ರಾಯಚೂರು: ನಮ್ಮ ಪಕ್ಷದ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಬಿಕೆ ಹರಿಪ್ರಸಾದ್ (BK Hariprasad) ನಮ್ಮ ಜೊತೆ ವಿಧಾನ ಪರಿಷತ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಸಮಾವೇಶ ಅವರ ಸಮಾಜಕ್ಕೆ ಸಂಬಂಧಪಟ್ಟಿದ್ದು ಅದರಲ್ಲಿ ಅವರ ಗುರುಗಳು ಇದ್ದಾರೆ. ಭಿನ್ನಾಭಿಪ್ರಾಯಕ್ಕೆ ಏನು ವಿಷಯ ಎಂದು ಗೊತ್ತಿಲ್ಲ. ಅದು ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು (NS Boseraju) ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಬಿಕೆ ಹರಿಪ್ರಸಾದ್ ನಡುವೆ ಭಿನ್ನಾಭಿಪ್ರಾಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು. ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಸಮಾವೇಶ ಖಂಡಿಸಿ ಉಪವಾಸ ಸತ್ಯಾಗ್ರಹ ವಿಚಾರ ಗೊತ್ತಿಲ್ಲ. ಅವರ ಸಮಾಜದವರು ಮಾಡುತ್ತಿರುವ ಕಾರ್ಯಕ್ರಮ ಅದು. ಅಲ್ಲಿ ನಮ್ಮನ್ನೂ ಕರೆದಿದ್ದಾರೆ. ಯಾವುದೇ ಸಮಾಜದ ಸಮಾರಂಭಕ್ಕೆ ಹೋದಂತೆ ಸಿಎಂ, ಮಂತ್ರಿಗಳು ಹೋದಂತೆ ಅಲ್ಲಿ ಸಿಎಂ, ಡಿಎಸಿಎಂ ಹೋಗಿರುತ್ತಾರೆ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು. ಇದನ್ನೂ ಓದಿ: ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಆಯ್ಕೆ – ʼಮೋದಿ ಕಿ ಗ್ಯಾರಂಟಿʼ ಈಡೇರಿಸೋ ಭರವಸೆ
Advertisement
ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಬೀಳುವ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೆಚ್‌ಡಿಕೆ ಸಿಎಂ ಇದ್ದಾಗ ನಾವು ಸಪೋರ್ಟ್ ಮಾಡಿದರೂ ಸರ್ಕಾರ ಉಳಿಸಿಕೊಳ್ಳಲಿಲ್ಲ. ಹೋಗಿ ಅಮೆರಿಕದಲ್ಲಿ ಕೂತಿದ್ದರು. ಅವರು ಹೇಳಿದಂತೆ 123 ಸೀಟು ಗೆಲ್ಲದಿದ್ದರೆ ಪಾರ್ಟಿ ಡಿಸಾಲ್ವ್ ಮಾಡುತ್ತೇನೆ ಅಂದಿದ್ದು, ಇದಕ್ಕಿಂತ ದೊಡ್ಡ ಜವಾಬ್ದಾರಿ ಇರುತ್ತಾ ಅವರಿಗೆ? ಅಧ್ಯಕ್ಷರಾಗಿದ್ದುಕೊಂಡು ಒಂದೇ ಒಂದು ಸೀಟು ಕಡಿಮೆ ಬಂದ್ರೆ ಡಿಸಾಲ್ವ್ ಮಾಡುತ್ತೇನೆ ಎಂದಿದ್ದರು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನಾನು ಬಾಲ್ ಇದ್ದಂತೆ, ತುಳಿದಷ್ಟು ಮೇಲೆ ಪುಟಿದೇಳುತ್ತೇನೆ: ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಕಿಡಿ
Advertisement
Advertisement
ಆದರೆ ಈಗ ಕುಮಾರಸ್ವಾಮಿ ಅವರ ಮಾತಿಗೆ ಎಷ್ಟು ಮನ್ನಣೆ ಕೊಡಬೇಕು, ಜನ ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ಗೊತ್ತು. ಪ್ರತಿನಿತ್ಯ ಏನಾದರೂ ಮಾತನಾಡಬೇಕು ಎಂದು ಮಾತನಾಡುತ್ತಾರೆ. ದೇವೇಗೌಡರು ಪ್ರಧಾನಿ ಆಗಿದ್ದೋರು. ಜಾತ್ಯಾತೀತ ಪಕ್ಷ ಉಳಿಸಿಕೊಳ್ಳಲಿಕ್ಕೆ ಆಗದೇ ಕಾರ್ಯಕರ್ತರಿಗಾಗಿ ಬಿಜೆಪಿ ಸೇರುತ್ತಿದ್ದೇವೆ ಎನ್ನುತ್ತಾರೆ. ಹಾಗಾಗಿ ಅವರ ಬಗ್ಗೆ ಜನ ಅರ್ಥ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜಕೀಯ ಬೇಡ, ನಮ್ದೇನಿದ್ರೂ ಬಣ್ಣ ಹಚ್ಚೋದು, ಆಕ್ಟಿಂಗ್ ಮಾಡೋದು ಅಷ್ಟೇ: ಶಿವಣ್ಣ
Advertisement
ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಪರೇಶನ್ ಕಮಲ ಮಾಡುವಂಥದ್ದು, ದೇಶದಲ್ಲಿ ಪ್ರಜಾಸ್ವಾಮ್ಯ ಹದಗೆಡಿಸಿದ್ದು ಬಿಜೆಪಿಯವರು. ಸಾವಿರಾರು ಕೋಟಿ ಖರ್ಚು ಮಾಡಿ ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರದಲ್ಲಿ ಶಾಸಕರನ್ನು ಖರೀದಿ ಮಾಡಿದ್ದಾರೆ. ಅಮಿತ್ ಶಾ, ಮೋದಿ, ಜೋಶಿ ತಮ್ಮ ಮನೆಯಿಂದ ಹಣ ತಂದಿದ್ದಾರಾ? ಸಾವಿರಾರು ಕೋಟಿ ಮಾಡಿ ಇವತ್ತು ಸಂವಿಧಾನಕ್ಕೆ ಧಕ್ಕೆ ತಂದಿದ್ದಾರೆ. ಯುಪಿಎ ಒಕ್ಕೂಟದಿಂದ ಯಾಕೆ ಇಂಡಿಯಾ ಒಕ್ಕೂಟ ಮಾಡಿರುವ ವಿಚಾರಕ್ಕೆ ಅವರು ಯಾಕೆ ಜನಸಂಘ ಬಿಜೆಪಿ ಅಂತ ಯಾಕೆ ಮಾಡಿಕೊಂಡರು? 40% ಕಮಿಷನ್ ಬಗ್ಗೆ ಕಾಂಟ್ರಾಕ್ಟರ್ ಅಸೋಸಿಯೇಷನ್ ಅವರು ಪ್ರಧಾನಿಗೆ ದೂರು ಕೊಟ್ಟರು. ಅದಕ್ಕೆ ಸ್ಪಂದಿಸಿಲ್ಲ. ಅದಕ್ಕೆ ಜೋಶಿ ಅವರು ಮೊದಲು ಉತ್ತರ ಕೊಡಲಿ. ಒಂದು ವರ್ಷ ಆಗುತ್ತಾ ಬಂತು ಜೋಶಿ ಅವರು ಮಲ್ಕೊಂಡಿದ್ರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಶಿವಣ್ಣಗೆ ಎಂಪಿ ಟಿಕೆಟ್ ಆಫರ್ ಕೊಟ್ಟ ಡಿಕೆಶಿ
ಜಾರ್ಖಂಡ್ ಕಾಂಗ್ರೆಸ್ ಸಂಸದನ ಮನೆ ಮೇಲೆ ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿ, ಇಡಿ, ಸಿಬಿಐ, ಐಟಿ ತಮ್ಮ ಕೈಯಲ್ಲಿ ಹಿಡಿದುಕೊಂಡು ರಾಜಕೀಯವಾಗಿ ಆಟ ಆಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮೋದಿ ಪ್ರಧಾನಿ ಆದ ಬಳಿಕ ಈ ಪ್ರಯತ್ನ ನಡಿಯುತ್ತಿದೆ. ಮೊದಲು ಇಡಿ ಬಗ್ಗೆ ಎಷ್ಟು ಜನರಿಗೆ ಗೊತ್ತಿತ್ತು? ಸಿಬಿಐ ಬಗ್ಗೆ ಎಷ್ಟು ಮಂದಿಗೆ ಗೊತ್ತಿತ್ತು? ಈಗ ಪ್ರತಿದಿನ ಇಡಿ, ಸಿಬಿಐ, ಐಟಿ ಇದೆ. ಇದನ್ನೆಲ್ಲಾ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ವಿರೋಧಿಗಳನ್ನ, ವಿರೋಧ ಪಕ್ಷಗಳನ್ನ ಟಾರ್ಗೆಟ್ ಮಾಡಿಕೊಂಡು ತುಳಿಯುವಂತಹ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ. ಬಿಜೆಪಿಯವರಿಗೆ ತತ್ವ, ಸಿದ್ಧಾಂತ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಜೊತೆ ಹರಿಪ್ರಸಾದ್ ಜಟಾಪಟಿ – ಮಧು ಬಂಗಾರಪ್ಪ ಜೊತೆ ಮುಸುಕಿನ ಗುದ್ದಾಟ!