ನವದೆಹಲಿ: ಹಾರ್ಮುಜ್ ಜಲಸಂಧಿಯ(Strait of Hormuz) ಮೂಲಕ ಹಾದುಹೋಗಿರುವ ಭಾರತೀಯ ತೈಲ ಟ್ಯಾಂಕರ್‌ಗಳಿಗೆ (Indian Oil Tanker) ಇರಾನ್ ಯಾವುದೇ ಶುಲ್ಕವನ್ನು ವಿಧಿಸಿಲ್ಲ ಎಂದು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಭಾರತೀಯ ಹಡಗುಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ, ಈ ಬಗ್ಗೆ ನೀವು ಭಾರತ ಸರ್ಕಾರವನ್ನೇ ವಿಚಾರಿಸಬಹುದು ಎಂದು ಹೇಳುವ ಮೂಲಕ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್‌ಗೆ (Iran) ಟೋಲ್ ಪಾವತಿಸುವ ಹಡಗುಗಳನ್ನು ತಡೆಯುವುದಾಗಿ ಎಚ್ಚರಿಸಿದ ಬೆನ್ನಲ್ಲೇ ಫಥಾಲಿ ಅವರ ಈ ಹೇಳಿಕೆ ಪ್ರಕಟವಾಗಿದೆ.
#WATCH | Delhi: Dr Mohammad Fathali, Ambassador of the Islamic Republic of Iran to India, says, “Before the war, the Strait of Hormuz was open… They attacked us for 12 days, and after that, they accepted a ceasefire. And they announced that we were on the negotiation table.… pic.twitter.com/p3m97Lpm2b
— ANI (@ANI) April 13, 2026
ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಇರಾನ್ ಸಿದ್ಧತೆ ನಡೆಸುತ್ತಿದೆ ಮತ್ತು ಶೀಘ್ರದಲ್ಲೇ ಸಂಚಾರಕ್ಕಾಗಿ ಹೊಸ ಕಾರ್ಯವಿಧಾನವನ್ನು ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು. ಇದನ್ನೂ ಓದಿ: ಅಮೆರಿಕ-ಇರಾನ್ ಸಂಧಾನ ಯಶಸ್ವಿಯಾಗ್ತಿತ್ತು, ನೆತನ್ಯಾಹು 1 ಫೋನ್ ಕಾಲ್ ಎಲ್ಲವನ್ನ ಹಾಳುಮಾಡಿತು: ಇರಾನ್ ಹೊಸ ಬಾಂಬ್
#WATCH | Delhi: On Indian Ships passing through the Straits of Hormuz, Dr Mohammad Fathali, Ambassador of the Islamic Republic of Iran to India, says, “For Indian ships, you know that we have a good relation with the Indian government…We want good preparation for Indian… https://t.co/ErGCNEjXK9 pic.twitter.com/owDObXVpCe
— ANI (@ANI) April 13, 2026
ಸಮುದ್ರ ಕಾನೂನಿನ ಪ್ರಕಾರ (United Nations Convention on the Law of the Sea), ಯಾವುದೇ ದೇಶವು ಅಂತರರಾಷ್ಟ್ರೀಯ ಜಲಮಾರ್ಗದಲ್ಲಿ ಕೇವಲ ಸಂಚಾರಕ್ಕಾಗಿ ಶುಲ್ಕ ವಿಧಿಸುವಂತಿಲ್ಲ. ಒಂದು ವೇಳೆ ಇರಾನ್ ಟೋಲ್ ವಿಧಿಸಿದರೆ ಅದು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗುತ್ತದೆ.
ಇರಾನ್ ತನ್ನ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳಿಗೆ 2 ಮಿಲಿಯನ್ ಡಾಲರ್ (ಸುಮಾರು ₹17 ಕೋಟಿ) ಟೋಲ್ ವಿಧಿಸಲು ಮುಂದಾಗಿದೆ ಎಂಬ ಸುದ್ದಿಗಳು ಹಬ್ಬಿದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಪ್ರಕಟವಾಗಿದೆ.
ಭಾರತ ಮತ್ತು ಇರಾನ್ ನಡುವಿನ ಐತಿಹಾಸಿಕ ಮತ್ತು ರಾಜತಾಂತ್ರಿಕ ಸಂಬಂಧಗಳು ಉತ್ತಮವಾಗಿವೆ. ಚಾಬಹಾರ್ ಬಂದರಿನ ಅಭಿವೃದ್ಧಿಯಲ್ಲಿ ಭಾರತದ ಪಾತ್ರ ದೊಡ್ಡದಿದೆ. ಹೀಗಾಗಿ ಅಮೆರಿಕದ ಒತ್ತಡದ ನಡುವೆಯೂ ಭಾರತದ ತೈಲ ಹಡಗುಗಳಿಗೆ ಅಡೆತಡೆ ಉಂಟಾಗದಂತೆ ನೋಡಿಕೊಳ್ಳುವುದಾಗಿ ಇರಾನ್ ಭರವಸೆ ನೀಡಿದೆ.

