ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇಂದಿರಾ ಕ್ಯಾಂಟೀನ್ ಕೂಡಾ ಒಂದು. ಬೆಂಗಳೂರಿಗೆ ಸೀಮಿತವಾಗಿದ್ದ ಈ ಯೋಜನೆ ಚುನಾವಣೆ ಹೊತ್ತಲ್ಲಿ ಜಿಲ್ಲಾ ಕೇಂದ್ರಗಳು, ತಾಲೂಕು ಕೇಂದ್ರಗಳಿಗೂ ವಿಸ್ತರಣೆಗೊಳ್ಳುತ್ತಿದೆ. ಆದ್ರೆ ಬಡವರ ಹೊಟ್ಟೆ ತುಂಬಿಸಬೇಕಿದ್ದ ಯೋಜನೆಯಲ್ಲಿ ಆರಂಭದಲ್ಲೇ ಹಗರಣ ನಡೆದಿರೋದು ಬೆಳಕಿಗೆ ಬಂದಿದೆ.
Advertisement
ಇಂದಿರಾ ಕ್ಯಾಂಟೀನ್ ಇಲ್ಲದೇ ಹೋದರೂ ಅನ್ನಾಹಾರ ಪೂರೈಸಿದ್ದೇವೆ ಅಂತ ಸುಳ್ಳು ಹೇಳಿ ದುಡ್ಡು ಹೊಡೆದಿರೋದು ಬಯಲಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸ್ವಕ್ಷೇತ್ರ ಸರ್ವಜ್ಞನಗರದ ಕಾಚರಕನಹಳ್ಳಿಯಲ್ಲಿ ಇಂದಿರಾ ಕ್ಯಾಂಟೀನ್ ಇಲ್ಲ, ಮೊಬೈಲ್ ಕ್ಯಾಂಟೀನೂ ಇಲ್ಲ. ಆದ್ರೆ ಜನವರಿ 1ರಿಂದಲೇ ಊಟ ಪೂರೈಸಲಾಗ್ತಿದೆ ಅಂತ ದಾಖಲೆಗಳಲ್ಲಿ ತೋರಿಸಲಾಗಿದೆ.
Advertisement
ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಪ್ರತಿನಿಧಿಸೋ ವಾರ್ಡ್ನಲ್ಲಾಗಿರೋ ದೋಖಾದ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆಯ ಅಧ್ಯಕ್ಷ ನಾಗೇಶ್ ದಾಖಲೆ ಸಂಗ್ರಹಿಸಿದ್ದಾರೆ. ಈ ಕುರಿತು ಎಸಿಬಿಗೂ ದೂರು ನೀಡಲಿದ್ದಾರೆ. ಇಲ್ಲದ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಾಗಿರೋ ಅಕ್ರಮದ ಬಗ್ಗೆ ಪದ್ಮನಾಭ್ ರೆಡ್ಡಿ ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ.
Advertisement
Advertisement