ನವದೆಹಲಿ: ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆಯಾಗಿದೆ ಎಂಬ ವರದಿ ತಪ್ಪಾಗಿದ್ದು, ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ ಎಂದು ಕೇಂದ್ರ ಸರ್ಕಾರ (Central Govt) ಸ್ಪಷ್ಟನೆ ನೀಡಿದೆ.
ಈ ಕುರಿತು ಇಂಡಿಯನ್ ಆಯಿಲ್ (Indian Oil) ಪೋಸ್ಟ್ ಹಂಚಿಕೊಂಡಿದ್ದು, ಎಲ್‌ಪಿಜಿ ರಿಫೀಲ್ ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆಗಳಾಗಿವೆ ಎಂಬ ವರದಿಗಳು ತಪ್ಪಾಗಿವೆ. ಸದ್ಯ ಜಾರಿಯಲ್ಲಿರುವ ಅವಧಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ದೇಶಾದ್ಯಂತ ಎಲ್‌ಪಿಜಿ ಸರಬರಾಜಿನಲ್ಲಿಯೂ ಯಾವುದೇ ಸಮಸ್ಯೆ ಇಲ್ಲ. ಸ್ಟಾಕ್ ಇದೆ ಎಂದು ತಿಳಿಸಿದೆ. ಇದನ್ನೂ ಓದಿ: ಇಂದಿನಿಂದ ಗ್ಯಾಸ್ ಬುಕ್ಕಿಂಗ್‌ಗೆ ಹೊಸ ನಿಯಮ – ಗಡುವು ಮುಗಿಯೋ ಮೊದಲೇ ಬುಕ್ ಮಾಡಿದ್ರೆ ಅಕೌಂಟ್ ಬ್ಲಾಕ್
There is no shortage of petrol or diesel.
Rumours circulating online can create unnecessary concern and disrupt normal supply patterns. IndianOil outlets are well-stocked and fully operational.
We urge citizens to avoid panic buying and rely only on verified information.… pic.twitter.com/xWc1L4BpUY
— Indian Oil Corp Ltd (@IndianOilcl) March 25, 2026
ಪಿಎಂಯುವೈ (ಉಜ್ವಲ್ ಗ್ಯಾಸ್) 45 ದಿನ, ನಗರ ಪ್ರದೇಶಕ್ಕೆ 25 ದಿನ ಹಾಗೂ ಗ್ರಾಮೀಣ ಭಾಗಕ್ಕೆ 45 ದಿನ ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ದಯವಿಟ್ಟು ಅಧಿಕೃತವಾಗಿ ಕಂಪನಿಗಳಿಂದ ಬರುವ ಮಾಹಿತಿಗಳ ಮೇಲೆ ಗಮನಹರಿಸಿ. ಗಾಬರಿಯಲ್ಲಿ ಗ್ಯಾಸ್ ಬುಕ್ ಮಾಡಬೇಡಿ ಎಂದು ಬರೆದುಕೊಂಡಿದೆ.

