ಉಡುಪಿ: ನನಗೂ, ಚೈತ್ರಾ ಕುಂದಾಪುರ ಕೇಸ್‌ಗೂ (Chaiyra Kundapura) ಯಾವುದೇ ಸಂಬಂಧ ಇಲ್ಲದ ಘಟನೆ ಇದು. ಈ ಕುರಿತಂತೆ ಯಾವ ವಿಚಾರಣೆಗೂ ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ (Sunil Kumar) ಸ್ಪಷ್ಟಪಡಿಸಿದ್ದಾರೆ.
ಚೈತ್ರಾ ಆಡಿಯೋದಲ್ಲಿ ಸುನಿಲ್ ಕುಮಾರ್ ಹೆಸರು ಪ್ರಸ್ತಾಪಿಸಿರುವ ವಿಚರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ (BJP) ಹೆಸರಿನಲ್ಲಿ ಯಾರಿಗೆ ಯಾರು ಕೂಡ ಮೋಸ ಮಾಡಬಾರದು. ಸಿಸಿಬಿ ಅಧಿಕಾರಿಗಳು ಈಗಾಗಲೇ ಬಂಧಿಸಿರುವ ಯಾರ ಮುಖ ಪರಿಚಯ ನನಗೆ ಇಲ್ಲ. ನಾನು ಯಾರ ಜೊತೆಗೆ ನಾನು ಫೆÇೀನಲ್ಲಿ ಮಾತಾಡಿ ಕೂಡ ಇಲ್ಲ. ಆಕಸ್ಮಿಕವಾಗಿ ಶುಭ ಸಮಾರಂಭ ಕಾರ್ಯಕ್ರಮಗಳಲ್ಲೂ ಕೂಡ ಭೇಟಿ ಆಗಿಲ್ಲ ಎಂದರು.
Advertisement
Advertisement
ಬಿಜೆಪಿಯಲ್ಲಿ ಹಣದಿಂದ ಟಿಕೆಟ್ (BJP Ticket) ಸಿಗುತ್ತೆ ಅನ್ನೋದು ಒಂದು ಭ್ರಮೆ. ಹಣದಿಂದ ಟಿಕೆಟ್ ಸಿಗುತ್ತಿದ್ದರೆ ನಾನು ನಾಲ್ಕು ಬಾರಿ ಗೆದ್ದು ಬರುದಕ್ಕೆ ಸಾಧ್ಯ ಆಗುತ್ತಿರಲಿಲ್ಲ. ರಾಜಕಾರಣಿಗಳ ಹೆಸರು ಹೇಳಿ ಹಣದ ದುರುಪಯೋಗ ಮಾಡುತ್ತಾರೆ ಎಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಈ ಘಟನೆಯ ತಾರ್ಕಿಕ ಅಂತ್ಯಕ್ಕೆ ಪೊಲೀಸ್ ಇಲಾಖೆ ತೆಗೆದುಕೊಂಡು ಹೋಗಬೇಕು ಎಂದು ಶಾಸಕರು ಆಗ್ರಹಿಸಿದರು. ಇದನ್ನೂ ಓದಿ: ಚೈತ್ರಾ ಡೀಲ್ ಪ್ರಕರಣಕ್ಕೂ ಹಿರೇಹಡಗಲಿ ಶ್ರೀಮಠಕ್ಕೂ ಸಂಬಂಧವಿಲ್ಲ: ಸಣ್ಣ ಹಾಲಶ್ರೀ ಸ್ಪಷ್ಟನೆ
Advertisement
Advertisement
ಘಟನೆಯ ಹಿಂದೆ ಯಾರಿದ್ದಾರೆ, ಯಾರು ದುರುಪಯೋಗ ಮಾಡುತ್ತಾರೆ ಅಂತವರನ್ನ ಸಂಪೂರ್ಣವಾಗಿ ಮಟ್ಟ ಹಾಕಬೇಕು. ರಾಜಕಾರಣಿಯ ಹೆಸರು ಹೇಳಿ ಪಕ್ಷದ ಹೆಸರು ಹೇಳಿ ಹಣ ಸಂಗ್ರಹ ಮಾಡುವುದು ಯಾವ ಪಕ್ಷಕ್ಕೂ ಶೋಭೆ ತರುವುದಿಲ್ಲ. ಈ ಘಟನೆಯೇ ಅಂತ್ಯ ಆಗಬೇಕು ಅಂತಹ ಕ್ರಮವನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳಬೇಕು. ನನಗೆ ಯಾವುದೇ ಸಂಬಂಧ ಇಲ್ಲದ ಘಟನೆ ಇದು ಈ ಕುರಿತಂತೆ ಯಾವ ವಿಚಾರಣೆಗೂ ನಾನು ಸಿದ್ಧನಿದ್ದೇನೆ. ಇದರ ಹಿಂದೆ ಯಾರು ಯಾರು ಫೋನ್ ಸಂಪರ್ಕ (Phone Contact) ಮಾಡಿದ್ದಾರೆ ಅಂತವರನ್ನು ಮಟ್ಟ ಹಾಕಬೇಕು ಎಂದು ತಿಳಿಸಿದರು.
ಆಡೀಯೋದಲ್ಲೇನಿದೆ..?: ಚೈತ್ರಾ ಕುಂದಾಪುರ ಹಾಗೂ ಪ್ರಸಾದ್ ಬೈಂದೂರು (Prasad Baindoor) ನಡುವಿನ ಡೀಲ್ ಮಾತುಕತೆಯಲ್ಲಿ ಮಾಜಿ ಸಚಿವ ಸುನೀಲ್ ಹೆಸರು ಪ್ರಸ್ತಾಪ ಮಾಡಲಾಗಿದೆ. ಹಣ ಜಸ್ಟ್ ಕೊಟ್ಟು ಬಂದೆ ಎಂದು ಪ್ರಸಾದ್ ಹೇಳಿದಾಗ ಸುನೀಲ್ ಕುಮಾರ್ ಮನೆಗೆ ಹಣ ತೆಗೆದುಕೊಂಡು ಹೋಗಿರಬಹುದು ಅಂತ ಚೈತ್ರಾ ಕುಂದಾಪುರ ಹೇಳುತ್ತಾರೆ.
Web Stories