ಮಡಿಕೇರಿ: ಆಯಾ ಜಿಲ್ಲೆಗಳಲ್ಲಿ ಇರುವ ಪಾನೀಯ ನಿಗಮದ ಡಿಪೋಗಳಲ್ಲಿ ನೇರವಾಗಿ ಹಣ ಪಾವತಿಸಿಕೊಂಡು ಮದ್ಯ ಸರಬರಾಜು ಮಾಡುತ್ತಿದ್ದ ಕೆಎಸ್ ಬಿಸಿಎಲ್ ಇದೀಗ ಆನ್‍ಲೈನ್ ಮೂಲಕ ಇಂಡೆಂಟ್ ಪಡೆದುಕೊಳ್ಳುತ್ತಿರುವ ಪರಿಣಾಮ ಕೊಡಗಿನ ಎಲ್ಲಾ ಮದ್ಯದಂಗಡಿಗಳಲ್ಲಿ ದಾಸ್ತಾನು ಇಲ್ಲದೆ ಎಲ್ಲವೂ ಖಾಲಿ ಖಾಲಿ ಹೊಡೆಯುತ್ತಿವೆ. ಪರಿಣಾಮ ಚಿಲ್ಡ್ ಮದ್ಯಗಳ ಮತ್ತಿನಲ್ಲಿ ಕೊಡಗಿನಲ್ಲಿ ಎಂಜಾಯ್ ಮಾಡಲು ಬರುತ್ತಿದ್ದ ಪ್ರವಾಸಿಗರು ನಿರಾಸೆ ಅನುಭವಿಸುವಂತೆ ಆಗಿದೆ. ಮತ್ತೊಂದೆಡೆ ಕೊಡಗಿನ ಮದ್ಯ ಮಾರಾಟಗಾರರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತೆ ಆಗಿದೆ.
ಏಪ್ರಿಲ್ ಒಂದರಿಂದ ಕೆಎಸ್ ಬಿಸಿಎಲ್ ಮದ್ಯ ಖರೀದಿಗೆ ಹೊಸ ನಿಯಮ ಜಾರಿ ಮಾಡಿದೆ. ಈ ನಿಯಮ ಪ್ರಕಾರ ಮದ್ಯ ಮಾರಾಟಗಾರರು ಆನ್‍ಲೈನ್ ನಲ್ಲಿಯೇ ಮದ್ಯ ಖರೀದಿಯ ಇಂಡೆಂಟ್ ಸಲ್ಲಿಸಬೇಕು. ಆ ಬಳಿಕ ಅವುಗಳ ಬಿಲ್ ಸಿದ್ಧಗೊಂಡಾಗಷ್ಟೇ ಮಾರಾಟಗಾರರು ಮದ್ಯ ಖರೀದಿ ಮಾಡಬೇಕಾಗಿದೆ. ಇದು ವ್ಯಾಪಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದರೆ, ಮದ್ಯ ಪ್ರಿಯರಿಗೆ ತಮ್ಮಿಷ್ಟದ ಮದ್ಯ ಸಿಗದೆ ನಿರಾಸೆ ಅನುಭವಿಸುತ್ತಿದ್ದಾರೆ.
Advertisement
Advertisement
ವೀಕೆಂಡ್ ದಿನಗಳಲ್ಲಿ ಕೊಡಗಿಗೆ ಬರುವ ಪ್ರವಾಸಿಗರಲ್ಲಿ ಬಹುತೇಕರು ಮದ್ಯವನ್ನು ಸೇವಿಸಿ ಎಂಜಾಯ್ ಮಾಡಿ ಹೋಗುತ್ತಾರೆ. ಆದರೆ ಆನ್‍ಲೈನ್ ಇಂಡೆಂಟ್ ಸಲ್ಲಿಸಿ ಮೂರು ನಾಲ್ಕು ದಿನಗಳಾದರೂ ಬಿಲ್ಲುಗಳು ಸಿದ್ಧಗೊಳ್ಳುತ್ತಿಲ್ಲ. ಹೀಗಾಗಿ ವಾರದ ಕೊನೆ ದಿನಗಳಲ್ಲಿ ಅಗತ್ಯವಿರುವಷ್ಟು ಮದ್ಯ ಇಲ್ಲದೆ ನಿತ್ಯ ಶೇ. 30 ರಿಂದ 40ರಷ್ಟು ನಷ್ಟ ಅನುಭವಿಸುತ್ತಿದ್ದೇವೆ ಎನ್ನುವುದು ಮದ್ಯ ವ್ಯಾಪಾರಿಗಳ ಅಳಲಾಗಿದೆ. ಇದನ್ನೂ ಓದಿ: ಪಾಪ ಸಿದ್ದರಾಮಯ್ಯಗೆ ಇತ್ತೀಚೆಗೆ ಏನಾಗ್ತಿದೆಯೋ ಗೊತ್ತಾಗ್ತಿಲ್ಲ: ಸುಧಾಕರ್ ತಿರುಗೇಟು
Advertisement
Advertisement
ಇನ್ನು ಕೊಡಗಿಗೆ ಬರುವ ಪ್ರವಾಸಿಗರು ಸಹಜವಾಗಿ ಹೋಂಸ್ಟೇಗಳಲ್ಲಿ ತಂಗುತ್ತಾರೆ. ಈ ವೇಳೆ ತಮಗೆ ಇಷ್ಟವಾದ ಬ್ರ್ಯಾಂಡ್‍ಗಳ ಮದ್ಯವನ್ನು ಕೇಳುತ್ತಾರೆ. ಆದರೆ ಮದ್ಯದಂಗಡಿಗಳಲ್ಲಿ ದಾಸ್ತಾನುಗಳ ಸಮಸ್ಯೆಯಿಂದಾಗಿ ಪ್ರವಾಸಿಗರ ಇಷ್ಟದ ಬ್ರ್ಯಾಂಡ್‍ಗಳು ಸಿಗುತ್ತಿಲ್ಲ. ಇದರಿಂದ ಪ್ರವಾಸಿಗರು ನಿರಾಶರಾಗುತ್ತಿದ್ದು, ಕಳೆದ ಒಂದು ವಾರದಲ್ಲಿ ಕೊಡಗಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆಯೇ ಕಡಿಮೆ ಆಗಿದೆ ಎಂದು ಹೋಂಸ್ಟೇ ಮಾಲೀಕರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಡುಬೀದಿಯಲ್ಲೇ 25 ವರ್ಷದ ಮಗನಿಗೆ ಬೆಂಕಿ ಹಚ್ಚಿದ ತಂದೆ: ಸಾವು-ಬದುಕಿನ ನಡ್ವೆ ಹೋರಾಡ್ತಿದ್ದಾಗ ಅರ್ಪಿತ್ ಹೇಳಿದ್ದೇನು..?
ಒಟ್ಟಿನಲ್ಲಿ ಕೆಎಸ್ ಬಿಸಿಎಲ್ ಮಾಡಿರುವ ಹೊಸ ನಿಯಮದಿಂದ ಕೊಡಗಿನ ಮದ್ಯ ಮಾರಾಟಗಾರರು ಕಳೆದು ಒಂದು ವಾರದಲ್ಲಿಯೇ ಕನಿಷ್ಟ ತಲಾ 4 ಲಕ್ಷ ರೂಪಾಯಿವರೆಗೆ ನಷ್ಟ ಅನುಭವಿಸಿದ್ದಾರೆ. ಮತ್ತೊಂದೆಡೆ ಪ್ರವಾಸಿಗರು ಕೊಡಗಿಗೆ ಬರುವ ಸಂಖ್ಯೆಯೇ ಕಡಿಮೆ ಆಗಿದ್ದು ಇದು ಹೋಂಸ್ಟೇ ಮತ್ತು ರೆಸಾರ್ಟ್ ಉದ್ದಿಮೆ ಮೇಲೂ ದುಷ್ಟರಿಣಾಮ ಬೀರಿದೆ.