ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾರು ಚರ್ಚೆ ಮಾಡಿಲ್ಲ: ಸತೀಶ್ ಜಾರಕಿಹೊಳಿ

Public TV
1 Min Read
Satish Jarkiholi 2

ಬೆಂಗಳೂರು: ಕೆಪಿಸಿಸಿ (KPCC) ಅಧ್ಯಕ್ಷರ ಬದಲಾವಣೆ ಸಂಬಂಧ ದೆಹಲಿಯಲ್ಲಿ ಯಾರು ಚರ್ಚೆ ಮಾಡಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಸಿಎಂ ದೆಹಲಿಯಿಂದ ವಾಪಸ್‌ ಆದ ಮೇಲೆ ಚರ್ಚೆ ಮಾಡ್ತೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಶ್ವರ್ ಖಂಡ್ರೆ ಹಾಗೂ ನನ್ನ ಹೆಸರಿದೆ ಎಂದು ಪತ್ರಿಕೆಯಲ್ಲಿ ನೋಡಿದ್ದೇನೆ. ಆದರೆ ನಮ್ಮ‌ ಗಮನಕ್ಕೆ ಬಂದಿಲ್ಲ ಯಾರು ನಮ್ಮ‌ ಬಳಿ ಚರ್ಚೆ ಮಾಡಿಲ್ಲ. ಸಿಎಂ ಹೈಕಮಾಂಡ್ ಜೊತೆಗೆ ಏನೇನು ಚರ್ಚೆ ಮಾಡಿದ್ದಾರೆ ಎಂದು ಸಂಜೆ ಗೊತ್ತಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರಕ್ಕೆ ಮನವಿ: ಡಿಕೆಶಿ

ಈಶ್ವರ್ ಖಂಡ್ರೆ ಆಗಲಿ ಅಥವಾ ಯಾರೇ ಆಗಲಿ ನಮ್ಮ ಬೆಂಬಲ ಇದ್ದೇ ಇರುತ್ತದೆ. ಆದರೆ ಕೆಪಿಸಿಸಿ‌ ಸ್ಥಾನದ ಬಗ್ಗೆ ಅಧಿಕೃತವಾಗಿ ಯಾರು ನಮ್ಮ‌ ಬಳಿ ಚರ್ಚೆ ಮಾಡಿಲ್ಲ. ಈ ಸಲ ಹೈಕಮಾಂಡ್ ನಾಯಕರನ್ನು ಯಾರೂ ಭೇಟಿ ಮಾಡಿಲ್ಲ. ಎಲ್ಲಾ ಎಂಎಲ್ಸಿ ಆಕಾಂಕ್ಷಿಗಳು ಅಲ್ಲಿ ಇದ್ದರು. ಪರಮೇಶ್ವರ್ ಸೇರಿ ಕರ್ನಾಟಕ ಭವನ ಕಾರ್ಯಕ್ರಮಕ್ಕೆ ಸಾಮಾನ್ಯವಾಗಿ ಆಹ್ವಾನ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಡಿಪಿಆರ್ ನವರು ಪ್ರೊಟೋಕಾಲ್ ಫಾಲೋ ಮಾಡಬೇಕು. ನಿಗದಿತ ಕೇಂದ್ರ ಸಚಿವರಿಗೆ ಮಾತ್ರ ಆಹ್ವಾನ ನೀಡಿದ್ದರು. ಹೆಚ್ಚಿನ ವಿಚಾರವನ್ನು ಪರಮೇಶ್ವರ್ ಅವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ: ಬೋಸರಾಜು

Share This Article