ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅತೀ ಹೆಚ್ಚು ವಿಶ್ರಾಂತಿಯೇ ಪಡೆಯದೇ ಕರ್ತವ್ಯ ಮಾಡುವವರಲ್ಲಿ ಅಗ್ರ ಗಣ್ಯರು ಅಂದ್ರೆ ಪಾಲಿಕೆ ಪೌರಕಾರ್ಮಿಕರು. ಇವರಿಗೆ ಒಂದು ವೀಕಾಫ್ ಇರಲ್ಲ. ಸಣ್ಣ ಜ್ವರ, ಮನೆಯಲ್ಲಿ ಯಾರಾದ್ರೂ ಸತ್ರು ಅಂತ ರಜೆ ಹಾಕಿದ್ರೆ ಮುಗಿತು ಸಂಬಳ ಕಟ್.
Advertisement
ಅಚ್ಚರಿಯೆನ್ನಿಸಿದ್ರು ನಿಜ. ಇವರು ವಾರದ 7 ದಿನ ಪಕ್ಕಾ ಕೆಲಸಕ್ಕೆ ಹಾಜರಾಗುತ್ತಾರೆ. ಇದಕ್ಕೆ ಸಾಕ್ಷಿ ರಸ್ತೆಗಳು, ಮನೆಯಿಂದ ಖಾಲಿ ಆಗುವ ಕಸವೇ ಸಾಕ್ಷಿ. ಹೀಗಿರುವಾಗ ಅನಿವಾರ್ಯತೆ ಎಲ್ಲರಿಗೂ ಇರುತ್ತೆ. ಅಪ್ಪಿ ತಪ್ಪಿ ಒಂದು ದಿನ ರಜೆ ಹಾಕಿದರೂ ಸಂಬಳಕ್ಕೆ ಕತ್ತರಿ. ಬಯೋ ಮೆಟ್ರಿಕ್ ಹಾಕದಿದ್ದರೆ ಸಂಬಳ ಕೊಡಲ್ಲ. ಗಂಡನ ಸಾವಿನ ಹಿನ್ನೆಲೆಯಲ್ಲಿ ತಿಂಗಳು ರಜಾ ಹಾಕಿದ್ರು ಸಂಬಳ ಒಂದೂ ದಿನದು ಕೊಡದೇ ಕಟ್ ಮಾಡುತ್ತಾರೆ.
Advertisement
Advertisement
ಈ ಕಾಟ ಬಿಬಿಎಂಪಿಗೆ ಸೀಮಿತವಾಗಿಲ್ಲ. ಅದು ಪಿಡಬ್ಲ್ಯೂಡಿ ಸ್ವಚ್ಛತಾ ಸಿಬ್ಬಂದಿಗೂ ಇದೆ. ಶಕ್ತಿಸೌಧ ಸುತ್ತಮುತ್ತ ಸ್ವಚ್ಛತೆ ಮಾಡುವ ಸಿಬ್ಬಂದಿಗೆ ಕೂಡ ಇದೇ ಗತಿ. ಹಾಗಂತ ಇವರಿಗೆ ಮತ್ತೊಂದು ಐಡಿಯಾ ಮಾಡಿದ್ದಾರೆ. ಈ ಪ್ರಕಾರ ಬುಧವಾರ, ಭಾನುವಾರ 11 ಗಂಟೆವರೆಗೂ ಕೆಲಸ ಆಮೇಲೆ ರಜೆ ಅಂತಾ ಹೇಳಿದ್ದಾರೆ. ಹೀಗಾಗಿ ಒಂದು ಊರು, ಒಂದ್ ಫಂಕ್ಷನ್, ನೆಂಟರ ಮನೆಗೆ ಒಂದು ದಿನ ಹೋಗಿಲ್ಲ, ಉಳಿದಿಲ್ಲ. ಇದು ಬಿಟ್ಟು ಕಾಯಿಲೆ ಬಂದರೂ ರಜೆ ಹಾಕುವಂತಿಲ್ಲ. ಅದಕ್ಕೂ ರೂಲ್ಸ್ ಇದೆ. ಅದುವೇ ಇಎಸ್‍ಐ ಹೋಗಿ ಆರೋಗ್ಯ ಸಂಬಂಧ ಚೀಟಿ ಪಡೆಯಬೇಕು. ಆಮೇಲೆ ಬೇಕಾದರೆ ಬೇರೆ ಯಾವುದೇ ಸಣ್ಣ ಪುಟ್ಟ ಆಸ್ಪತ್ರೆ ತೊರಿಸಬಹುದು. ಮನೆ ಹತ್ತಿರ ಗೊತ್ತು ಅಂತಾ ಹೋಗಿ ತೋರಿಸಿ ಚೀಟಿ ಕೊಟ್ಟರೆ ಒಪ್ಪುವ ಮಾತೇ ಇಲ್ಲ. ರಜೆಗೆ ಸಂಬಳ ಕಟ್ ಇಲ್ಲ ಸಜೆ ಫಿಕ್ಸ್.
Advertisement
16800 ಖಾಯಂ ಪೌರಕಾರ್ಮಿಕರಿಲ್ಲವಾದ್ರೆ ನಿಜ ರಸ್ತೆ, ಚರಂಡಿ, ಮನೆ ಕಸ ಕ್ಲಿಯರ್ ಆಗಲ್ಲ ಒಪ್ಪಿಕೊಳ್ಳೋನ. ಆದರೆ ಹಾಗಂತ ಕಾಯಿಲೆ, ಜ್ವರಕ್ಕೂ ಚಿಕಿತ್ಸೆ ಪಡೆದಾಗ ಚೀಟಿ ಕೊಟ್ರು ಸಂಬಳ ಕೊಡದ ಈ ಸ್ಥಿತಿ ಯಾರಿಗೂ ಬೇಡ. ಅದಕ್ಕೆ ಪೌರಕಾರ್ಮಿಕರ ತ್ಯಾಗಕ್ಕೆ ಸರಿ ಸಾಟಿಯೇ ಇಲ್ಲ. ಒಟ್ಟಿನಲ್ಲಿ ಇನ್ನಾದರೂ ಪಾಲಿಕೆ ಅವರ ರಜೆ ಹಾಗೂ ಕಾಯಿಲೆ ಸಂಬಂಧಿತ ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.