ನವದೆಹಲಿ: ಕೋವಿನ್ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಆಗಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ(Union Ministry of Health and Family Welfare) ಸ್ಪಷ್ಟನೆ ನೀಡಿದೆ.
ಕೋವಿನ್ ಬಳಕೆದಾರರ ಹೆಸರು, ಫೋನ್ ನಂಬರ್, ಕೊರೊನಾ ಪರೀಕ್ಷಾ ಫಲಿತಾಂಶ ಮತ್ತಿತರ ಮಾಹಿತಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಕೋವಿನ್ ಬಳಕೆದಾರರ ಯಾವ ಮಾಹಿತಿಯು ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ.
Advertisement
Advertisement
20,000ಕ್ಕೂ ಅಧಿಕ ಭಾರತೀಯರ ಕೊರೊನಾ ಸಂಬಂಧಿತ ಖಾಸಗಿ ಮಾಹಿತಿ ಆನ್ ಲೈನ್‌ನಲ್ಲಿ ಸೋರಿಕೆಯಾಗಿದ್ದು, ಕೆಲ ಜಾಲತಾಣಗಳಲ್ಲಿ ಈ ದಾಖಲೆಗಳ ಹೆಸರು, ಫೋನ್ ನಂಬರ್, ಕೊರೊನಾ ಪರೀಕ್ಷಾ ಫಲಿತಾಂಶ ಮತ್ತಿತರ ಮಾಹಿತಿ ಮಾರಾಟಕ್ಕೆ ಇಡಲಾಗಿದೆ ಎಂದು ದೂರಲಾಗಿತ್ತು.
Advertisement
Advertisement
ಭಾರತೀಯರ ಖಾಸಗಿ ಮಾಹಿತಿ ಸೋರಿಕೆ ಕುರಿತಾದ ವರದಿಗಳು ಸುಳ್ಳು ಎಂದಿರುವ ಆರೋಗ್ಯ ಸಚಿವಾಲಯ ಕೋವಿನ್ ಪೋರ್ಟಲ್‍ನಲ್ಲಿ ಭಾರತೀಯರ ವಿಳಾಸ ಮತ್ತು ಕೊರೊನಾ ಪರೀಕ್ಷಾ ಫಲಿತಾಂಶ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಮತ್ತು ಜಾಗೃತಿ ಮೂಡಿಸುವ ಮತ್ತು ಅದರ ಲಸಿಕೆ ಕಾರ್ಯಕ್ರಮದಲ್ಲಿ ಸರ್ಕಾರವು ಡಿಜಿಟಲ್ ತಂತ್ರಜ್ಞಾನಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕೋವಿಡ್-19 ಸಂಬಂಧಿತ ಸೇವೆಗಳು ಮತ್ತು ಮಾಹಿತಿಗಾಗಿ ಆರೋಗ್ಯ ಸೇತು ಅಪ್ಲಿಕೇಶನ್ ಬಳಸಲು ಸರ್ಕಾರಿ ಇಲಾಖೆಗಳಲ್ಲಿ ಜನರನ್ನು ಕಡ್ಡಾಯಗೊಳಿಸುತ್ತವೆ ಎಂದು ತಿಳಿಸಿದ್ದಾರೆ.