– 3 ಗಂಟೆ ಸಭೆ, 12 ನಿಮಿಷದಲ್ಲಿ ಸುದ್ದಿಗೋಷ್ಠಿ ಮುಕ್ತಾಯ
– ಯಾವುದೇ ಒಪ್ಪಂದವಿಲ್ಲದೇ ಅಂತ್ಯಗೊಂಡ ಅಲಾಸ್ಕ ಸಭೆ
ವಾಷಿಂಗ್ಟನ್: ಉಕ್ರೇನ್-ರಷ್ಯಾ ಸಂಘರ್ಷವನ್ನು (Russia Ukraine War) ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅಲಾಸ್ಕದಲ್ಲಿ ನಡೆಸಿದ ಸಭೆಯು (Alaska Summit) ಯಾವುದೇ ಅಂತಿಮ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿದೆ.
ಉಭಯ ನಾಯಕರ ನಡುವೆ ಅಂಕೊರೇಜ್‌ನಲ್ಲಿ ಅಮೆರಿಕದ ಸೇನಾ ಮೂಲಸೌಕರ್ಯವಿರುವ ಜಾಯಿಂಟ್ ಬೇಸ್ ಎಲೆಂಡಾರ್ಫ್–ರಿಚರ್ಡ್‌ಸನ್‌ನಲ್ಲಿ (JBER) ಸುಮಾರು ಮೂರು ಗಂಟೆ ಸಭೆ ನಡೆಯಿತು. ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿ ಕೇವಲ 12 ನಿಮಿಷಗಳಲ್ಲಿ ಮುಕ್ತಾಯಗೊಂಡಿತು. ಇದನ್ನೂ ಓದಿ: ವಿದೇಶಗಳಲ್ಲೂ ಪೊಲೀಸ್ ಸ್ಟೇಷನ್ – 53 ದೇಶಗಳಲ್ಲಿ ಚೀನಾದ ಕುತಂತ್ರ!
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್ (Donald Trump), ಅನೇಕ ಮಾತುಕತೆಗಳಿಗೆ ಒಪ್ಪಿಗೆ ಸೂಚಿಸಿದ್ದು, ಕೆಲವೇ ಕೆಲವು ಬಾಕಿ ಉಳಿದಿವೆ. ರಷ್ಯಾ ಜೊತೆಗೆ ಕೆಲವು ಬಗೆಹರಿಸಲಾಗದ ಸಮಸ್ಯೆಗಳಿವೆ. ಅಲ್ಲಿಗೆ ತಲುಪಲು ನಮಗೆ ಉತ್ತಮ ಅವಕಾಶವೂ ಇದೆ. ಅವೆಲ್ಲದರ ಒಪ್ಪಂದವಾಗುವವರೆಗೆ ಅಮೆರಿಕ ರಷ್ಯಾ ನಡುವೆ ಯಾವುದೇ ಒಪ್ಪಂದವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ಸ್ಥಗಿತ ಮುಂದುವರಿಸಿದ್ರೆ ಯುದ್ಧದಿಂದ ಹಿಂದೆ ಸರಿಯಲ್ಲ, ಇದು ಮೋದಿ ಸರ್ಕಾರಕ್ಕೆ ಸಂದೇಶ: ಬಿಲಾವಲ್ ಭುಟ್ಟೋ
ಮುಂದುವರಿದು.. ಪುಟಿನ್ ಜೊತೆ ಉಕ್ರೇನ್ ಕುರಿತ ಮಾತುಕತೆಯಲ್ಲಿ ಒಂದಿಷ್ಟು ಪ್ರಗತಿ ಕಂಡುಬಂದಿದೆ. ಆದ್ರೆ ಗುರಿ ಸಾಧನೆ ಆಗುವವರೆಗೆ ಸಂಪೂರ್ಣ ಒಪ್ಪಂದವಾಗವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಬಾಂಗ್ಲಾ ಸರಕುಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದ ಭಾರತ
ಇದೇ ಸಂದರ್ಭದಲ್ಲಿ ಪುಟಿನ್, ದೇಶದ ಭದ್ರತೆಗೆ ಆತಂಕವಿರುವುದರಿಂದ ಉಕ್ರೇನ್‌ಗೆ ಸಂಬಂಧಿಸಿದಂತೆ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಖಚಿತಪಡಿಸಿದರು. ಅಲ್ಲದೇ ಮಾತುಕತೆಯು ದೀರ್ಘಕಾಲೀನವಾಗಿಸಬೇಕಾದ್ರೆ, ಸಂಘರ್ಷಕ್ಕೆ ಕಾರಣವಾದ ಎಲ್ಲ ಅಂಶಗಳನ್ನೂ ಸರಿಪಡಿಸಬೇಕು ಎಂಬುದು ನಮಗೆ ಮನವರಿಕೆಯಾಗಿದೆ. ಆ ಮೂಲಕ, ಉಕ್ರೇನ್ ಮತ್ತು ಅದರ ಪ್ರದೇಶ ಪಶ್ಚಿಮದ ಭಾಗವಾಗುವುದನ್ನು ಒಪ್ಪಲಾಗದು ಎಂಬ ರಷ್ಯಾ ನಿಲುವನ್ನು ಪುನರುಚ್ಚರಿಸಿದ್ದಾರೆ.
ಆದಾಗ್ಯೂ ಟ್ರಂಪ್, ಎರಡೂ ದೇಶಗಳ ನಡುವಿನ ಯುದ್ಧ ಕೊನೆಗೊಳಿಸಲು ಒಂದು ಒಪ್ಪಂದ ಆಗುವವರೆಗೆ ಯಾವುದೇ ಒಪ್ಪಂದವಿಲ್ಲ ಎಂದು ಅವರು ಪುನರುಚ್ಚರಿಸಿದರು.