ಪೆಟ್ರೋಲ್ ಬೇಕಿಲ್ಲ – ಬಿಯರ್ ಹಾಕಿದ್ರೆ ಓಡುತ್ತೆ ಈ ಬೈಕ್!

Public TV
1 Min Read
Motorcycle beer

ವಾಷಿಂಗ್ಟನ್: ಇಂಧನದ ಕೊರತೆ ಒಂದು ದೊಡ್ಡ ಸಮಸ್ಯೆ ಎನಿಸಿಕೊಂಡರೂ ದಿನೇ ದಿನೇ ಮಾನವನ ಹೊಸ ಹೊಸ ಆವಿಷ್ಕಾರ ಒಂದಷ್ಟು ಸಮಸ್ಯೆಗಳಿಗೆ ಪರಿಹಾರವನ್ನೂ ತಂದುಕೊಡುತ್ತಿದೆ. ಇಲ್ಲೊಬ್ಬ ವ್ಯಕ್ತಿ ಇಂಧನದ ಬದಲು ಬಿಯರ್‌ನಿಂದ (Beer) ಓಡುವ ಬೈಕ್ (Motorcycle) ಅನ್ನು ಕಂಡುಹಿಡಿದು ಅಚ್ಚರಿ ಮೂಡಿಸಿದ್ದಾರೆ.

ಅಮೆರಿಕದ ಮೈಕೆಲ್ಸನ್ ಎಂಬ ವ್ಯಕ್ತಿ ಇಂತಹದ್ದೊಂದು ವಿಶೇಷ ಬೈಕ್ (Bike) ಅನ್ನು ಕಂಡುಹಿಡಿದಿದ್ದಾರೆ. ಈ ಬೈಕ್‌ಗೆ ಪೆಟ್ರೋಲ್ ಬೇಕಿಲ್ಲ. ಬದಲಿಗೆ ಇದು ಬಿಯರ್‌ನಿಂದ ಚಲಿಸುತ್ತದೆ. ಯಾವುದೇ ಇಂಧನ ಚಾಲಿತ ವಾಹನಗಳಿಗೆ ಕಮ್ಮಿ ಇಲ್ಲ ಎಂಬಂತೆ ಈ ಬೈಕ್ ಗಂಟೆಗೆ 240 ಕಿ.ಮೀ ವೇಗದಲ್ಲಿ ಚಲಿಸುತ್ತದೆ ಎಂದು ಮೈಕೆಲ್ಸನ್ ತಿಳಿಸಿದ್ದಾರೆ.

Motorcycle beer 1

ಈ ಬೈಕ್‌ಗೆ ಅನಿಲ ಚಾಲಿತ ಎಂಜಿನ್ ಬದಲು ಹೀಟಿಂಗ್ ಕಾಯಿಲ್ ಅನ್ನು ಬಳಸಲಾಗಿದೆ. ಈ ಕಾಯಿಲ್ ಬಿಯರ್ ಅನ್ನು 300 ಡಿಗ್ರಿಗಳ ವರೆಗೆ ಬಿಸಿ ಮಾಡಿ ಬೈಕ್ ಮುಂದೆ ಚಲಿಸುವಂತೆ ಮಾಡುತ್ತದೆ ಎನ್ನಲಾಗಿದೆ. ಇದನ್ನೂ ಓದಿ: 1,000 ಬಾಯ್‍ಫ್ರೆಂಡ್‍ಗಳ ಜೊತೆ ಡೇಟಿಂಗ್ – 1 ಗಂಟೆ ಡೇಟ್‍ಗೆ ಈಕೆಗೆ ಕೊಡ್ಬೇಕು 5 ಸಾವಿರ!

ಮೈಕೆಲ್ಸನ್ ಈ ಬೈಕ್ ಅನ್ನು ಬ್ಲೂಮಿಂಗ್ಟನ್‌ನಲ್ಲಿರುವ ತನ್ನ ಗ್ಯಾರೇಜ್‌ನಲ್ಲಿ ನಿರ್ಮಿಸಿದ್ದಾರೆ. ಅತ್ತ ಇಂಧನದ ಬೆಲೆ ಏರಿಕೆಯಾಗುತ್ತಿದೆ. ನಾನು ಮದ್ಯಪಾನ ಮಾಡಲ್ಲ. ಹೀಗಾಗಿ ಬೈಕ್ ಚಲಿಸುವಂತೆ ಮಾಡಲು ಇಂಧನದ ಬದಲು ಬಿಯರ್ ಅನ್ನು ಬಳಸಿದರೆ ಹೇಗೆ ಎಂದು ನಾನು ಯೋಚಿಸಿದ್ದೆ ಎಂದು ಮೈಕೆಲ್ಸನ್ ಹೇಳಿದ್ದಾರೆ.

ಮೈಕೆಲ್ಸನ್ ತಯಾರಿಸಿರುವ ಬಿಯರ್ ಚಾಲಿತ ಬೈಕ್ ಇನ್ನೂ ರಸ್ತೆಗೆ ಇಳಿದಿಲ್ಲ. ಆದರೆ ಇದು ಸ್ಥಳೀಯ ಪ್ರದರ್ಶನವೊಂದರಲ್ಲಿ ಮೊದಲ ಸ್ಥಾನವನ್ನು ಗಳಿಸಿದೆ. ಈ ಬೈಕ್‌ನ ಸಾಮರ್ಥ್ಯ ಪರೀಕ್ಷೆಯ ಬಳಿಕ ದೊಡ್ಡ ಮಟ್ಟದಲ್ಲಿ ಪ್ರದರ್ಶನಕ್ಕೆ ಕೊಂಡೊಯ್ಯುವ ಆಶಯವನ್ನು ಮೈಕೆಲ್ಸನ್ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಿಂಗಳಿಗೆ ಪಡೆಯುತ್ತಿದ್ದ ಸಂಬಳ 30,000 ರೂ.; ರೇಡ್‌ ಮಾಡಿದ ಪೊಲೀಸರಿಗೆ ಸಿಕ್ತು 10 ಕಾರು, 50 ವಿದೇಶಿ ನಾಯಿ, 30 ಲಕ್ಷ ರೂ. ಟಿವಿ!

Share This Article