ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪಿಯುಸಿ (Pollution Under Control) ಪ್ರಮಾಣಪತ್ರ ಹೊಂದಿರದ ವಾಹನಗಳಿಗೆ ಇಂಧನ ಭರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ವಾಹನ ಮಾಲೀಕರಿಗೆ ಹೊಸ ನಿಯಮವನ್ನು ಪಾಲಿಸಲು ಒಂದು ದಿನದ ಕಾಲಾವಕಾಶ ನೀಡಲಾಗಿದೆ. ಬುಧವಾರದ (ಡಿ.17) ನಂತರ, ಪಿಯುಸಿ ಪ್ರಮಾಣಪತ್ರವನ್ನು ಹೊಂದಿರದ ವಾಹನಗಳಿಗೆ ಇಂಧನ ಭರಿಸಲು ಅವಕಾಶವಿರುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೋದಿಯಿಂದ ಗ್ರಾಮೀಣ ಕುಟುಂಬಗಳಿಗೆ ವರವಾಗಿದ್ದ ಯೋಜನೆ ನಾಶ: ರಾಹುಲ್ ಆಕ್ರೋಶ
ಗುರುವಾರದಿಂದ (ಡಿ.18) ದೆಹಲಿಯ ಹೊರಗಿನಿಂದ ಬಬಿಎಸ್-VI ಮಾನದಂಡಗಳನ್ನು ಅನುಸರಿಸುವ ವಾಹನಗಳಿಗೆ ಮಾತ್ರ ದೆಹಲಿಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು, ನಿಯಮ ಮೀರುವಂತಹ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುವ ಟ್ರಕ್‌ಗಳು ಮತ್ತು ವಾಹನಗಳಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಹೇಳಿದ್ದಾರೆ.
ಈ ನಡುವೆ ಹವಮಾನ ವೈಪ್ಯರಿತ್ಯ, ದಟ್ಟ ಮಂಜಿನಿಂದಾಗಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಲವಾರು ವಿಮಾನಗಳ ಹಾರಾಟದಲ್ಲಿ ಸಮಸ್ಯೆ ಉಂಟಾಗಿದೆ. ಇಂಡಿಗೋ ಮತ್ತು ಏರ್ ಇಂಡಿಯಾ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಇಂಡಿಗೋ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿದ ಮಾಹಿತಿಯಂತೆ ಒಟ್ಟು 58 ವಿಮಾನಗಳ ರದ್ದು ಮಾಡಿದೆ.ಇದನ್ನೂ ಓದಿ: ಲೋಕಸಭೆಯಲ್ಲಿ MNREGA ಹೆಸರು ಬದಲಿಸುವ ಮಸೂದೆ ಮಂಡನೆ, ಕೋಲಾಹಲ

