ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ: ಆನಂದ್ ಸಿಂಗ್

Public TV
1 Min Read
anadh shig

ವಿಜಯನಗರ: ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

Directive principles, fundamental rights discourse in India: Lessons for Himalayan Republic - nepalforeignaffairs nepalforeignaffairs

ಕಮಲಾಪುರ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಆನಂದ್ ಸಿಂಗ್ ಅವರು ಭಾಗವಹಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಯಾವ ರೀತಿಯ ಪದವನ್ನು ಬಳಕೆ ಮಾಡುತ್ತಿದ್ದೇವೆ ಎಂಬುದನ್ನು ಮೊದಲು ಆಲೋಚನೆ ಮಾಡಿ ಮಾತನಾಡಬೇಕು. ಸೂರ್ಯ- ಚಂದ್ರ ಇರೋವರೆಗೂ ಸಂವಿಧಾನ ಬದಲಾವಣೆ ಅಸಾಧ್ಯ. ಸಂವಿಧಾನ ಬದಲಾವಣೆ ಮಾಡೋದು ಅಸಾಧ್ಯ. ಆ ಪದ ಬಳಕೆ ಮಾಡೋದೇ ಬೇಕಾಗಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ಯದಿಂದ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ – ವೀಡಿಯೋ ವೈರಲ್ 

ambedkar statue

ಸಂವಿಧಾನ ಬದಲಾವಣೆ ಮಾಡೋದು ಯಾರಿಂದ ಸಾಧ್ಯ. ಪದ ಬಳಕೆ ಮಾಡುವಾಗ ಬಹಳ ಮುಂದಾಲೋಚನೆ ಇಟ್ಕೊಂಡು ಪದ ಬಳಕೆ ಮಾಡಬೇಕು. ಮಾತನಾಡೋರು ಏನು ಬೇಕಾದನ್ನ ಮಾತನಾಡ್ತಾರೆ. ನಾನು ಮಾನವ ಜಾತಿ ರಕ್ಷಣೆ ಮಾಡಲು ಬಂದವನು. ನನಗೆ ಜಾತಿ, ಧರ್ಮ ಅನ್ನೋದೇನಿಲ್ಲ. ನಾನು ನಂಬಿಕೆ ಇಟ್ಟಿರೋದು ಮಾನವ ಧರ್ಮದಲ್ಲಿ ಮಾತ್ರ. ಡಾ.ಬಾಬಾ ಸಾಹೇಬ್ ಹೇಳಿಕೊಟ್ಟಿದ್ದು, ಮಾನವ ಜಾತಿ ಎಂದರು.

Share This Article
Leave a Comment

Leave a Reply

Your email address will not be published. Required fields are marked *