ದುಬೈ: ಜನರನ್ನು ಪೂರ್ವಭಾವಿಯಾಗಿ ಆನ್‍ಲೈನ್ ವ್ಯವಸ್ಥೆಗೆ ತೆರೆದುಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದುಬೈನಲ್ಲಿ ಎಲ್ಲಾ ಗ್ರಾಹಕ ಸೇವಾ ಕಚೇರಿಗಳನ್ನು ಒಂದು ವಾರಗಳ ಕಾಲ ಸ್ಥಗಿತಗೊಳಿಸಲು ದುಬೈ ಸರ್ಕಾರ ನಿರ್ಧರಿಸಿದೆ.
2021ಕ್ಕೆ ದುಬೈಯನ್ನು ಸಂಪೂರ್ಣವಾಗಿ ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವ ಗುರಿಯನ್ನು ಸರ್ಕಾರ ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಆನ್‍ಲೈನ್ ವ್ಯವಹಾರವನ್ನು ಪ್ರೋತ್ಸಾಹಿಸಲು ಇಂತಹ ನಿರ್ಧಾರಕ್ಕೆ ಬಂದಿದೆ. ಎಲ್ಲಾ ಸೇವೆಗಳು ಅಕ್ಟೋಬರ್ 21 ರಿಂದ ಅಕ್ಟೋಬರ್ 25ರ ವರೆಗೆ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ.
Advertisement
ಈ ಹಿಂದೆ “ದ ಡೇ ವಿತೌಟ್ ಸರ್ವಿಸ್ ಸೆಂಟರ್ಸ್” ಹೆಸರಿನಲ್ಲಿ ಅಭಿಯಾನ ಆರಂಭಿಸಿತ್ತು. ಈಗ “ದ ವೀಕ್ ವಿತೌಟ್ ಸರ್ವಿಸ್ ಸೆಂಟರ್ಸ್” ಹೆಸರಿನಲ್ಲಿ ಅಭಿಯಾನ ಆರಂಭವಾಗಿದೆ. ದುಬೈ ದೊರೆ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಕಳೆದ ವರ್ಷವೇ ಈ ಅಭಿಯಾನಕ್ಕೆ ಒಪ್ಪಿಗೆ ಸೂಚಿಸಿದ್ದರು.
Advertisement
Advertisement
ಈ ಅಭಿಯಾನಕ್ಕೆ ಮೆಚ್ಚುಗೆ ಸೂಚಿಸಿರುವ ದುಬೈ ನಾಗರಿಕರು, ಸರ್ಕಾರದ ಈ ನಡೆಗೆ ಪ್ರೋತ್ಸಾಹ ನೀಡಿದ್ದಾರೆ. ಇದರಿಂದ ನಗರದ ಟ್ರಾಫಿಕ್ ಸಮಸ್ಯೆ, ಸಮಯದ ಉಳಿತಾಯ, ಹಣ ಮತ್ತು ಶಕ್ತಿಯ ಬಳಕೆಯನ್ನ ಕಡಿಮೆಗೊಳಿಸಲು ಉತ್ತಮ ನಡೆ ಎಂದು ಶ್ಲಾಘಿಸಿದ್ದಾರೆ.
Advertisement
ಕಳೆದ ವರ್ಷದ ಅಕ್ಟೋಬರ್ 26 ರಿಂದ ಈ ಅಭಿಯಾನ ಆರಂಭಗೊಂಡಿದ್ದು, ಒಂದು ವರ್ಷದಲ್ಲಿ ಇಂಟರ್ ನೆಟ್ ವ್ಯವಹಾರ ಪ್ರಕ್ರಿಯೆಯಿಂದ ಸರ್ಕಾರಕ್ಕೆ ಭಾರೀ ಆದಾಯ ಬಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರಿ ಗ್ರಾಹಕ ಸೇವಾ ಕಚೇರಿಗಳು ತೆರೆಯದೇ ಇದ್ದರೂ ಜನರು ಮೊಬೈಲ್ ಆ್ಯಪ್ ಅಥವಾ ವೆಬ್ ಸೈಟಿಗೆ ತೆರಳಿ ಈ ಸೇವೆಯನ್ನು ಪಡೆಯಬಹುದು ಎಂದು ದುಬೈ ಸರ್ಕಾರ ಹೇಳಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv