ಗುವಾಹಟಿ: ಬಾಂಗ್ಲಾದೇಶದಿಂದ ಭಾರತಕ್ಕೆ ಹಿಂದೂಗಳು ಪ್ರವೇಶಿಸುವ ಪ್ರಯತ್ನ ಮಾಡಿಲ್ಲ. ಆದರೆ ನಾವು ಇದುವರೆಗೂ 35 ಮುಸ್ಲಿಂ ನುಸುಳುಕೋರರನ್ನು ಬಂಧಿಸಿದ್ದೇವೆ ಎಂದು ಬಾಂಗ್ಲಾ ಬಿಕ್ಕಟ್ಟಿನ ಕುರಿತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Sarma) ಹೇಳಿದ್ದಾರೆ.
ಬಾಂಗ್ಲಾದೇಶದ ಬಿಕ್ಕಟ್ಟಿನ ಕುರಿತು ಟ್ವೀಟ್ ಮಾಡಿರುವ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳು (Hindus) ಹೋರಾಡುತ್ತಿದ್ದಾರೆ. ಅಲ್ಲೇ ಉಳಿದುಕೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ, ನಾವು ಒಬ್ಬ ಹಿಂದೂ ವ್ಯಕ್ತಿ ಭಾರತಕ್ಕೆ ಬಂದಿದ್ದನ್ನು ಪತ್ತೆ ಮಾಡಿಲ್ಲ. ಆದರೆ ಕಳೆದ ತಿಂಗಳಲ್ಲಿ ನಾವು 35 ಮುಸ್ಲಿಂ ನುಸುಳುಕೋರರನ್ನು ಬಂಧಿಸಿದ್ದೇವೆ. ಇಂದು ಕೂಡ ನಾವು ಕರೀಂಗಂಜ್‌ನಲ್ಲಿ ಇಬ್ಬರನ್ನು ಬಂಧಿಸಿದ್ದೇವೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬರೋಬ್ಬರಿ 2,100 ಕೋಟಿ ರೂ. ಚೆಕ್ ಕೊಟ್ಟ ದಾನಿ
ಬಾಂಗ್ಲಾದೇಶದಿಂದ ಹಿಂದೂಗಳು ಅಸ್ಸಾಂಗೆ ಪ್ರವೇಶಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿದ್ದಾರೆ. ನಾವು ಅವರನ್ನು ತಡೆದು ವಾಪಸ್ ಕಳಿಸಿದ್ದೇವೆ. ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್, ಅವರು ಒಂದೇ ಸಮುದಾಯಕ್ಕೆ ಸೇರಿದವರು. ಅವರ‍್ಯಾರು ಹಿಂದೂ ಅಲ್ಲ. ಯಾವುದೇ ಹಿಂದೂಗಳು ಭಾರತಕ್ಕೆ ಬರಲು ಪ್ರಯತ್ನಿಸುತ್ತಿಲ್ಲ. ಬಾಂಗ್ಲಾದಲ್ಲೇ ಇದ್ದು ಹೋರಾಟ ಮಾಡುತ್ತಿದ್ದಾರೆ. ಹಿಂದೂಗಳು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಾಂಗ್ಲಾದೇಶದ ಸರ್ಕಾರದ ಮೇಲೆ ಪ್ರಭಾವ ಬೀರಲು ನಮ್ಮ ಪ್ರಧಾನಿಯನ್ನು ವಿನಂತಿಸುತ್ತಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳನ್ನು ಅಸ್ಸಾಂ ಪೊಲೀಸರು ಬದರ್‌ಪುರ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: J&K Poll Manifesto | ಪಿಡಿಪಿ ಅಧಿಕಾರಕ್ಕೆ ಬಂದ್ರೆ 200 ಯೂನಿಟ್ ವಿದ್ಯುತ್ ಉಚಿತ – ಮೆಹಬೂಬಾ ಮುಫ್ತಿ