Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಯಾವ ಔಷಧಿ ಕಂಪನಿಯೂ ನನಗೆ ಹಣ ನೀಡಿಲ್ಲ: ಜಾಗೃತಿಗಾಗಿ ಡ್ರಾಮಾ ಮಾಡಿದೆ ಎಂದ ಪೂನಂ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bollywood | ಯಾವ ಔಷಧಿ ಕಂಪನಿಯೂ ನನಗೆ ಹಣ ನೀಡಿಲ್ಲ: ಜಾಗೃತಿಗಾಗಿ ಡ್ರಾಮಾ ಮಾಡಿದೆ ಎಂದ ಪೂನಂ

Bollywood

ಯಾವ ಔಷಧಿ ಕಂಪನಿಯೂ ನನಗೆ ಹಣ ನೀಡಿಲ್ಲ: ಜಾಗೃತಿಗಾಗಿ ಡ್ರಾಮಾ ಮಾಡಿದೆ ಎಂದ ಪೂನಂ

Public TV
Last updated: February 4, 2024 1:25 pm
Public TV
Share
2 Min Read
Poonam Pandey 3
SHARE

ಗರ್ಭಕಂಠ ಕ್ಯಾನ್ಸರ್ ಕುರಿತಂತೆ ಜಾಗೃತಿಗಾಗಿ ಸತ್ತಂತೆ ನಾಟಕವಾಡಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಔಷಧಿ ಕಂಪನಿಗಳು ಈಕೆಗೆ ಹಣ ನೀಡಿ, ಈ ರೀತಿ ನಾಟಕವಾಡುವಂತೆ ಮಾಡಿವೆ ಎನ್ನುವ ಆರೋಪವಿತ್ತು. ಈ ಕುರಿತಂತೆ ಸ್ವತಃ ಪೂನಂ ಸ್ಪಷ್ಟನೆ ನೀಡಿದ್ದಾರೆ. ತಾವು ಸತ್ತಿರುವುದಾಗಿ ಹೇಳಿಕೊಂಡಿದ್ದರ ಹಿಂದೆ ನಿಜವಾದ ಕಾಳಜಿ ಇತ್ತು. ಯಾವುದೇ ಔಷಧಿ ಕಂಪನಿಗಳು ತಮಗೆ ಹಣ ನೀಡಿಲ್ಲ ಎಂದು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

poonam pandey 1

ತನ್ನ ತಾಯಿ ಕೂಡ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ರೋಗಿಗಳು ಹೇಗೆ ನರಳುತ್ತಾರೆ ಎನ್ನುವುದನ್ನು ಸ್ವತಃ ನಾನು ನೋಡಿದ್ದೇನೆ. ಸದ್ಯ ತಾಯಿ ಆರೋಗ್ಯವಾಗಿದ್ದಾರೆ. ಅವರ ನೋವನ್ನು ನೋಡಿಯೇ ನಾನು ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ನಿರ್ಧಾರ ಮಾಡಿದ್ದು. ನೀವು ಟೀಕೆಗಳನ್ನು ಮಾಡುತ್ತಿದ್ದೀರಿ. ಆದರೆ, ನಾನು ಮಾಡಿದ್ದರ ಹಿಂದಿನ ಪರಿಣಾಮವನ್ನೂ ನೀವು ಗಮನಿಸಬೇಕು ಎಂದು ಅವರು ಪೋಸ್ಟ್ ಮಾಡಿದ್ದಾರೆ.

poonam pandey 3 1

ಆರ್.ಜಿವಿ ಮೆಚ್ಚುಗೆ

ಗರ್ಭಕಂಠ ಕ್ಯಾನ್ಸರ್ ಕುರಿತಾಗಿ ಜಾಗೃತಿ ಮೂಡಿಸುವುದಕ್ಕಾಗಿ ತಾನು ಸತ್ತಿರುವುದಾಗಿ ಮ್ಯಾನೇಜರ್ ಮೂಲಕ ಸುದ್ದಿ ಮಾಡಿಸಿದ್ದ ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಆದರೆ, ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮಾತ್ರ ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಪೂನಂ ಮಾಡಿದ ಕೆಲಸ ಉತ್ತಮವಾದದ್ದು ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Poonam Pandey 2

ನೀವು ಮಾಡಿದ ಕೆಲಸಕ್ಕೆ ಟೀಕೆಗಳು ಬರಬಹುದು. ಆದರೆ, ನೀವು ಮಾಡಿದ ಕೆಲಸ ಮೆಚ್ಚುವಂಥದ್ದು. ನಿಮ್ಮಿಂದಾಗಿ ಗರ್ಭಕಂಠ ಕ್ಯಾನ್ಸರ್ ಕುರಿತಂತೆ ವ್ಯಾಪಕವಾಗಿ ಪ್ರಚಾರ ಸಿಕ್ಕಿದೆ. ನಿಮ್ಮಂತೆಯೇ ನಿಮ್ಮ ಆತ್ಮ ಕೂಡ ಸುಂದರ. ನಿಮಗೆ ಮತ್ತಷ್ಟು ಆಯುಷ್ಯ ಹೆಚ್ಚಲಿ ಎಂದು ವರ್ಮಾ ಬರೆದುಕೊಂಡಿದ್ದಾರೆ.

poonam pandey

ಪೂನಂ ವಿರುದ್ಧ ಕ್ರಮಕ್ಕೆ ಒತ್ತಾಯ

ಗರ್ಭಕಂಠ ಕ್ಯಾನ್ಸರ್ (Cervical cancer) ಕುರಿತಂತೆ ಜಾಗೃತಿ ಮೂಡಿಸುವುದಕ್ಕಾಗಿ ವಾಮಮಾರ್ಗ ಹಿಡಿದಿರುವ ಬಾಲಿವುಡ್ ನಟಿ, ಕಾಂಟ್ರವರ್ಸಿ ಕ್ವೀನ್‌ ಪೂನಂ ಪಾಂಡೆಯನ್ನು (Poonam Pandey) ಅರೆಸ್ಟ್ ಮಾಡಬೇಕು ಎಂದು ಅಭಿಮಾನಿಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್‌ ಪೂನಂ ಪಾಂಡೆ’ (Boycott) ಟ್ರೆಂಡ್ ಶುರು ಮಾಡಿದ್ದಾರೆ. ಈ ಬೆನ್ನಲ್ಲೇ ಪೂನಂ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ಶಾಸಕ ಸತ್ಯಜೀತ್ ತಾಂಬೆ ಮುಂಬೈ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

ತಮ್ಮ ಪ್ರಚಾರಕ್ಕಾಗಿ ಇಂತಹ ಸ್ಟಂಟ್‌ಗಳನ್ನ ಮಾಡುವಂತವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಸಾವಿನ ಸುದ್ದಿಯಿಂದ ಗರ್ಭಕಂಠ ಕ್ಯಾನ್ಸರ್‌ ರೋಗದ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಿಲ್ಲ. ಇದು ಕ್ಯಾನ್ಸರ್‌ ಸಮಸ್ಯೆಯಿಂದ ಬುದುಕುಳಿದಿರುವವರನ್ನು ಗೇಲಿ ಮಾಡಿದಂತಾಗಿದೆ. ಇದರಿಂದ ಪೂನಂ ವಿರುದ್ಧ ಕೇಸ್‌ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

TAGGED:cervical cancerPoonam PandeyResponseಗರ್ಭಕಂಟ ಕ್ಯಾನ್ಸರ್ಪೂನಂ ಪಾಂಡೆಪ್ರತಿಕ್ರಿಯೆ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

RCB vs GT
Cricket

ಕೈಕೊಟ್ಟ ಬ್ಯಾಟರ್ಸ್‌, ಆರ್‌ಸಿಬಿಗೆ ಹೀನಾಯ ಸೋಲು – ಗುಜರಾತ್‌ಗೆ 4 ವಿಕೆಟ್‌ಗಳ ಅಮೋಘ ಜಯ

Public TV
By Public TV
7 minutes ago
Heavy rains in Bengaluru Bowring Hospital wall collapses 6 dead
Bengaluru City

ಬೌರಿಂಗ್ ಆಸ್ಪತ್ರೆ ಗೋಡೆ ಕುಸಿದು ದುರಂತ – ಸಿಎಂ ಸೂಚನೆ ಬೆನ್ನಲ್ಲೇ ಇಬ್ಬರು ಇಂಜಿನಿಯರ್‌ ಅಮಾನತು

Public TV
By Public TV
10 minutes ago
Cabinet Meet
Bengaluru City

ಬಿಡದಿ ಟೌನ್‌ಶಿಪ್‌ಗೆ 18,000 ಕೋಟಿ; ಬೆಂಗಳೂರು-ಬೀದರ್ ಮಧ್ಯೆ ಮತ್ತೆ ವಿಮಾನ ಯಾನಕ್ಕೆ ಸಂಪುಟ ಒಪ್ಪಿಗೆ

Public TV
By Public TV
48 minutes ago
India GDP
Latest

ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶದ ಜಿಡಿಪಿ ಬೆಳವಣಿಗೆ ಅಪಾಯದಲ್ಲಿದೆ – ಕೇಂದ್ರ ಕಳವಳ

Public TV
By Public TV
2 hours ago
Nepal Airlines
Latest

ಜಮ್ಮು-ಕಾಶ್ಮೀರ, ಲಡಾಖ್‌ ಪಾಕ್‌ನ ಭಾಗ ಅಂತ ತೋರಿಸಿ ಯಡವಟ್ಟು – ನೇಪಾಳದ ಏರ್‌ಲೈನ್ಸ್‌ ಕ್ಷಮೆಯಾಚನೆ

Public TV
By Public TV
2 hours ago
Rajat Patidar Catch
Cricket

Catch Controversy | ಜೇಸನ್‌ ಹೋಲ್ಡರ್‌ ಕ್ಯಾಚ್‌ ವಿವಾದ – ಅಂಪೈರ್‌ ತೀರ್ಪಿನ ವಿರುದ್ಧ ಆಕ್ರೋಶ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?