ವಾಷಿಂಗ್ಟನ್: ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು 24*7 H-1B ವೀಸಾ ಅಥವಾ ಗ್ರೀನ್ ಕಾರ್ಡ್ (Green Card) ದಾಖಲೆಗಳನ್ನು ತಮ್ಮ ಬಳಿ ಹೊಂದಿರಬೇಕು. ವಿದೇಶಿಗರ ದಾಖಲೆಗಳನ್ನು ಅಮೆರಿಕ ಸರ್ಕಾರ (US Government) ಯಾವ ಸಮಯದಲ್ಲಾದರೂ, ಎಲ್ಲಾದರೂ ತಪಾಸಣೆ ಮಾಡುವ ಸಾಧ್ಯತೆ ಇದೆ.
ಇದೇ ಏಪ್ರಿಲ್ 11ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುವ ಟ್ರಂಪ್ (Donald Trump) ಅವರ ‘ಪ್ರೊಟೆಕ್ಟಿಂಗ್ ದಿ ಅಮೆರಿಕನ್ ಪೀಪಲ್ ಅಗೇನ್ಸ್ಟ್ ಇನ್ವೇಷನ್’ ಅಡಿಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಇದಕ್ಕೆ ಅಮೆರಿಕ ಕೋರ್ಟ್ ಸಹ ಸರ್ಕಾರಕ್ಕೆ ಅನುಮತಿ ನೀಡಿದೆ. ಇದನ್ನೂ ಓದಿ: ಯಹೂದಿಗಳ ವಿರುದ್ಧ ಪೋಸ್ಟ್ ಹಾಕಿದ್ರೆ ವೀಸಾ, ಗ್ರೀನ್ ಕಾರ್ಡ್ ನೀಡಲ್ಲ – ವಲಸಿಗರಿಗೆ ಅಮೆರಿಕ ಎಚ್ಚರಿಕೆ
ಈ ನಿಯಮದಂತೆ ನೋಂದಾಯಿತ ವಲಸಿಗರು 10 ದಿನಗಳ ಒಳಗೆ ಮತ್ತೊಮ್ಮೆ ಸರ್ಕಾರಕ್ಕೆ ದಾಖಲೆಗಳನ್ನು ನೀಡಿ ಮರುನೋಂದಣಿ ಮಾಡಿಕೊಳ್ಳಬೇಕು. ಜೊತೆಗೆ ಈ ವಲಸಿಗರ ಮಕ್ಕಳಿಗೆ 14 ವರ್ಷ ತುಂಬಿದ ಬಳಿಕ 30 ದಿನಗಳ ಒಳಗಾಗಿ ಸರ್ಕಾರಕ್ಕೆ ಮತ್ತೊಮ್ಮೆ ಬೆರಳಚ್ಚು ದಾಖಲೆ ನೀಡಿ ಮರುನೋಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ನಿಯಮ ಮೀರಿದ್ರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟ್ರಂಪ್ Vs ಕ್ಸಿ ಜಿನ್‌ಪಿಂಗ್ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ
ಯಾರಿಗೆ ನಿಯಮ ಕಡ್ಡಾಯ?
ಟ್ರಂಪ್ ಅವರು ಅಕ್ರಮ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಈ ನಿಯಮವನ್ನು ಅನಷ್ಠಾನಗೊಳಿಸಿದ್ದಾರೆ. ಅದರಂತೆ ಯುಎಸ್‌ನಲ್ಲಿ ವಾಸಿಸುತ್ತಿರುವ ವಿದೇಶಿ ನಾಗರಿಕರು, 14 ವರ್ಷಕ್ಕಿಂತ ಮೇಲ್ಪಟ್ಟವರು, ಅಮೆರಿಕದಲ್ಲಿ 30 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ವಾಸಿಸುತ್ತಿರುವವರು, ಫಾರಂ G-325R ಅನ್ನು ಭರ್ತಿ ಮಾಡುವ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ಏಪ್ರಿಲ್ 11ರ ನಂತರ ಅಮೆರಿಕಕ್ಕೆ ಬರುವವರು ಬಂದ 30 ದಿನಗಳ ಒಳಗೆ ನೋಂದಾಯಿಸಿಕೊಳ್ಳಬೇಕು. ತಪ್ಪಿದ್ರೆ ಜೈಲು, ದಂಡ ಅಥವಾ ಎರಡರ ಶಿಕ್ಷೆಗೂ ಒಳಗಾಗಬಹುದು ಎಂದು ಹೇಳಲಾಗಿದೆ.
H-1B ವೀಸಾ ಹೊಂದಿರುವವರಿಗೆ ವಿನಾಯ್ತಿ
ಇನ್ನೂ H-1B ವೀಸಾ ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಫಾರಂ G-325R ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಆದ್ರೆ ವಾರದ 24 ಗಂಟೆಯೂ ದಾಖಲೆಗಳನ್ನು ತಮ್ಮ ಬಳಿ ಹೊಂದಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಗೋಲ್ಡ್ ಪ್ರಿಯರಿಗೆ ಶಾಕ್ – ಚಿನ್ನದ ಬೆಲೆ ಒಂದೇ ದಿನ 6,000 ರೂ. ಏರಿಕೆ