ಟಿಬಿಲಿಸಿ: ಯುವತಿಯೊಬ್ಬಳು (Woman) 1,000 ಬಾಯ್‍ಫ್ರೆಂಡ್‍ಗಳನ್ನು (Boy friends) ಹೊಂದಿದ್ದು, ಅವರೊಂದಿಗೆ ಡೇಟ್ ಮಾಡಲು ಗಂಟೆಗೆ 5,000 ರೂ. ಸಂಭಾವನೆಯನ್ನು ಪಡೆಯುವ ಮೂಲಕ ಸುದ್ದಿಯಾಗಿದ್ದಾಳೆ.
ಸೋಶಿಯಲ್ ಮಿಡಿಯಾ ಇನ್ಫೂಯೆನ್ಸರ್ ಆಗಿರುವ ಜಾರ್ಜಿಯಾದ (Georgia) ಕಮ್ಮಿಂಗ್ ನಿವಾಸಿ ಕ್ಯಾರಿನ್ ಮಾರ್ಜೋರಿ ಹಣ ಪಡೆಯುತ್ತಿರುವ ಯುವತಿ. ಕ್ಯಾರಿನ್ ಮಾರ್ಜೋರಿ ಸ್ನ್ಯಾಪ್ ಚಾಟ್‍ನಲ್ಲಿ 1.8 ಮಿಲಿಯನ್ ಫಾಲೋವರ್‍ಗಳನ್ನು ಹೊಂದಿದ್ದಾಳೆ.
Advertisement
Advertisement
ಈಕೆ 1,000 ಬಾಯ್‍ಫ್ರೆಂಡ್‍ಗಳನ್ನು ಹೊಂದಿದ್ದು, ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಆ ಎಲ್ಲಾ ಬಾಯ್‍ಫ್ರೆಂಡ್‍ಗಳು ಭೇಟಿ ಆಗಲು ನಿಮಿಷಕ್ಕೆ 1 ಡಾಲರ್ (80 ರೂ.) ಶುಲ್ಕ ವಿಧಿಸುತ್ತಿದ್ದಾಳೆ. ಗೆಳೆಯರ ಜೊತೆ ಡೇಟಿಂಗ್ ಮಾಡಲು ಎಐ ಕ್ಲೋನ್ ಎಂಬ ಆ್ಯಪ್ ಅನ್ನು ಮಾಡಿಕೊಂಡಿದ್ದಾಳೆ. ಈ ಮೂಲಕ ಗೆಳೆಯರು ಅವಳ ಜೊತೆ ಡೇಟಿಂಗ್ ಮಾಡಲು ಸಮಯವನ್ನು ತೆಗೆದುಕೊಳ್ಳಬಹುದಾಗಿದೆ. ಇದನ್ನೂ ಓದಿ: ಇಮ್ರಾನ್ ಖಾನ್‌ಗೆ ಜಾಮೀನು ಮಂಜೂರು
Advertisement
ಎಐ ಆ್ಯಪ್ ಮೂಲಕವಾಗಿ ಬಳಕೆದಾರರಿಗೆ ಕ್ಯಾರಿನ್ ಅನೇಕ ರೀತಿಯ ಆಯ್ಕೆಗಳಿರುತ್ತವೆ. ಅದರಲ್ಲಿ ಎಲ್ಲ ಆಯ್ಕೆಗೂ ಒಂದೊಂದು ರೀತಿಯ ದರವನ್ನು ಫಿಕ್ಸ್ ಮಾಡಿದ್ದಾಳೆ. ಈ ಆ್ಯಪ್‍ನಲ್ಲಿ ಆಕೆ ಇರುವ ಪ್ರದೇಶವನ್ನು ಗುರುತಿಸಲು ಮತ್ತು ಲೈಂಗಿಕ ಕ್ರಿಯೆಯನ್ನು ನಡೆಸಲು ಇನ್ನೂ ಅನೇಕ ರೀತಿ ಆಯ್ಕೆಗಳು ಇವೆ ಎಂದು ಹೇಳಲಾಗುತ್ತಿದೆ.
Advertisement
ಈ ಆ್ಯಪ್‍ನ ಮೂಲಕ ಕ್ಯಾರಿನ್‍ಳನ್ನು ಭೇಟಿಯಾಗುವವರು ಪ್ರತಿ ನಿಮಿಷಕ್ಕೆ 1 ಡಾಲರ್ ಅನ್ನು ಪಾವತಿಸಬೇಕು. ಈ ಮೂಲಕ ಸುಮಾರು 1,000 ಗೆಳೆಯರು ಕ್ಯಾರಿನ್‍ನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಚಿವ ಸಂಪುಟ ಸಹೋದ್ಯೋಗಿಗಳ ಜೊತೆ ‘ದಿ ಕೇರಳ ಸ್ಟೋರಿ’ ಸಿನಿಮಾ ವೀಕ್ಷಿಸಿದ ಯೋಗಿ ಆದಿತ್ಯನಾಥ್