ಬೆಂಗಳೂರು: ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದು ಕಾಂಗ್ರೆಸ್ (Congress) ಶಾಸಕ ರಾಜು ಕಾಗೆ ಹೇಳಿಕೆ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರತಿಕ್ರಿಯಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ರಾಜು ಕಾಗೆ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ಗೋಮುಖ ವ್ಯಾಘ್ರ – ವಿಪಕ್ಷ ನಾಯಕ ಅಶೋಕ್ ಲೇವಡಿ
ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ ಎಂದು ಕಾಗೆ ಅವರ ಹೇಳಿಕೆ ನಾನು ನೋಡಿಲ್ಲ. ನಮ್ಮ ಸರ್ಕಾರ ಬಂದಾಗಿನಿAದ ಬರಕ್ಕೆ ಅನುದಾನ ಕೊಟ್ಟಿದ್ದೇವೆ. ರೈತರಿಗೆ ವಿಮೆ ಕೂಡಾ ಜಾಸ್ತಿ ಕ್ಲೈಮ್ ಆಗಿದೆ. ಯಾವ ಹಿನ್ನಲೆಯಲ್ಲಿ ಅವರು ಹೇಳಿದ್ದಾರೆ ಗೊತ್ತಿಲ್ಲ. ರಾಜ್ಯದಲ್ಲಿ ಯಾವ ಕೆಲಸವೂ ನಿಂತಿಲ್ಲ. ಜಲಜೀವನ್ ಮಿಷನ್, ಪ್ರಗತಿ ಪಥ, ಕಲ್ಯಾಣ ಪಥ ಸೇರಿ ಎಲ್ಲಾ ಕೆಲಸಗಳು ನಡೆಯುತ್ತಿದೆ ಎಂದರು.
ನಮಗೆ ಗ್ಯಾರಂಟಿ ಯೋಜನೆಗಳ ಜವಾಬ್ದಾರಿ ಇದೆ. ಗ್ಯಾರಂಟಿಯಿಂದ ಜನರಿಗೆ ಆರ್ಥಿಕ ಸ್ಥಿರತೆ ಬರುತ್ತಿದೆ. ಜನರ ಜೀವನ ಉತ್ತಮವಾಗಿ ನಡೆಯುತ್ತಿದೆ. ಅಭಿವೃದ್ಧಿ ನಿಂತ ನೀರು ಆಗುವುದಿಲ್ಲ. ಶಾಸಕರು ಏನೇ ಸಮಸ್ಯೆಯಿದ್ದರೂ ಸಿಎಂ ಜೊತೆ ಮಾತಾಡಲಿ ಎಂದು ಸಲಹೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ ಎಂಪಿಗಳಿಗೆ ಮೋದಿ, ಅಮಿತ್ ಶಾ ಕಂಡ್ರೆ ಭಯ: ಪ್ರಿಯಾಂಕ್ ಖರ್ಗೆ ವಾಗ್ದಾಳಿ