ಗೌರವ ಇಲ್ಲ. ಇದು ಸಚಿವ ಸ್ಥಾನ ವಂಚಿತ ಹಿರಿಯ ಶಾಸಕ ಹಾಗೂ ಮಾಜಿ ಸಚಿವರ ಅಸಮಾಧಾನದ ಮೂಲಗಳು ಮಾಹಿತಿ ನೀಡಿವೆ.
Web Stories