ಭುವನೇಶ್ವರ: ಅಪಘಾತಗಳನ್ನು ತಡೆಯುವ ಪ್ರಯತ್ನದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವಂತೆ ಮನವೊಲಿಸುವ ನೂತನ ಪ್ರಯತ್ನಗಳು ದೇಶಾದ್ಯಂತ ನಡೆಯುತ್ತಿದೆ. ಈ ಕಾನೂನಿಗೆ ಸಹಕಾರ ಎನ್ನುವಂತೆ ಒಡಿಶಾದ ದೇವಾಲಯೊಂದು ಇನ್ನು ಮುಂದೆ ಹೆಲ್ಮೆಟ್ ಇದ್ದರೆ ಮಾತ್ರ ವಾಹಗಳಿಗೂ ಪೂಜೆ ಮಾಡಲಾಗುತ್ತದೆ ಎಂಬ ನಿಯಯವನ್ನು ತಂದಿದೆ.
ಒಡಿಶಾದ ಪೊಲೀಸರು ಈ ನೂತನ ಹೊಸ ಪ್ರಯೋಗವನ್ನು ಮಾಡಲು ಮುಂದಾಗಿದ್ದು, ಜಗತ್ ಸಿಂಗ್‍ಪುರ್ ನಲ್ಲಿರುವ ಪ್ರಸಿದ್ಧ ಸರಳಾ ದೇವಾಲಯದಲ್ಲಿ ಹೊಸ ಬೈಕ್‍ಗೆ ಪೂಜೆ ಮಾಡಿಸುವ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಖರೀದಿಸರಬೇಕು. ಒಂದು ವೇಳೆ ಹೆಲ್ಮೆಟ್ ಖರೀದಿಸದೇ ಆಗಮಿಸಿದ್ದರೆ ಆ ಬೈಕ್ ಗಳಿಗೆ ಪೂಜೆ ಮಾಡಬಾರದು ಎಂದು ಆರ್ಚಕರಿಗೆ ಸೂಚಿಸಿದ್ದಾರೆ.
ಹೆಲ್ಮೆಟ್ ಧರಿಸದ ಕಾರಣ ಜಾಸ್ತಿ ಅಪಘಾತವಾಗುತಿತ್ತು. ಈ ಅಪಘಾತವನ್ನು ತಪ್ಪಿಸುವುದು ಹೇಗೆ ಎಂದು ಚಿಂತನೆ ನಡೆಸಿದಾಗ ನಮಗೆ ಈ ಆಲೋಚನೆ ಹೊಳೆಯಿತು. ವಾಹನ ಅಥವಾ ಬೈಕ್ ಖರೀದಿಸಿದರೆ ಮೊದಲು ಅವುಗಳಿಗೆ ಪೂಜೆ ಮಾಡಿಸಲು ಸಂಪ್ರದಾಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸುತ್ತಾರೆ. ಆದ್ದರಿಂದ ಬೈಕ್ ಖರೀದಿಸಿದವರು ಜೊತೆಗೆ ಹೆಲ್ಮೆಟ್ ಕೂಡ ಖರೀದಿಸಬೇಕು. ಅಷ್ಟೇ ಅಲ್ಲದೇ ಹೆಲ್ಮೆಟ್ ನನ್ನು ತಪ್ಪದೇ ಧರಿಸಬೇಕು ಎನ್ನುವ ಜಾಗೃತಿ ಮೂಡಿಸಲು ಈ ಪ್ರಯತ್ನವನ್ನು ಆರಂಭಿಸಿದ್ದೇವೆ ಎಂದು ಎಸ್‍ಪಿ ಜೈ ನಾರಾಯಣ್ ಪಂಕಜ್ ಹೇಳಿದ್ದಾರೆ.
ನಮ್ಮ ನಿರ್ಧಾರವನ್ನು ಪುರೋಹಿತರು ಒಪ್ಪಿಕೊಂಡಿದ್ದು, ಜಗತ್‍ಸಿಂಗ್‍ಪುರದಲ್ಲಿ ನೋಂದಣಿಯಾಗುವ ಬಹುತೇಕ ಜನರು ತಮ್ಮ ವಾಹನಗಳನ್ನು ಇದೇ ದೇವಾಲಯಕ್ಕೆ ಬಂದು ಪೂಜೆ ಮಾಡಿಸುತ್ತಾರೆ. ಅಷ್ಟೇ ಅಲ್ಲದೇ ಪ್ರತಿ ನಿತ್ಯ 10ಕ್ಕೂ ಹೆಚ್ಚು ಬೈಕ್‍ಗಳು ಇಲ್ಲಿಗೆ ಪೂಜೆಗಾಗಿ ಬರುತ್ತವೆ. ಅದರಲ್ಲೂ ಸಂಕ್ರಾಂತಿಯಂತಹ ವಿಶೇಷ ದಿನಗಳಂದು 50ಕ್ಕೂ ಜಾಸ್ತಿ ಬೈಕ್‍ಗಳು ಪೂಜೆಗಾಗಿ ಬರುತ್ತವೆ. ಈ ದೇವಾಲಯದಲ್ಲಿ ಸುಮಾರು 1 ಸಾವಿರ ಹಳೆಯದಾಗಿದ್ದು, ಸಾವಿರಾರು ಜನರು ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ ಈ ದೇವಾಲಯವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಕರ ಸಂಕ್ರಾಂತಿ ಹಬ್ಬದಂದು ಸುಮಾರು 20 ಹೆಲ್ಮೆಟ್ ಇಲ್ಲದ ಬೈಕ್‍ಗಳ ಪೂಜೆಯನ್ನು ನಿರಾಕರಿಸಿದ್ದೇವೆ. ವಾಹನ ಪೂಜೆ ಮಾಡಿಸಲು ಬರುವ ಪ್ರತಿಯೊಬ್ಬರೂ ಹೆಲ್ಮೆಟ್ ತರಲೇಬೇಕು. ಇಲ್ಲದಿದ್ದರೆ ಪೂಜೆಯೇ ಮಾಡಲ್ಲ ಎಂಬ ನಿಯಮವನ್ನು ಜಾರಿ ಮಾಡಿದ್ದೇವೆ. ಇತ್ತೀಚೆಗೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಇದನ್ನು ತಡೆಯುವಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪೊಲೀಸರಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಪ್ರಧಾನ ಅರ್ಚಕ ಸುದಮ್ ಚರಣ ಪಾಂಡಾ ತಿಳಿಸಿದ್ದಾರೆ.