ಬೆಂಗಳೂರು: ಬಿಜೆಪಿ ಅಧಿಕಾರ ಇರುವ ರಾಜ್ಯಗಳಲ್ಲಿ ಐಟಿ ದಾಳಿ ಆಗಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದ್ದಾರೆ.
ಐಟಿ ದಾಳಿ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಇಲ್ಲದೆ ಐಟಿ ದಾಳಿ ಇರಲ್ಲ. ರಾಜಕೀಯ ಲಿಂಕ್ ಇರುತ್ತೆ. ಛತ್ತೀಸಗಢ್ ದಲ್ಲೂ ದಾಳಿ ಆಗಿದೆ ಎಂದರು.
ಐಟಿ ದಾಳಿಯಲ್ಲಿ ಸಿಕ್ಕ ಹಣ ಪಂಚ ರಾಜ್ಯಗಳ ಫಂಡಿಂಗ್‍ಗೆ ಸಂಗ್ರಹ ಎಂಬ ಬಿಜೆಪಿ ಆರೋಪ ವಿಚಾರ ಪ್ರತಿಕ್ರಿಯಿಸಿ, ಅವರಿಗೆಲ್ಲ ರಿಯಾಕ್ಟ್ ಮಾಡಲ್ಲ. ಹಾದಿ ಬೀದಿಯಲ್ಲಿ ಮಾತಾಡೋರಿಗೆಲ್ಲ ರಿಯಾಕ್ಟ್ ಮಾಡೋದಕ್ಕೆ ಆಗಲ್ಲ. ಬೆಂಗಳೂರಿನ ಐಟಿ ದಾಳಿ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ. ಏನ್ ಆಗಿದೆ ಅಂತಾನೂ ಗೊತ್ತಿಲ್ಲ, ನನಗೆ ಯಾರೂ ಮಾಹಿತಿ ಕೊಟ್ಟಿಲ್ಲ. ರಾಜಕೀಯ ಇಲ್ಲದೆ ಇವೆಲ್ಲ ಆಗ್ತಾವಾ ಎಂದು ಡಿಕೆಶಿ ಪ್ರಶ್ನಿಸಿದರು. ಇದನ್ನೂ ಓದಿ: IT Raid In Bengaluru: 42 ಕೋಟಿ ಹಣ ಸಿಕ್ಕಿದ್ದು ಅಂಬಿಕಾಪತಿ ಮಗಳ ನಿವಾಸದಲ್ಲಿ!
ಗುತ್ತಿಗೆದಾರರ ಬಿಲ್ ಬಾಕಿ ಬಗ್ಗೆ ಕೆಂಪಣ್ಣ ಸುದ್ದಿಗೋಷ್ಟಿ ಸಂಬಂಧ ಮಾತನಾಡಿ, ಕೆಂಪಣ್ಣ ಅವರು ಗಾಬರಿ ಆಗೋದು ಬೇಡ. ತನಿಖೆ ನಡೆಯುತ್ತಿದ್ದರೂ ಕೂಡ 70% ಬಿಲ್ ಕ್ಲಿಯರ್ ಮಾಡಿದ್ದೀವಿ. ಕೆಂಪಣ್ಣ ಅವರಿಗೆ ಏನಾದರೂ ಸಮಸ್ಯೆ ಇದ್ರೆ ಬಂದು ಮಾತಾಡಲಿ ಎಂದರು.
ಆದ್ಯತೆ ಮೆರೆಗೆ ಹಣ ಬಿಡುಗಡೆ ಮಾಡಿದ್ದೇವೆ. ತನಿಖೆ ನಡೆಯುತ್ತಿದ್ರೂ ಬಿಲ್ ಬಿಡುಗಡೆ ಮಾಡಿದ್ದೇವೆ. ಅವರಿಗೆ ಸಹಾಯ ಆಗಲಿ ಅಂತ ಬಿಡುಗಡೆ ಮಾಡಿದ್ದೇವೆ. ತನಿಖೆ ಪೆಂಡಿಂಗ್ ಇಟ್ಟು ಹಣ ಬಿಡುಗಡೆ ಮಾಡಿದ್ದೇವೆ. ಸರ್ಕಾರ ಕಾಮಗಾರಿಗಳ ತನಿಖೆ ಮಾಡುತ್ತಿದೆ. ಕೆಂಪಣ್ಣ ಹೇಳಿದ್ರು ಅಂತಾ ಹಣ ಬಿಡುಗಡೆ ಮಾಡಿದ್ದೇವೆ. ಕೆಂಪಣ್ಣ ಗಾಬರಿಪಡಬೇಕಾದ ಅವಶ್ಯಕತೆ ಇಲ್ಲ. ಅವರಿಗೆ ಸಮಸ್ಯೆ ಇದ್ರೆ, ಬೇಕಾದ್ರೆ ಬಂದು ನನ್ನ ಭೇಟಿ ಮಾಡಲಿ. ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]