ಮುಂಬೈ: ವಿದೇಶಿ ಪ್ರವಾಸದ ವೇಳೆ ಪತ್ನಿಯರಿಗೂ ಆಟಗಾರರ ಜೊತೆ ಬರಲು ಅವಕಾಶ ನೀಡಿ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐಗೆ ಮನವಿ ಮಾಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುಪ್ರೀಂ ಕೋರ್ಟ್ ನೇಮಿಸಿದ ಬಿಸಿಸಿಐ ಆಡಳಿತ ಸಮಿತಿ, ಈ ಕುರಿತು ತಕ್ಷಣ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪತ್ರಿಕ್ರಿಯೆ ನೀಡಿರುವುದಾಗಿ ವರದಿಯಾಗಿದೆ.
Advertisement
Advertisement
ಪತ್ನಿಯರನ್ನು ಪ್ರವಾಸಕ್ಕೆ ಕರೆದುಕೊಂಡು ಬರಲು ಅನುಮತಿ ನೀಡುವಂತೆ ಕೊಹ್ಲಿ ಮನವಿ ಮಾಡಿದ್ದಾರೆ. ಆದರೆ ನಾವು ಕೂಡಲೇ ಯಾವುದೇ ತೀರ್ಮಾನ ಮಾಡುವುದಿಲ್ಲ. ಈ ನಿರ್ಧಾರ ಕೈಗೊಳ್ಳಲು ಸಮಿತಿಗೆ ಅವಕಾಶ ನೀಡಲಾಗುವುದು. ಸದ್ಯ ಈ ನಿಯಮ ಬದಲಾಗುವುದಿಲ್ಲ ಎಂದು ಆಡಳಿತ ಸಮಿತಿ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಮಾಡಿದೆ.
Advertisement
Advertisement
ಸುದೀರ್ಘ ಅವಧಿಯ ವಿದೇಶಿ ಟೂರ್ನಿಯ ವೇಳೆ ಆಟಗಾರರ ಪತ್ನಿಯರಿಗೆ ತಂಡದೊಂದಿಗೆ ಬರುವ ಅವಕಾಶ ಕಲ್ಪಿಸುವ ಕುರಿತು ಕೊಹ್ಲಿ ಮನವಿ ಮಾಡಿದ್ದಾರೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾದ ಬೆನ್ನಲ್ಲೇ ಆಡಳಿತ ಮಂಡಳಿ ಈ ಪ್ರತಿಕ್ರಿಯೆ ನೀಡಿದೆ. ಅಲ್ಲದೇ ಈ ಕುರಿತ ನಿಯಮ ಬದಲಾವಣೆ ಮಾಡಲು ಟೀಂ ಇಂಡಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಸುನಿಲ್ ಸುಬ್ರಮಣ್ಯಂ ಅವರಿಗೆ ಮನವಿ ಮಾಡಿರುವುದಾಗಿ ಮೂಲಗಳಿಂದ ಮಾಧ್ಯಮಗಳಿಗೆ ಮಾಹಿತಿ ಲಭಿಸಿದೆ.
ಟೀಂ ಇಂಡಿಯಾ ಸದ್ಯ ತವರು ನೆಲದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ನಡುವಿನ ಮೂರು ಮಾದರಿಯ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇದಾದ ಬಳಿಕ ನವೆಂಬರ್ 21 ರಿಂದ ಆರಂಭವಾಗುವ ಆಸ್ಟೇಲಿಯಾ ವಿರುದ್ಧ ಟೂರ್ನಿಯಲ್ಲಿ ಭಾಗವಹಿಸಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv