ಮಾಸ್ಕೋ: ಉಕ್ರೇನ್ (Ukraine) ವಿರುದ್ಧ ಇನ್ನುಮುಂದೆ ಸಾಮೂಹಿಕ ಕ್ಷಿಪಣಿ ದಾಳಿ (Missile Strikes) ನಡೆಸುವುದಿಲ್ಲ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಹೇಳಿದ್ದಾರೆ.
ತನ್ನ ಕನಸಿನ ಕ್ರಿಮಿಯಾ ಸೇತುವೆಯನ್ನು (Missile Strikes) ಉಕ್ರೇನ್ ಉಡೀಸ್ ಮಾಡಿದ ಬಳಿಕ ಡೆಡ್ಲಿ ರಾಕೆಟ್‌ಗಳ ಮೂಲಕ ಸತತ ದಾಳಿ ನಡೆಸಿದ ರಷ್ಯಾ ಇದೀಗ ಕ್ಷಿಪಣಿ ದಾಳಿ ನಡೆಸುವುದಿಲ್ಲ. ಪಾಶ್ಚಿಮಾತ್ಯ ದೇಶವನ್ನು ನಾಶಗೊಳಿಸುವುದು ಕ್ರೆಮ್ಲಿನ್ (Kremlin) ಉದ್ದೇಶವಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ
Advertisement
Advertisement
ರಷ್ಯಾದ ಮಾರಣಾಂತಿಕ ಕ್ಷಿಪಣಿ ದಾಳಿಯು ಉಕ್ರೇನ್‌ನ ಹಲವು ಮೂಲ ಸೌಕರ್ಯಗಳಿಗೆ ಹೊಡೆತ ನೀಡಿದೆ. ಅಲ್ಲದೇ ಅಮಾಯಕರ ಪ್ರಾಣ ಬಲಿ ತೆಗೆದುಕೊಂಡಿದೆ. ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಯಿಂದಾಗಿ ಉಕ್ರೇನ್ ನಗರವು ಕತ್ತಲೆಯಲ್ಲಿ ಕಳೆಯುವಂತಾಗಿದೆ. ರಷ್ಯಾದ ಮಿಲಿಟರಿ ದಾಳಿಯನ್ನು ವಿಶ್ವದ ಅನೇಕ ನಾಯಕರು ಖಂಡಿಸಿದರು. ಇದರಿಂದ ರಷ್ಯಾ ತನ್ನ ಕ್ಷಿಪಣಿ (Missile) ದಾಳಿಯಿಂದ ಹಿಂದೆ ಸರಿದಿದೆ. ಇದನ್ನೂ ಓದಿ: ಲಂಕನ್ನರಿಗೆ ಲಗಾಮು ಹಾಕಿ 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ
Advertisement
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಕ್ರಿಯಿಸಿ, ಉಕ್ರೇನ್ ವಿರುದ್ಧ ವ್ಯಾಪಕ ದಾಳಿಯ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
Advertisement
ಸೇತುವೆ ಉಡೀಸ್ ಮಾಡಿದ್ದ ಉಕ್ರೇನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಕನಸಿನ ಕ್ರಿಮಿಯಾ-ರಷ್ಯಾ ಸಂಪರ್ಕಿಸುವ ಸೇತುವೆಯನ್ನು (Missile Strikes) ಉಕ್ರೇನ್ ಉಡೀಸ್ ಮಾಡಿತ್ತು. ರಷ್ಯಾ ಆಕ್ರಮಿತ ಕ್ರಿಮಿಯಾ ಭಾಗದ ಮೂಲಕ ಉಕ್ರೇನ್‌ನ ಖೇರ್ಸನ್, ರ‍್ಝಿಯಾದಲ್ಲಿರುವ ಸೇನೆಗೆ ಇಂಧನ ಸರಬರಾಜು ರಷ್ಯಾದ ರೈಲನ್ನು ಉಕ್ರೇನ್ ಉಡಾಯಿಸಿತ್ತು. ಸ್ಫೋಟದಲ್ಲಿ ಮೂವರು ಸಾವನ್ನಪ್ಪಿದ್ದರು.
ಕಪ್ಪುಸಮುದ್ರ ಮತ್ತು ಅಜೋವ್ ಸಮುದ್ರವನ್ನು ಸಂಪರ್ಕಿಸುವ ಕ್ರೆಚ್ ಜಲಸಂಧಿಗೆ ಅಡ್ಡಲಾಗಿ ನಿರ್ಮಿಸಿರುವ 19 ಕಿ.ಮೀ. ಉದ್ದದ ಈ ಸೇತುವೆಯನ್ನು 2018ರಲ್ಲಿ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಇದು ಯೂರೋಪ್‌ನಲ್ಲಿಯೇ ಅತಿ ಉದ್ದದ ಸೇತುವೆಯಾಗಿದೆ.
ಸೇತುವೆ ಧ್ವಂಸಗೊಳಿಸಿದ ಬಳಿಕ ಕೆರಳಿದ ರಷ್ಯಾ ಪ್ರತಿಯಾಗಿ 75 ಕ್ಷಿಪಣಿ ಹಾಗೂ 5 ಡೆಡ್ಲಿ ರಾಕೆಟ್‌ಗಳ ಮೂಲಕ ಉಕ್ರೇನ್ ಮೇಲೆ ದಾಳಿ ನಡೆಸಿತ್ತು. ಇರಾನಿ ಡ್ರೋನ್‌ಗಳ (Iranian Drones) ಮೂಲಕ ಅಟ್ಯಾಕ್ ಮಾಡಿತ್ತು.