ರಾಯಚೂರು: ಜೆಡಿಎಸ್ (JDS) ಪಕ್ಷದಲ್ಲಿದ್ದವರು ಯಾರೂ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಡಿಕೆಶಿ ಸೇರಿ ಕಾಂಗ್ರೆಸ್ (Congress) ನಾಯಕರು ತಮ್ಮ ಮನೆಯಲ್ಲಿದ್ದವರನ್ನ ಮೊದಲು ಸಂಭಾಳಿಸಲಿ ಅಂತ ಮಾಜಿ ಸಚಿವ ವೆಂಕಟರಾವ್ ನಾಡಗೌಡ (Venkatrao Nadagouda) ಹೇಳಿದ್ದಾರೆ.
Advertisement
ಕಾಂಗ್ರೆಸ್ ನಾಯಕರು ಜೆಡಿಎಸ್ ಶಾಸಕರನ್ನ ಸಂಪರ್ಕಿಸಿರೋ ವಿಚಾರವಾಗಿ ರಾಯಚೂರಿನಲ್ಲಿ ಮಾತನಾಡಿದ ವೆಂಕಟರಾವ್ ನಾಡಗೌಡ, ಕಾಂಗ್ರೆಸ್‍ನವರಿಗೆ 136 ಜನ ಶಾಸಕರನ್ನೇ ಸಂಭಾಳಿಸಿಕೊಳ್ಳಲಾಗುತ್ತಿಲ್ಲ. ನಮ್ಮನ್ನು ಕರೆದುಕೊಂಡು ಹೋಗಿ ಏನು ಮಾಡ್ತಾರೆ. ಅಲ್ಲಿರುವ ಗೊಂದಲಗಳನ್ನ ಮೊದಲು ಸರಿಪಡಿಸಿಕೊಳ್ಳಲಿ. ಕಾಂಗ್ರೆಸ್ ಪಕ್ಷದಲ್ಲಿ ಎಲಿಜಿಬಲ್ ಲೀಡರ್ಸ್ ಇಲ್ವಂತಾ. ಅದಕ್ಕೆ ನಮ್ಮಲ್ಲಿ ಹುಡುಕಾಟ ನಡೆಸ್ತಿದ್ದಾರಾ ಅಂತ ಪ್ರಶ್ನಿಸಿದರು. ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಹೆಣ್ಮಕ್ಕಳ ರಕ್ಷಣೆಗಾಗಿ ಎನ್‍ಕೌಂಟರ್‌ನ ಅಗತ್ಯವಿದೆ: ಸುವೇಂದು ಅಧಿಕಾರಿ
Advertisement
Advertisement
ಕಾಂಗ್ರೆಸ್ ಪಕ್ಷದಲ್ಲಿ ಎಲಿಜಿಬಲ್ ಲೀಡರ್ಸ್ ಇಲ್ಲಾ ಅಂತ ಆಯ್ತು. ಕಾಂಗ್ರೆಸ್ ಪಕ್ಷದಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆಯಿದೆ. ನಮ್ಮ ನಾಯಕರ ಹತ್ರ ಅವರದೇ 30 ಜನ ಸಂಪರ್ಕದಲ್ಲಿದ್ದಾರಂತೆ, ಅವರ ಪಕ್ಷದಲ್ಲೇ ಪಕ್ಷ ಬಿಡಲು ತಯಾರಿದ್ದಾರೆ. ಬಿಜೆಪಿ (BJP) ಪಕ್ಷದಲ್ಲೂ ಕೂಡ ಏನೂ ಸರಿಯಿಲ್ಲ. ಅವರಲ್ಲೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ.ಬಿಜೆಪಿಯವರು ಗೊಂದಲದಲ್ಲಿದ್ದಾರೆ ಏನು ಆಗುತ್ತದೆ ನೋಡಬೇಕು ಎಂದು ಹೇಳಿದ್ದಾರೆ.
Advertisement
Web Stories