– ಅಂದು ಬಿಎಂಆರ್‌ಸಿಎಲ್ ನಿಂದ ಇಂದಿರಾನಗರ- ಎಂಜಿ ರಸ್ತೆಗೆ ಉಚಿತ ಬಸ್ ವ್ಯವಸ್ಥೆ
ಬೆಂಗಳೂರು: ನೇರಳೆ ಮಾರ್ಗದಲ್ಲಿ ನಾಳೆಯೂ ನಮ್ಮ ಮೆಟ್ರೋ ರೈಲು ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ನಿಗಮವು (ಬಿಎಂಆರ್‌ಸಿಎಲ್) ಮಾಹಿತಿ ನೀಡಿದೆ.
ಬೈಲಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ಸಮೀಪದ ಮೆಟ್ರೋ ಸೇತುವೆಯ ವಯಾಡಕ್ಟ್ ನಲ್ಲಿ ಬಿರುಕು ದುರಸ್ತಿ ಕಾಮಗಾರಿ ಪೂರ್ಣಗೊಂಡಿಲ್ಲ. ಹೀಗಾಗಿ ಇಂದಿರಾನಗರದಿಂದ ಎಂಜಿ ರಸ್ತೆವರಿಗೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Advertisement
ಸಿಸ್ಟಮ್ ಪರೀಕ್ಷೆ ಸಿಗ್ನಲಿಂಗ್ ರೈಲ್ವೇ ಟ್ರ್ಯಾಕ್ ಪರಿಶೀಲನೆ ಹಿನ್ನೆಲೆ ದುರಸ್ತಿ ಕಾರ್ಯ ವಿಸ್ತರಣೆಯಾಗಿದ್ದು, ಜನವರಿ 1ರಿಂದ ಆರಂಭವಾಗಲಿದೆ. ಈ ಮೂಲಕ ಹೊಸ ವರ್ಷಾಚರಣೆಗೆ ಎಂಜಿ ರಸ್ತೆಗೆ ಬರುವ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‍ಟಿಸಿಎಲ್ ಶಾಕ್ ಕೊಟ್ಟಿದೆ.
Advertisement
Train services between MG road to Indranagar will commence on 1st January 2019 instead of 31st December 2018. May kindly take note of this change . pic.twitter.com/Us6mmtNswr
— ನಮ್ಮ ಮೆಟ್ರೋ (@cpronammametro) December 30, 2018
Advertisement
ಟ್ರಿನಿಟಿ ಸಮೀಪ ಕಾಣಿಸಿಕೊಂಡಿದ್ದ ವಯಾಡಕ್ಟ್ ನಲ್ಲಿ ಬಿರುಕು ದುರಸ್ತಿ ಕಾಮಗಾರಿ ಡಿಸೆಂಬರ್ 30ರಂದು ಪೂರ್ಣಗೊಳ್ಳುತ್ತದೆ ಎಂದು ಬಿಎಂಆರ್‌ಸಿಎಲ್ ಭರವಸೆ ನೀಡಿತ್ತು. ಆದರೆ ಇನ್ನೂ ದುರಸ್ತಿ ಬಾಕಿ ಇರುವುದರಿಂದ ನಾಳೆ ರಾತ್ರಿಯವರೆಗೂ ಕಾಮಗಾರಿ ನಡೆಯಲಿದ್ದು, ಮೆಟ್ರೋ ರೈಲು ಸಂಚಾರವನ್ನು ನಿಲ್ಲಿಸಲಾಗಿದೆ.
Advertisement
ಹೊಸ ವರ್ಷಕ್ಕೆ ಇಂದಿರಾನಗರ ಎಂಜಿ ರಸ್ತೆ ನಡುವೆ ಮೆಟ್ರೋ ರೈಲು ಸಂಚಾರ ಬಂದ್ ಆಗಿದ್ದರಿಂದ ಈ ಮಾರ್ಗದಲ್ಲಿ ಉಚಿತ ಬಿಎಂಟಿಸಿ ಸೇವೆ ಒದಗಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv