ನವದೆಹಲಿ: ದೇವರ ಜಾತಿ ಬಗ್ಗೆ ಈಗ ವಿವಾದ ಎದ್ದಿದೆ. ಯಾವ ದೇವರು ಕೂಡ ಬ್ರಾಹ್ಮಣ ಸಮುದಾಯದಿಂದ ಬಂದಿಲ್ಲ. ಎಲ್ಲಾ ದೇವರುಗಳು ಕ್ಷತ್ರೀಯ ಸಮುದಾಯದವರೇ ಆಗಿದ್ದಾರೆ ಎಂದು ಜವಾಹರ್ ಲಾಲ್ ನೆಹರೂ ವಿವಿಯ ಉಪಕುಲಪತಿ ಶಾಂತಿಶ್ರೀ ಪಂಡಿತ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವಶಾಸ್ತ್ರ ಮತ್ತು ವೈಜ್ಞಾನಿಕವಾಗಿ ದೇವರುಗಳ ಹುಟ್ಟಿನ ಬಗ್ಗೆ ನೋಡಿದಲ್ಲಿ, ಯಾವ ದೇವರು ಕೂಡ ಬ್ರಾಹ್ಮಣರಲ್ಲ. ಹೆಚ್ಚಿನ ದೇವರುಗಳು ಕ್ಷತ್ರಿಯರು ಎಂದಿದ್ದಾರೆ.
Advertisement
Advertisement
ಶಿವನು ಎಸ್‍ಸಿಯೋ? ಎಸ್‍ಟಿಯೋ ಇರಬೇಕು. ಯಾಕಂದ್ರೆ ಶಿವ ಕೂತಿರೋದು ಸ್ಮಶಾನದಲ್ಲಿ. ಕೊರಳಲ್ಲಿ ಧರಿಸಿರೋದು ಹಾವನ್ನು. ಅಲ್ಲದೇ ಅತ್ಯಂತ ಕಡಿಮೆ ಪ್ರಮಣದಲ್ಲಿ ಉಡುಗೆ ಧರಿಸಿದ್ದಾನೆ. ಸಾಮಾನ್ಯವಾಗಿ ಯಾವುದೇ ಬ್ರಾಹ್ಮಣ ಸ್ಮಶಾನದಲ್ಲಿ ಕುಳಿತುಕೊಳ್ಳಲ್ಲ. ಮಾನವಶಾಸ್ತ್ರವನ್ನು ಅಭ್ಯಾಸಿಸಿದ್ದೇ ಆದಲ್ಲಿ, ಲಕ್ಷ್ಮಿ ಸೇರಿ ಯಾವ ದೇವರುಗಳು ಮೇಲ್ಜಾತಿಯವರಲ್ಲ ಎಂಬುದು ನಿಮ್ಮ ಅರಿವಿಗೆ ಬರುತ್ತದೆ ಎಂದಿದ್ದಾರೆ.
Advertisement
Advertisement
ಜಗನ್ನಾಥ ದೇವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಹೀಗಿರುವಾಗ ನಾವಿನ್ನು ಏಕೆ ಮೇಲು ಕೀಳು ಅಂತ ಜಾತಿ ಹೆಸರಲ್ಲಿ ಬಡಿದಾಡಿಕೊಳ್ತಿದ್ದೀವಿ. ಇದು ಅಮಾನವೀಯ ಅಲ್ವಾ ಎಂದು ವಿಸಿ ಶಾಂತಿಶ್ರೀ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪಾಕ್ ಮೇಲೆ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ – ವಾಯುಪಡೆಯ ಮೂವರು ಅಧಿಕಾರಿಗಳು ವಜಾ
ಮನುಸ್ಮೃತಿಯ ಪ್ರಕಾರ ಎಲ್ಲಾ ಮಹಿಳೆಯರು ಶೂದ್ರರು. ಯಾವುದೇ ಮಹಿಳೆ ಕೂಡ ತನ್ನನ್ನು ತಾನು ಬ್ರಾಹ್ಮಿಣ್ ಎಂದು ಹೇಳಿಕೊಳ್ಳುವಂತಿಲ್ಲ ಎಂದು ವ್ಯಾಖ್ಯಾನಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಶಾಂತಿಶ್ರೀ ಹೇಳಿಕೆ ಬಗ್ಗೆ ಪರ ವಿರೋಧದ ಚರ್ಚೆಗಳು ಜೋರಾಗಿ ನಡೀತಿವೆ. ಟ್ವಿಟ್ಟರ್‍ನಲ್ಲಿ ಇದು ಟ್ರೆಂಡಿಂಗ್‍ನಲ್ಲಿದೆ.