– ತನಿಖಾ ಏಜೆನ್ಸಿಗಳು ಮಾಡಬೇಕಾಗಿರುವುದನ್ನು ರಾಜ್ಯಪಾಲರು ಮಾಡುತ್ತಿದ್ದಾರೆ
ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ಸ್ಟೇಷನ್, ತನಿಖಾ ಏಜೆನ್ಸಿಗಳೇ ಬೇಡ. ರಾಜ್ಯಪಾಲರಿಗೆ ದೂರು ನೀಡಿದರೆ ಸಾಕು ಅವರೇ ನೋಡಿಕೊಳ್ಳುತ್ತಾರೆ ಎಂದು ಸಚಿವ ಎಂಬಿ ಪಾಟೀಲ್ (MB Patil) ರಾಜ್ಯಪಾಲರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವ ತನಿಖಾ ಏಜೆನ್ಸಿಗಳೂ ಬೇಡ. ಎಲ್ಲವನ್ನೂ ರಾಜ್ಯಪಾಲರಿಗೆ (Governer) ದೂರು ನೀಡಿದರೆ ಸಾಕು ಎಲ್ಲವನ್ನು ಅವರೇ ನೋಡಿಕೊಳ್ಳುತ್ತಾರೆ. ಪೊಲೀಸರ ತನಿಖಾ ಏಜೆನ್ಸಿಗಳು ಮಾಡಬೇಕಾಗಿರುವುದನ್ನು ರಾಜ್ಯಪಾಲರು ಮಾಡುತ್ತಿದ್ದಾರೆ. ಅವರು ಎಷ್ಟಾದರೂ ಪತ್ರ ಬರೆಯಲಿ ನಾವು ನೋಡಿಕೊಳ್ಳುತ್ತೇವೆ. ರಾಜ್ಯಪಾಲರಿಂದ ಪದೇ ಪದೇ ಪತ್ರವ್ಯವಹಾರ ಹಿನ್ನೆಲೆ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.ಇದನ್ನೂ ಓದಿ: ರೇಣುಕಾ ಹತ್ಯೆ ಕೇಸ್ – ಮೂವರಿಗೆ ಜಾಮೀನು ಮಂಜೂರು
Advertisement
Advertisement
ಬಿಜೆಪಿ (BJP) ನಾಯಕರನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದೇವಾ? ಇವರು ರಾಜ್ಯಪಾಲರನ್ನ, ಕಚೇರಿಯನ್ನ ಬಳಸಿಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರಾ? ಸರ್ಕಾರ ಬಂದ ಮೇಲೆ ಎಲ್ಲಾ ಸಮಿತಿ ಮಾಡಿದ್ದೇವೆ. ಆಗಿನಿಂದಲೇ ನಾವು ತನಿಖೆ ಮಾಡುತ್ತಿದ್ದೇವೆ. ಕಿಮ್ಮನೆ ರತ್ನಾಕರ್ ಹೇಳಿರುವ ವಿಚಾರ ಗೃಹ ಸಚಿವರು ಪರಿಗಣಿಸಬಹುದು. ರಾಜ್ಯಪಾಲ ನಡೆ ಬಗ್ಗೆ ಗಂಭೀರ ಚಿಂತನೆ ಮಾಡುತ್ತೇವೆ ಎಂದರು.
Advertisement
ನನ್ನ ವಿರುದ್ಧ ದೂರಿನ ಪ್ರಶ್ನೆಯೇ ಬರುವುದಿಲ್ಲ. ಮೊನ್ನೆ ಎರಡು ಗಂಟೆಗಳ ಕಾಲ ಎಲ್ಲವೂ ಕೊಟ್ಟಿದ್ದೇನೆ. ಅರ್ಕಾವತಿ ಸೇರಿದಂತೆ ಬಿಜೆಪಿ ಅವರು ಏನು ಕೊಡ್ತಾರೆ, ರಾಜ್ಯಪಾಲರು ಅವುಗಳ ಬಗ್ಗೆ ಸಿಎಸ್ ಅವರಿಗೆ ಏನು ಮಾಹಿತಿ ಕೇಳುತ್ತಿದ್ದಾರೆ. ಸರ್ಕಾರ ಸಿಎಂ ಸಚಿವ ಸಂಪುಟದಲ್ಲಿ ಇದರ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇವೆ. ಮಾಹಿತಿ ಸೋರಿಕೆ ರಾಜ್ಯಪಾಲರ ಕಚೇರಿಯಿಂದ ಆಗುತ್ತಿದೆ. ಬೇಕು ಅಂತಲೇ ಸೋರಿಕೆ ಮಾಡಿರಬೇಕು. ಏನು ಬರೆಯುತ್ತಾರೆ ಬರೆದುಕೊಳ್ಳಲಿ ಎಂದು ಕಿಡಿಕಾರಿದರು.
ಇದೇ ವೇಳೆ ಗಂಗೇನಹಳ್ಳಿ ಡಿನೋಟಿಫಿಕೇಷನ್ ವಿಚಾರ ಕುರಿತು ಹೆಚ್‌ಡಿಕೆ (HD Kumaraswamy) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಯಡಿಯೂರಪ್ಪ ಲೋಕಾಯುಕ್ತ ತನಿಖೆಗೆ ಹೋಗಿ ಬಂದಿದ್ದಾರೆ. ಕುಮಾರಸ್ವಾಮಿ ಅವರು ಹೋಗಬೇಕಲ್ಲವಾ ಅಲ್ಲಿ. ದ್ವಂದ್ವ ನೀತಿ ಗೊತ್ತಾಗುತ್ತಿದೆ. ಸಹಿ ಮಾಡಿಲ್ಲ ಎಂದು ಹೇಳುತ್ತಾರೆ. ಅದು ಅತೀರೇಖದ ಪ್ರಸಂಗ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ತಿರುಪತಿ ಲಡ್ಡು ಟೇಸ್ಟ್ ಸೂಪರ್: ಲಡ್ಡು ಸವಿದು ಖುಷಿ ಹಂಚಿಕೊಂಡ ಭಕ್ತರು