ಮೈಸೂರು: ನಾಳೆ ಮಹಾಲಯ ಅಮವಾಸ್ಯೆಯಾಗಿದೆ ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂದು ನೀವು ಏನಾದ್ರೂ ಅಂದುಕೊಂಡಿದ್ದರೆ ನಿರಾಸೆ ಉಂಟಾಗಲಿದೆ. ಮೂರು ದಿನ ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧವನ್ನು ಹೇರಲಾಗಿದೆ. ಇದನ್ನೂ ಓದಿ: ಶಾರೂಖ್ ಪುತ್ರನ ಲೆನ್ಸ್ ಬಾಕ್ಸ್, ಇನ್ನೊಬ್ಬಳು ಯುವತಿಯ ಬ್ಯಾಗಲ್ಲಿದ್ದ ಸ್ಯಾನಿಟರಿ ಪ್ಯಾಡಲ್ಲಿತ್ತು ಮಾದಕ ವಸ್ತು!
ಗುರುವಾರ ನಾಡ ಹಬ್ಬ ದಸರಾ ಉದ್ಘಾಟನೆಯನ್ನು ಮಾಡಲಾಗುತ್ತದೆ. ಹೀಗಾಗಿ ಈ ಹಿನ್ನಲೆಯಲ್ಲಿ ಮೂರು ದಿನಗಳ ಕಾಲ ದೇವಿ ದರ್ಶಕ್ಕೆ ಭಕ್ತಾದಿಗಳಿಗೆ ನಿರ್ಬಂಧವನ್ನು ಹೇರಲಾಗಿದೆ. ಇಂದು, ನಾಳೆ ಮತ್ತು ನಾಡಿದ್ದು ಒಟ್ಟೂ ಮೂರು ದಿನಗಳ ಕಾಲ ಚಾಮುಂಡಿ ದೇವಿಯ ದರ್ಶನಕ್ಕೆ ಭಕ್ತಾಧಿಗಳಿಗೆ ನಿರ್ಬಂಧವನ್ನು ಜಿಲ್ಲಾಢಳಿತ ಹೇರಿದೆ. ಕೋವಿಡ್ ನಿರ್ಬಂಧ ಕಾರಣವನ್ನು ಕೂಡ ಜಿಲ್ಲಾಡಿತದ ಆದೇಶದಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಮುಂಬೈ ಡ್ರಗ್ಸ್ ಪ್ರಕರಣ – ಐಷಾರಾಮಿ ಹಡಗಿನಲ್ಲಿ ತಗ್ಲಾಕ್ಕೊಂಡ ಬೆಂಗಳೂರಿಗರು..!
ಚಾಮುಂಡಿ ಬೆಟ್ಟಕ್ಕೆ ಹೋಗಬೇಕು ಎಂದು ಕೊಂಡವರಿಗೆ ನಿರಾಸೆ ಉಂಟಾಗಲಿದೆ. ಕೊರೊನಾ ನಿರ್ಭಂದಗಳಿರುವುದರಿಂದ ಜನ ತುಂಬಾ ಸೇರಿ ಬಿಟ್ಟರೆ ತೊಂದರೆಯಾಗುತ್ತದೆ. ದಸರಾ ಉದ್ಘಾಟನೆಯ ಸಿದ್ಧತೆಗೆ ತೊಂದರೆಯಾಗುತ್ತದೆ ಎನ್ನುವ ಕಾರಣದಿಂದಾಗಿ ಪ್ರವೇಶಕ್ಕೆ ನಿರ್ಭಂಧವನ್ನು ಹೇರಲಾಗಿದೆ.